ನವದೆಹಲಿ: ಜಾಗತಿಕ ಮಾರುಕಟ್ಟೆಗಳಲ್ಲಿ ಸದ್ಯ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಬೆಳವಣಿಗೆಗಳಿಂದಾಗಿ ಗುರುವಾರ ಬೆಳಿಗ್ಗೆ ಇಳಿಕೆ ಕಂಡುಬಂದ ಚಿನ್ನ, ಬೆಳ್ಳಿ ಅಭರಣಗಳ ಬೆಲೆಗಳು ಮಧ್ಯಾಹ್ನದ ಹೊತ್ತಿಗೆ ಏರಿಕೆಯಾಯಿತು.
ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಜೂನ್ 5 ರ ವಿತರಣೆಯ ಚಿನ್ನದ ಫ್ಯೂಚರ್‌ಗಳು ಶೇಕಡಾ 0.42 ರಷ್ಟು ಅಥವಾ 687 ರೂ. ನಷ್ಟು ಕುಸಿದು ಮಧ್ಯಾಹ್ನದ ಹೊತ್ತಿಗೆ 10 ಗ್ರಾಂ ಚಿನ್ನದ ಬೆಲೆ ಗರಿಷ್ಠ 1,59,319 ರೂ.ಗಳಿಗೆ ತಲುಪಿತು.
ನಂತರ ಹಳದಿ ಲೋಹ 606 ರೂ.ಅಥವಾ ಶೇ 0.38 ರಷ್ಟು ಕಡಿಮೆಯಾಗಿ ರೂ. 1,59,400 ನಲ್ಲಿ ವಹಿವಾಟು ನಡೆಸಿತು. ಅಂತಿಮವಾಗಿ 1,59,992 ರ ಗರಿಷ್ಠ ಮಟ್ಟವನ್ನು ತಲುಪಿತು.
ಬೆಳ್ಳಿ ಬೆಲೆಗಳು ಸಹ ಒತ್ತಡದಲ್ಲಿವೆ. ಜುಲೈ 3 ರ ವಿತರಣೆಯ MCX ಬೆಳ್ಳಿ ಫ್ಯೂಚರ್‌ಗಳು ಶೇಕಡಾ 1.4 ರಷ್ಟು ಅಥವಾ ರೂ 3,864 ರಷ್ಟು ಕುಸಿದು ಪ್ರತಿ ಕೆಜಿಗೆ ರೂ 2,70,401 ರ ಕನಿಷ್ಠ ಮಟ್ಟವನ್ನು ತಲುಪಿತು. ದಿನದ ಆರಂಭದಲ್ಲಿ ಚಿನ್ನ ಮತ್ತು ಬೆಳ್ಳಿ ಸರಕು ವಿನಿಮಯ ಕೇಂದ್ರದಲ್ಲಿ ಕ್ರಮವಾಗಿ ರೂ. 1,59,900 ಮತ್ತು ರೂ. 2,72,275 ಕ್ಕೆ ವಹಿವಾಟು ಆರಂಭಿಸಿದ್ದವು.
ವಿದೇಶಿ ಮಾರುಕಟ್ಟೆಗಳಲ್ಲಿಯೂ ಕುಸಿತ ಕಂಡುಬಂದಿದೆ. COMEX ಚಿನ್ನ ಶೇ. 0.21 ರಷ್ಟು ಕುಸಿದು ಪ್ರತಿ ಔನ್ಸ್‌ಗೆ $4,525.80 ಕ್ಕೆ ತಲುಪಿದ್ದರೆ, ಬೆಳ್ಳಿ ಶೇ. 1.06 ರಷ್ಟು ಕುಸಿದು ಪ್ರತಿ ಔನ್ಸ್‌ಗೆ $75.37 ಕ್ಕೆ ತಲುಪಿದೆ.
ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ 1 ಗ್ರಾಂನ ಚಿನ್ನದ ಬೆಲೆ ಇಂತಿದೆ
24 ಕ್ಯಾರೆಟ್ ಚಿನ್ನ: 16,023
22 ಕ್ಯಾರೆಟ್- 14,675
18 ಕ್ಯಾರೆಟ್ - 12,010
ಬೆಂಗಳೂರಿನಲ್ಲಿ ಇಂದಿನ ಒಂದು ಗ್ರಾಂ ಚಿನ್ನದ ಬೆಲೆ
24 ಕ್ಯಾರೆಟ್ - 15,993
22 ಕ್ಯಾರೆಟ್- 14, 660
18 ಕ್ಯಾರೆಟ್ - 11,995