ಚಿನ್ನದ ದರ ಇಳಿಕೆ 
ವಾಣಿಜ್ಯ

ಮಧ್ಯಪ್ರಾಚ್ಯ ಸಂಘರ್ಷ: ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ, 4300 ರುಪಾಯಿ ಇಳಿಕೆ

ಇಂದು ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 14,886 ರುಪಾಯಿಗಳಾಗಿದೆ. ಈ ಮೊದಲು ಜೂನ್ 06ರಂದು 24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ 3000 ರುಪಾಯಿ ಇಳಿಕೆ ಕಂಡಿತ್ತು.

ಬೆಂಗಳೂರು: ಇರಾನ್-ಅಮೆರಿಕ ಯುದ್ದ ಭೀತಿಯ ನಡುವೆಯೇ ಇಂದು ಚಿನ್ನದ ದರದಲ್ಲಿ ಭಾರಿ ಕುಸಿತವಾಗಿದ್ದು, 10 ಗ್ರಾಂ ಚಿನ್ನದ ದರದಲ್ಲಿ 4300 ರೂ ದರ ಕುಸಿತವಾಗಿದೆ.

ಬುಧವಾರ ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದ್ದು, 24 ಕ್ಯಾರೆಟ್ 10 ಗ್ರಾಮ್ ಚಿನ್ನದ ಮೇಲೆ ಇಂದು ಒಂದೇ ದಿನ ಬರೋಬ್ಬರಿ 4300 ರುಪಾಯಿ ಇಳಿಕೆ ಕಂಡಿದೆ. ಇದು ಜೂನ್ ತಿಂಗಳಿನಲ್ಲೇ ಚಿನ್ನದ ಬೆಲೆಯಲ್ಲಿ ಅತಿದೊಡ್ಡ ಕುಸಿತ ಎನಿಸಿಕೊಂಡಿದೆ.

ಅಂತೆಯೇ ಇಂದು ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 14,886 ರುಪಾಯಿಗಳಾಗಿದೆ. ಈ ಮೊದಲು ಜೂನ್ 06ರಂದು 24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ 3000 ರುಪಾಯಿ ಇಳಿಕೆ ಕಂಡಿತ್ತು.

ಆದರೆ ಇದೀಗ ಇಂದು 4300 ರುಪಾಯಿ ಇಳಿಕೆ ಕಂಡಿದೆ. 22 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ ಬರೋಬ್ಬರಿ 3950 ರುಪಾಯಿ ಇಳಿಕೆಯಾಗಿದೆ. ಇಂದು ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 13,645 ರುಪಾಯಿಗಳಾಗಿದೆ.

ಬೆಳ್ಳಿ ಬೆಲೆಯಲ್ಲೂ ಭಾರಿ ಕುಸಿತ

ಚಿನ್ನದ ದರ ಮಾತ್ರವಲ್ಲದೇ ಬೆಳ್ಳಿ ಬೆಲೆಯಲ್ಲೂ ಭಾರಿ ಕುಸಿತವಾಗಿದೆ. ಇದಷ್ಟೇ ಅಲ್ಲದೇ ಚಿನ್ನದ ಜತೆಜತೆಗೆ ಬೆಳ್ಳಿಯ ಬೆಲೆಯಲ್ಲೂ ಮಹಾ ಪತನವಾಗಿದೆ. ಇಂದು ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 10 ಸಾವಿರ ರುಪಾಯಿ ಇಳಿಕೆಯಾಗಿದೆ. ಈ ಮೂಲಕ ಒಂದು ಕೆಜಿ ಬೆಳ್ಳಿ ಬೆಲೆ 2,50,000 ರುಪಾಯಿಗಳಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತೃಣಮೂಲ ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆ: ಸಂಸದ ಸ್ಥಾನಕ್ಕೆ ಮಮತಾ ಆಪ್ತೆ ಸುಷ್ಮಿತಾ ದೇವ್ ರಾಜಿನಾಮೆ

ಹಣಕಾಸು ವರ್ಷ ಆರಂಭದ ಎರಡೇ ತಿಂಗಳಲ್ಲಿ ಶೇ 49ರಷ್ಟು ಆಸ್ತಿ ತೆರಿಗೆ ಗುರಿ ಸಾಧಿಸಿದ GBA; ₹2,933 ಕೋಟಿ ಸಂಗ್ರಹ!

ಸೇನಾ ಹೆಲಿಕಾಪ್ಟರ್ ಹೊಡೆದುರುಳಿಸಿದ ಇರಾನ್: ಟ್ರಂಪ್ ಘೋಷಣೆ ಬೆನ್ನಲ್ಲೇ ಅಮೆರಿಕದಿಂದ ವೈಮಾನಿಕ ದಾಳಿ!

ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ಏರ್ ಸ್ಟ್ರೈಕ್: 11 ಮಕ್ಕಳು ಸೇರಿದಂತೆ 13 ಜನರ ಸಾವು- ತಾಲಿಬಾನ್

ತ್ರಿಕೋನ ಏಕದಿನ ಸರಣಿ 2026: 4 ಎಸೆತಗಳಲ್ಲಿ 3 ವಿಕೆಟ್‌, ಕೊನೆಯ ಹಂತದಲ್ಲಿ ಹೈಡ್ರಾಮಾ, ಲಂಕಾದಿಂದ ಗೆಲುವು ಕಸಿದ ಭಾರತ!

SCROLL FOR NEXT