ಶೀಘ್ರ UPI Paymentಗೂ ಶುಲ್ಕ? Online Desk
ವಾಣಿಜ್ಯ

ವರ್ತಕರ ಮನವಿಗೆ ಸ್ಪಂದಿಸಿದ ಕೇಂದ್ರ; ದೀಪಾವಳಿ ನಂತರವೇ UPI ಮರ್ಚೆಂಟ್ ಶುಲ್ಕ ಜಾರಿ

ಈ ಮುಂಚೆ ಅಕ್ಟೋಬರ್ 15 ರಿಂದ UPI ಮರ್ಚೆಂಟ್ ಶುಲ್ಕ ಜಾರಿಗೊಳಿಸಲು ನಿರ್ಧರಿಸಲಾಗಿತ್ತು. ಆದಾಗ್ಯೂ, ಇದು ಹಬ್ಬದ ಶಾಪಿಂಗ್ ಋತುವಿನಲ್ಲಿ ಗ್ರಾಹಕ ವೆಚ್ಚವು ಸಾಮಾನ್ಯವಾಗಿ ಹೆಚ್ಚಾಗುತ್ತದೆ.

ನವದೆಹಲಿ: UPI ವಹಿವಾಟುಗಳ ಮೇಲೆ ಶುಲ್ಕ ವಿಧಿಸುವ ಪ್ರಕ್ರಿಯೆಯನ್ನು ಮುಂದೂಡುವಂತೆ ವ್ಯಾಪಾರಿಗಳು ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ಕೇಂದ್ರ ಸರ್ಕಾರ, ಮರ್ಚೆಂಟ್ ಡಿಸ್ಕೌಂಟ್ ರೇಟ್(MDR) ಶುಲ್ಕವನ್ನು ದೀಪಾವಳಿಯ ನಂತರ ನವೆಂಬರ್ ಎರಡನೇ ವಾರದಲ್ಲಿ ಜಾರಿಗೊಳಿಸಲು ನಿರ್ಧರಿಸಿದೆ.

"ಹಬ್ಬದ ಋತುವನ್ನು ಗಮನದಲ್ಲಿಟ್ಟುಕೊಂಡು, UPI ಮತ್ತು ಸೇವೆಗಳ ಸ್ಟೀರಿಂಗ್ ಸಮಿತಿಯು ಆಯ್ದ ವ್ಯಕ್ತಿಯಿಂದ ವ್ಯಾಪಾರಿಗೆ (P2M) ನಡೆಯುವ ಯುಪಿಐ ವಹಿವಾಟುಗಳ ಮೇಲಿನ ಎಂಡಿಆರ್(MDR) ಅನ್ನು ದೀಪಾವಳಿ ಮುಗಿದ ತಕ್ಷಣ ಜಾರಿಗೆ ತರಲು ಯುಪಿಐ ಮತ್ತು ಸರ್ವೀಸಸ್ ಸ್ಟೀರಿಂಗ್ ಕಮಿಟಿ ನಿರ್ಧರಿಸಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ತಿಳಿಸಿದೆ.

ಈ ಮುಂಚೆ ಅಕ್ಟೋಬರ್ 15 ರಿಂದ UPI ಮರ್ಚೆಂಟ್ ಶುಲ್ಕ ಜಾರಿಗೊಳಿಸಲು ನಿರ್ಧರಿಸಲಾಗಿತ್ತು. ಆದಾಗ್ಯೂ, ಇದು ಹಬ್ಬದ ಶಾಪಿಂಗ್ ಋತುವಿನಲ್ಲಿ ಗ್ರಾಹಕ ವೆಚ್ಚವು ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಆದ್ದರಿಂದ, ಪಾವತಿ ಸಂಸ್ಥೆಗಳು ಮತ್ತು ಗ್ರಾಹಕರು ತಮ್ಮ ಸಿಸ್ಟಂಗಳನ್ನು ನವೀಕರಿಸಲು ಹೆಚ್ಚಿನ ಸಮಯ ನೀಡಲು ಮತ್ತು ಗೊಂದಲಗಳನ್ನು ತಪ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸೆಪ್ಟೆಂಬರ್‌ನಲ್ಲಿ ಯುಪಿಐ ಸ್ಟೀರಿಂಗ್ ಸಮಿತಿಯು. 2,000 ರೂ.ಗಿಂತ ಹೆಚ್ಚಿನ ವಹಿವಾಟುಗಳಿಗೆ ಯುಪಿಐ ಎಂಡಿಆರ್ ಅನ್ನು ಶೇಕಡಾ 0.4 ಕ್ಕೆ ನಿಗದಿಪಡಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪೆನ್ ಡ್ರೈವ್ ಸಲ್ಲಿಕೆ; ನ್ಯಾಯಾಂಗ ತನಿಖೆಗೆ ಆಗ್ರಹ!

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

ಬೆಂಗಳೂರಿನಲ್ಲಿ SIR ಪ್ರತಿಭಟನೆ ವೇಳೆ ಪೊಲೀಸ್ ಕ್ರಮ: ಮರು ಪರಿಶೀಲನೆಗೆ ಪ್ರಿಯಾಂಕ್ ಖರ್ಗೆ ಆದೇಶ!

ಪುಣೆ ಟೆಕ್ಕಿ ಆತ್ಮಹತ್ಯೆ: ಡೆತ್‌ನೋಟ್‌ ಪತ್ತೆ; ಸಂಬಳ, ತವರು ಮನೆಯ ಫ್ಲಾಟ್ ವರ್ಗಾಯಿಸುವಂತೆ ಅತ್ತೆ-ಮಾವ ಒತ್ತಡ!