ಸಾಂದರ್ಭಿಕ ಚಿತ್ರ  
ವಾಣಿಜ್ಯ

ಇರಾನ್ ಯುದ್ಧ, ಗಲ್ಫ್ ದೇಶಗಳಲ್ಲಿ ಬಿಕ್ಕಟ್ಟು: ಕೈಗಾರಿಕಾ ಪೂರೈಕೆ ಡೀಸೆಲ್ ಬೆಲೆ ಏರಿಕೆ

ಸಾಮಾನ್ಯ ಡೀಸೆಲ್‌ನಂತೆ ಈ ಡೀಸೆಲ್ ನ್ನು ಚಿಲ್ಲರೆ ಮಾರಾಟಕ್ಕೆ ನೀಡುವುದಿಲ್ಲ; ಬದಲಾಗಿ ಕಾರ್ಖಾನೆಗಳು, ನಿರ್ಮಾಣ, ಗಣಿಗಾರಿಕೆ ಹಾಗೂ ವಿದ್ಯುತ್ ಉತ್ಪಾದನಾ ಘಟಕಗಳಿಗೆ ನೇರವಾಗಿ ಪೂರೈಸಲಾಗುತ್ತದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಇಂಡಸ್ಟ್ರಿಯಲ್ ಡೀಸೆಲ್ ದರವನ್ನು ಲೀಟರ್‌ಗೆ 87.67 ರೂಪಾಯಿಗಳಿಂದ 109.59 ರೂಪಾಯಿಗೆ ಹೆಚ್ಚಿಸಿದೆ. ಇಂಡಸ್ಟ್ರಿಯಲ್ ಡೀಸೆಲ್ ದರ 22 ರೂಪಾಯಿ ಏರಿಕೆಯಾಗಿದ್ದು, ಬೃಹತ್ ಪ್ರಮಾಣದ ಪೂರೈಕೆಯ ಇಂಧನದ ಮೇಲೆ ಅವಲಂಬಿತವಾಗಿರುವ ಕ್ಷೇತ್ರಗಳಿಗೆ ನೇರ ಪರಿಣಾಮ ಬೀರುತ್ತದೆ.

ಸಾಮಾನ್ಯ ಡೀಸೆಲ್‌ನಂತೆ ಈ ಡೀಸೆಲ್ ನ್ನು ಚಿಲ್ಲರೆ ಮಾರಾಟಕ್ಕೆ ನೀಡುವುದಿಲ್ಲ; ಬದಲಾಗಿ ಕಾರ್ಖಾನೆಗಳು, ನಿರ್ಮಾಣ, ಗಣಿಗಾರಿಕೆ ಹಾಗೂ ವಿದ್ಯುತ್ ಉತ್ಪಾದನಾ ಘಟಕಗಳಿಗೆ ನೇರವಾಗಿ ಪೂರೈಸಲಾಗುತ್ತದೆ. ಈ ಏರಿಕೆ, ಪ್ರೀಮಿಯಂ ಪೆಟ್ರೋಲ್ ದರದಲ್ಲಿ 2 ರೂಪಾಯಿಗೂ ಹೆಚ್ಚು ಏರಿಕೆಯ ನಂತರ ನಡೆದಿದ್ದು, ಜಾಗತಿಕ ಕಚ್ಚಾ ತೈಲದ ಅಸ್ಥಿರತೆಯಿಂದ ಉಂಟಾದ ವೆಚ್ಚದ ಒತ್ತಡವನ್ನು ಸೂಚಿಸುತ್ತದೆ.

ಗಲ್ಫ್ ರಾಷ್ಟ್ರಗಳಲ್ಲಿ ಸಂಘರ್ಷದಿಂದ ಜಾಗತಿಕ ಇಂಧನ ಸರಪಳಿ ಅಸ್ತವ್ಯಸ್ತ
ಅಮೆರಿಕಾ–ಇಸ್ರೇಲ್–ಇರಾನ್ ನಡುವಿನ ಸಂಘರ್ಷದಿಂದ ಸೌದಿ ಅರೇಬಿಯಾ, ಕತಾರ್ ಮತ್ತು ಇರಾನ್‌ನ ಪ್ರಮುಖ ತೈಲ ಮತ್ತು ಎಲ್ ಎನ್ ಜಿ ಸೌಲಭ್ಯಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳು ನಡೆದಿವೆ. ಇದರಿಂದ ಉತ್ಪಾದನೆ ಕುಂಠಿತಗೊಂಡಿದ್ದು, ಹಾರ್ಮುಜ್ ಕಣಿವೆಯ ಸಂಚಾರ ಬಹುತೇಕ ಸ್ಥಗಿತಗೊಂಡಿದೆ.

ಈ ಜಲಮಾರ್ಗದ ಮೂಲಕ ಜಾಗತಿಕ ತೈಲ ಮತ್ತು ಎಲ್ ಎನ್ ಜಿ ವ್ಯಾಪಾರದ ಸುಮಾರು 20 ಶೇಕಡಾ ಸಾಗುತ್ತದೆ. ಇದರ ಅಸ್ತವ್ಯಸ್ತತೆಯಿಂದ ಟ್ಯಾಂಕರ್‌ಗಳ ಸಂಚಾರ ವಿಳಂಬವಾಗಿದ್ದು, ಭದ್ರತಾ ಅಪಾಯಗಳು ಹೆಚ್ಚಿ, ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 100 ಡಾಲರ್ ಗೆ ಸಮೀಪಿಸಿದೆ. ಕತಾರ್‌ನ ರಾಸ್ ಲಫ್ಫಾನ್ ಎಲ್ ಎನ್ ಜಿ ಕೇಂದ್ರ ಮತ್ತು ಇರಾನ್‌ನ ಸೌತ್ ಪಾರ್ಸ್ ಅನಿಲ ಸ್ಥಾವರಕ್ಕೆ ಹಾನಿಯಾಗಿರುವುದು ದೀರ್ಘಕಾಲದ ಪೂರೈಕೆ ಸಂಕಷ್ಟದ ಭೀತಿಯನ್ನು ಹೆಚ್ಚಿಸಿದೆ.

ಉತ್ಪಾದನೆ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ವೆಚ್ಚದ ಒತ್ತಡ
ಕೈಗಾರಿಕಾ ಡೀಸೆಲ್ ದರ ಏರಿಕೆ ಹಾಗೂ ಅನಿಲ ಕೊರತೆ ಉತ್ಪಾದನಾ ಮತ್ತು ಮೂಲಸೌಕರ್ಯ ಕ್ಷೇತ್ರಗಳ ವೆಚ್ಚವನ್ನು ಹೆಚ್ಚಿಸಲಿವೆ. ಸಾರಿಗೆ ವೆಚ್ಚಗಳೂ ಏರಿಕೆಯಾಗಲಿವೆ. ಕೈಗಾರಿಕಾ ಅನಿಲದ ಮೇಲೆ ಹೆಚ್ಚು ಅವಲಂಬಿತವಾಗಿರುವ ವಾಹನೋದ್ಯಮಕ್ಕೆ (ಉದಾ: ಮಾರುತಿ ಸುಜುಕಿ – 74% ತೈಲ ಅವಲಂಬನೆ) ಕೆಲವು ವಾರಗಳಲ್ಲಿ ಉತ್ಪಾದನಾ ವ್ಯತ್ಯಯ ಕಾಣುವ ಸಾಧ್ಯತೆಯಿದೆ. ಗಲ್ಫ್ ದೇಶಗಳಲ್ಲಿ ಇದೇ ಉದ್ವಿಗ್ನತೆ ಮುಂದುವರಿದರೆ. ವಿಮಾನಯಾನ, ರಾಸಾಯನಿಕ ಮತ್ತು ಕೃಷಿ ಕ್ಷೇತ್ರಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಾರಿಗೆ, ವಿಮೆ ಮತ್ತು ಮೂಲಪದಾರ್ಥಗಳ ವೆಚ್ಚ ಹೆಚ್ಚುವಿಕೆಯಿಂದ ಲಾಭಾಂಶ ಕುಗ್ಗುವ ಸಾಧ್ಯತೆ ಇದೆ.

ಕಿರು ಅವಧಿಯಲ್ಲಿ ನಿರಾಳತೆ, ದೀರ್ಘಾವಧಿಯಲ್ಲಿ ಅಪಾಯಗಳು
ಭಾರತದಲ್ಲಿ ಚಿಲ್ಲರೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು 2022ರ ಏಪ್ರಿಲ್ ತಿಂಗಳಿನಿಂದ ಸ್ಥಿರವಾಗಿವೆ. ಗ್ರಾಹಕರ ಮೇಲೆ ನೇರ ಹೊರೆ ಬಾರದಂತೆ ತೈಲ ಮಾರಾಟ ಕಂಪನಿಗಳು ವೆಚ್ಚದ ಒತ್ತಡವನ್ನು ಭರಿಸುತ್ತಿವೆ.

ಪ್ರೀಮಿಯಂ ಇಂಧನದ ದರ ಏರಿಕೆ ಒಟ್ಟು ಮಾರಾಟದ 2–4 ಶೇಕಡಾದಷ್ಟು ಮಾತ್ರ ಪರಿಣಾಮ ಬೀರುತ್ತದೆ, ಆದ್ದರಿಂದ ತಕ್ಷಣದ ಸಾರ್ವಜನಿಕ ಪರಿಣಾಮ ಸೀಮಿತವಾಗಿರುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಗಲ್ಫ್ ಪ್ರದೇಶದಲ್ಲಿ ಇಂಧನ ಪೂರೈಕೆ ಅಸ್ತವ್ಯಸ್ತತೆ ಮುಂದುವರಿದರೆ, ದೀರ್ಘಕಾಲದ ಹೆಚ್ಚಿನ ಕಚ್ಚಾ ತೈಲದ ಬೆಲೆಗಳು ಚಿಲ್ಲರೆ ದರ ಏರಿಕೆಗೆ ಮತ್ತು ವಿಸ್ತೃತ ದರ ಏರಿಕೆಗೆ ಕಾರಣವಾಗಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

‘ನಮ್ಮಲ್ಲಿ ಹೆಚ್ಚುವರಿ ಕಚ್ಚಾ ತೈಲ ಲಭ್ಯವಿಲ್ಲ’: ಅಮೆರಿಕ ನಿರ್ಬಂಧ ಸಡಿಲಿಕೆ ಬೆನ್ನಲ್ಲೇ ಇರಾನ್ ಮಹತ್ವದ ಘೋಷಣೆ

West Asia war: ಶಾಂತಿ ಒಪ್ಪಂದಕ್ಕೆ ‘NO’ ಎಂದ ಟ್ರಂಪ್; ಖಾರ್ಗ್ ದ್ವೀಪದ ಮೇಲೆ ಅಮೆರಿಕಾ ಕಣ್ಣು; ದಾಳಿ ಭೀತಿ ಮತ್ತಷ್ಟು ಹೆಚ್ಚಳ..!

'ಕಾಂಗ್ರೆಸ್ ಒಂದು ಸಮದಾಯ ನೆಚ್ಚಿಕೊಂಡಿಲ್ಲ..' 'ಟಿಕೆಟ್ ಹಂಚಿಕೆ ಹೈಕಮಾಂಡ್ ನಿರ್ಧರಿಸುತ್ತೆ': Randeep Surjewala

'ಯಾರಿಗೆ ಟಿಕೆಟ್ ಕೊಟ್ಟರೂ ನಾಯಕರಿಂದ ಒಟ್ಟಾಗಿ ಕೆಲಸ ಮಾಡುವ ಭರವಸೆ: ಅಗತ್ಯಬಿದ್ರೆ ಸಮರ್ಥ್ ನಾಮಪತ್ರ ವಾಪಸ್'

IPL 2026: ಆರಂಭಕ್ಕೂ ಮೊದಲೇ KKRಗೆ ಆಘಾತ, ಪ್ರಮುಖ ವೇಗಿ ಟೂರ್ನಿಯಿಂದಲೇ ಔಟ್!

SCROLL FOR NEXT