ಸಾಂದರ್ಭಿಕ ಚಿತ್ರ  
ವಾಣಿಜ್ಯ

ಇರಾನ್‌ನ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ತಾತ್ಕಾಲಿಕ ಸ್ಥಗಿತ ಘೋಷಣೆ: ಷೇರುಮಾರುಕಟ್ಟೆ ಚೇತರಿಕೆ

ಸೆನ್ಸೆಕ್ಸ್‌ನ 30 ಕಂಪನಿಗಳಲ್ಲಿ ಇಂಟರ್‌ಗ್ಲೋಬ್ ಏವಿಯೇಷನ್, ಏಷಿಯನ್ ಪೇಂಟ್ಸ್, ಎಟರ್ನಲ್, ಅಡಾಣಿ ಪೋರ್ಟ್ಸ್, ಟ್ರೆಂಟ್ ಮತ್ತು ಲಾರ್ಸನ್ & ಟೂಬ್ರೋ ಪ್ರಮುಖ ಲಾಭಾಂಶ ಪಡೆದವು. ಪವರ್ ಗ್ರಿಡ್ ಮಾತ್ರ ಕುಸಿತ ಕಂಡುಬಂತು.

ಮುಂಬೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಇಂಧನ ಮೂಲಸೌಕರ್ಯಗಳ ಮೇಲೆ ನಡೆಸಲಾಗುತ್ತಿದ್ದ ದಾಳಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಾಗಿ ಘೋಷಿಸಿದ ಬಳಿಕ, ಜಾಗತಿಕ ಮಾರುಕಟ್ಟೆಗಳಲ್ಲಿ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಇಂದು ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಮರುಜೀವ ಪಡೆದುಕೊಂಡವು.

30 ಷೇರುಗಳನ್ನು ಒಳಗೊಂಡ ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 1,516 ಅಂಕಗಳಷ್ಟು ಏರಿಕೆ ಕಂಡು 74,212.47ಕ್ಕೆ ತಲುಪಿತು. 50 ಷೇರುಗಳ ಎನ್‌ಎಸ್‌ಇ ನಿಫ್ಟಿ 386.95 ಅಂಕಗಳಷ್ಟು ಏರಿಕೆ ಕಂಡು 22,899.60ಕ್ಕೆ ತಲುಪಿತು.

ಸೆನ್ಸೆಕ್ಸ್‌ನ 30 ಕಂಪನಿಗಳಲ್ಲಿ ಇಂಟರ್‌ಗ್ಲೋಬ್ ಏವಿಯೇಷನ್, ಏಷಿಯನ್ ಪೇಂಟ್ಸ್, ಎಟರ್ನಲ್, ಅಡಾಣಿ ಪೋರ್ಟ್ಸ್, ಟ್ರೆಂಟ್ ಮತ್ತು ಲಾರ್ಸನ್ & ಟೂಬ್ರೋ ಪ್ರಮುಖ ಲಾಭಾಂಶ ಪಡೆದವು. ಪವರ್ ಗ್ರಿಡ್ ಮಾತ್ರ ಕುಸಿತ ಕಂಡುಬಂತು.

ಡೊನಾಲ್ಡ್ ಟ್ರಂಪ್ ಅವರು ಸೋಷಿಯಲ್ ಮೀಡಿಯಾದಲ್ಲಿ, ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿಯ ನಡುವಿನ ಪ್ರಮುಖ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಇರಾನ್‌ಗೆ ನೀಡಿದ ಗಡುವನ್ನು ವಿಸ್ತರಿಸಿರುವುದಾಗಿ ಮತ್ತು ಇರಾನ್‌ನ ಇಂಧನ ಕೇಂದ್ರಗಳ ಮೇಲೆ ದಾಳಿಯನ್ನು ಐದು ದಿನಗಳ ಕಾಲ ಮುಂದೂಡಿರುವುದಾಗಿ ತಿಳಿಸಿದ್ದಾರೆ.

ಏಷ್ಯಾ ಮಾರುಕಟ್ಟೆಗಳು ಕೂಡ ಚೇತರಿಸಿಕೊಂಡಿದ್ದು, ದಕ್ಷಿಣ ಕೊರಿಯಾದ ಕೋಸ್ಪಿ, ಜಪಾನ್‌ನ ನಿಕ್ಕೈ 225, ಶಾಂಘೈಯ ಎಸ್‌ಎಸ್‌ಇ ಕಾಂಪೊಸಿಟ್ ಸೂಚ್ಯಂಕ ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೇಂಗ್ ಸೂಚ್ಯಂಕಗಳು ಲಾಭದ ಹಾದಿಯಲ್ಲಿ ಸಾಗಿವೆ. ಅಮೆರಿಕದ ಮಾರುಕಟ್ಟೆಯೂ ನಿನ್ನೆ ಏರಿಕೆಯಿಂದ ಮುಕ್ತಾಯಗೊಂಡಿತ್ತು.

ಡೊನಾಲ್ಡ್ ಟ್ರಂಪ್ ಅವರು ಇರಾನ್‌ನೊಂದಿಗೆ ಮಾತುಕತೆ ನಡೆಸಿರುವುದಾಗಿ ಹೇಳಿದ್ದು, ಇಂಧನ ಮೂಲಸೌಕರ್ಯಗಳ ಮೇಲೆ ದಾಳಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಾಗಿ ಘೋಷಿಸಿದ ನಂತರ ಜಾಗತಿಕ ಮಾರುಕಟ್ಟೆಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿವೆ.

ಈ ಬೆಳವಣಿಗೆ, ಕಚ್ಚಾ ತೈಲದ ಬೆಲೆಗಳನ್ನು ಹೆಚ್ಚಿಸಿ ಜನತೆಯಲ್ಲಿ ಭೀತಿ ಉಂಟುಮಾಡಿದ್ದ ಸಂಘರ್ಷವು ಇದೀಗ ತಗ್ಗುವ ಹಂತಕ್ಕೆ ಬರಬಹುದೆಂಬ ನಿರೀಕ್ಷೆಯನ್ನು ಹೆಚ್ಚಿಸಿದೆ ಎಂದು ಲೈವ್‌ಲಾಂಗ್ ವೆಲ್ತ್ ಸಂಸ್ಥೆಯ ಸಂಶೋಧನಾ ವಿಶ್ಲೇಷಕ ಮತ್ತು ಸ್ಥಾಪಕ ಹರಿಪ್ರಸಾದ್ ಕೆ ತಿಳಿಸಿದ್ದಾರೆ. ಆದರೆ ಪರಿಸ್ಥಿತಿ ಇನ್ನೂ ಸ್ಥಿರವಾಗಿಲ್ಲ ಎಂದರು.

ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆ ಕಂಡಿರುವುದರಿಂದ ಏಷ್ಯನ್ ಮಾರುಕಟ್ಟೆಗಳು ಇಂದು ಪ್ರಬಲವಾಗಿ ವಹಿವಾಟು ಆರಂಭಿಸಿದವು. ತೈಲದ ಬೆಲೆ ಇಳಿಕೆಯಿಂದ ತಕ್ಷಣದ ದರ ಏರಿಕೆ ಆತಂಕಗಳು ಕಡಿಮೆಯಾಗಿದ್ದು, ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಆಸಕ್ತಿ ಹೆಚ್ಚಾಗಿದೆ ಎಂದರು.

ಜಾಗತಿಕ ತೈಲದ ಮಾನದಂಡವಾದ ಬ್ರೆಂಟ್ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 4.16 ಶೇಕಡಾ ಏರಿಕೆಯಿಂದ 104.1 ಡಾಲರ್‌ಗೆ ವಹಿವಾಟು ನಡೆಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಂಪುಟ ಸಲಹೆ ಮೇರೆಗೆ KPSC ಅಧ್ಯಕ್ಷ ಸಾಹುಕಾರ್ ರನ್ನು ಮತ್ತೆ ಅಮಾನತು ಮಾಡಿದ ರಾಜ್ಯಪಾಲರು!

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

Chhattisgarh: ಹೊಲದಿಂದ ಮನೆಗೆ ಮರಳುತ್ತಿದ್ದ ಮಹಿಳೆಗೆ ಸಿಡಿಲು ಬಡಿದು ಸಾವು, Video

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!