ಹಬ್ಬದ ಸೀಸನ್‌ನಲ್ಲಿ ವ್ಯಾಪಾರಿಗಳಿಗೆ ಸಿಹಿ ಸುದ್ದಿ: ಅಕ್ಟೋಬರ್ 15 ರ ಹೊಸ MDR ಶುಲ್ಕ ನಿಯಮ ಮುಂದೂಡಿಕೆ ಸಾಧ್ಯತೆ?

UPI ವ್ಯಾಪಾರಿಗಳಿಗೆ ಬಿಗ್ ರಿಲೀಫ್: ಅಕ್ಟೋಬರ್ 15ರಿಂದ ಜಾರಿಗೆ ಬರಬೇಕಿದ್ದ ₹2,000 ಕ್ಕಿಂತ ಹೆಚ್ಚಿನ ಯುಪಿಐ ಮರ್ಚೆಂಟ್ ವಹಿವಾಟುಗಳ ಮೇಲಿನ 0.4% ಎಂಡಿಆರ್ (MDR - ಮರ್ಚೆಂಟ್ ಡಿಸ್ಕೌಂಟ್ ರೇಟ್) ವ್ಯಾಪಾರಿ ಶುಲ್ಕವನ್ನು ಮುಂದೂಡುವ ಸಾಧ್ಯತೆ ದಟ್ಟವಾಗಿದೆ. ಆ ಕುರಿತ ವರದಿ ಇಲ್ಲಿದೆ:
Big Relief For UPI Merchants as New MDR Fee Likely Postponed To 2027 Ahead Of Festive Season
ಹಬ್ಬದ ಸೀಸನ್‌ನಲ್ಲಿ ವ್ಯಾಪಾರಿಗಳಿಗೆ ಸಿಹಿ ಸುದ್ದಿAI Image
Updated on: 

ನವದೆಹಲಿ: ಅಕ್ಟೋಬರ್ 15ರಿಂದ ಜಾರಿಗೆ ಬರಬೇಕಿದ್ದ ₹2,000 ಕ್ಕಿಂತ ಹೆಚ್ಚಿನ ಯುಪಿಐ ಮರ್ಚೆಂಟ್ ವಹಿವಾಟುಗಳ ಮೇಲಿನ 0.4% ಎಂಡಿಆರ್ (MDR - ಮರ್ಚೆಂಟ್ ಡಿಸ್ಕೌಂಟ್ ರೇಟ್) ವ್ಯಾಪಾರಿ ಶುಲ್ಕವನ್ನು ಮುಂದೂಡುವ ಸಾಧ್ಯತೆ ದಟ್ಟವಾಗಿದೆ. ಹಬ್ಬದ ಸೀಸನ್‌ನ ವ್ಯಾಪಾರ ಹಾಗೂ ತಾಂತ್ರಿಕ ಸಿದ್ಧತೆಗಳ ಕಾರಣದಿಂದಾಗಿ ಈ ನಿಯಮವನ್ನು ಜನವರಿ 1, 2027 ರವರೆಗೆ ಮುಂದೂಡಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿವೆ. ಆ ಕುರಿತ ವರದಿ ಇಲ್ಲಿದೆ:

ಮುಂದೂಡಿಕೆಗೆ ಕಾರಣವೇನು?

ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ದೇಶಾದ್ಯಂತ ದಸರಾ, ದೀಪಾವಳಿ, ಕ್ರಿಸ್ಮಸ್ ಮುಂತಾದ ಪ್ರಮುಖ ಹಬ್ಬದ ದಿನಗಳಲ್ಲಿ ಹೆಚ್ಚಿನ ಮೌಲ್ಯದ ವ್ಯಾಪಾರಗಳು ನಡೆಯುತ್ತವೆ. ಈ ಸಮಯದಲ್ಲಿ ಶುಲ್ಕ ವಿಧಿಸಿದರೆ ವ್ಯಾಪಾರಿಗಳ ಲಾಭದ ಮೇಲೆ ಪರಿಣಾಮ ಬೀರಬಹುದು ಮತ್ತು ಗ್ರಾಹಕರ ಖರೀದಿ ಪ್ರವೃತ್ತಿಯ ಮೇಲೂ ಪರಿಣಾಮ ಬೀರಬಹುದು ಎಂದು ವ್ಯಾಪಾರಿ ಸಂಘಟನೆಗಳು ಕಳವಳ ವ್ಯಕ್ತಪಡಿಸಿದ್ದವು. ಜೊತೆಗೆ, ಪಾವತಿ ಆ್ಯಪ್‌ಗಳು ಮತ್ತು ಬ್ಯಾಂಕುಗಳು ತಮ್ಮ ಸಿಸ್ಟಮ್‌ಗಳನ್ನು ನವೀಕರಿಸಲು ಹೆಚ್ಚಿನ ಸಮಯಾವಕಾಶ ಕೋರಿವೆ. ಹಾಗಾಗಿಯೇ, ಎಂಡಿಆರ್ ನಿಯಮವನ್ನು ಜನವರಿ 1, 2027 ರವರೆಗೆ ಮುಂದೂಡಲು ಸರ್ಕಾರ ಗಂಭೀರ ಚಿಂತನೆ ನಡೆಸಿವೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಅಂತಿಮ ಆದೇಶ ಹೊರಬಿದ್ದಿಲ್ಲ.

ಸಾಮಾನ್ಯ ಗ್ರಾಹಕರಿಗೆ ಯಾವುದೇ ಶುಲ್ಕವಿಲ್ಲ

ಈ ಎಂಡಿಆರ್ ಶುಲ್ಕವು ಕೇವಲ ವ್ಯಾಪಾರಿಗಳಿಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು ಸಾಮಾನ್ಯ ಗ್ರಾಹಕರಿಗಲ್ಲ. ಅದರಂತೆ, ಗ್ರಾಹಕರು ಎಂದಿನಂತೆ ಉಚಿತವಾಗಿಯೇ ಯುಪಿಐ ಪಾವತಿ ಮಾಡಬಹುದು. ವ್ಯಾಪಾರಿಗಳು ಈ ಶುಲ್ಕವನ್ನು ಗ್ರಾಹಕರಿಂದ ವಸೂಲಿ ಮಾಡುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಜೊತೆಗೆ, ಸ್ನೇಹಿತರು ಅಥವಾ ಕುಟುಂಬದವರಿಗೆ ಹಣ ಕಳುಹಿಸುವ ಪೀರ್-ಟು-ಪೀರ್ (P2P) ವಹಿವಾಟುಗಳಿಗೆ ಯಾವುದೇ ಮಿತಿಯಿಲ್ಲದೆ ಸಂಪೂರ್ಣ ಉಚಿತವಾಗಿರಲಿದೆ.

Big Relief For UPI Merchants as New MDR Fee Likely Postponed To 2027 Ahead Of Festive Season
2,000 ಅಲ್ಲ 1 ಲಕ್ಷ ಪೇ ಮಾಡಿದರು ಫ್ರೀ ಫ್ರೀ ಫ್ರೀ! ಹಾಗಾದ್ರೆ, ಅಕ್ಟೋಬರ್ 15 ರಿಂದ ಜಾರಿಯಾಗ್ತಿರೋ ಹೊಸ ನಿಯಮದಲ್ಲಿ ಯಾರಿಗೆ ಶುಲ್ಕ? ಯಾರಿಗೆಲ್ಲಾ ವಿನಾಯಿತಿ?
Govt considers delaying UPI MDR fees rollout until January 2027
ಅಕ್ಟೋಬರ್ 15 ರ ಹೊಸ MDR ಶುಲ್ಕ ನಿಯಮ ಮುಂದೂಡಿಕೆ ಸಾಧ್ಯತೆ!AI Image

ಮುಂದುವರೆದು, ಸಣ್ಣ ವ್ಯಾಪಾರಿಗಳು ಮತ್ತು ₹2,000 ವರೆಗಿನ ಸಣ್ಣ ಮೌಲ್ಯದ ವ್ಯಾಪಾರಿ ವಹಿವಾಟುಗಳು (P2M) ಈ ನಿಯಮದಿಂದ ಹೊರಗುಳಿಯಲಿವೆ. ದೇಶದ ಒಟ್ಟು ಯುಪಿಐ ಮರ್ಚೆಂಟ್ ವಹಿವಾಟುಗಳಲ್ಲಿ ಶೇ. 95 ಕ್ಕೂ ಹೆಚ್ಚು ಭಾಗ ₹2,000 ಕ್ಕಿಂತ ಕಡಿಮೆ ಇರುವುದರಿಂದ ಸಣ್ಣ ವ್ಯಾಪಾರಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ.

ಹಾಗಾದ್ರೆ, ಯಾವ ವಹಿವಾಟಿಗೆ ಎಷ್ಟು ಶುಲ್ಕ?

  • ಸಾಮಾನ್ಯ ವ್ಯಾಪಾರಿಗಳಿಗೆ: ₹2,000 ಕ್ಕಿಂತ ಹೆಚ್ಚಿನ ಪಾವತಿಗಳಿಗೆ 0.4% ಶುಲ್ಕ (ಗರಿಷ್ಠ ಮಿತಿ ₹300).

  • ವಿಶೇಷ ವಿಭಾಗಗಳಿಗೆ: ರೈಲ್ವೆ, ಟೆಲಿಕಾಂ, ಇನ್ಶೂರೆನ್ಸ್ ಮತ್ತು ಇಂಧನ (Fuel) ಪಾವತಿಗಳಿಗೆ ₹2,000 ಕ್ಕಿಂತ ಹೆಚ್ಚಿನ ವಹಿವಾಟಿನ ಮೇಲೆ ಕೇವಲ ₹5 ನಿಗದಿತ ಶುಲ್ಕ ಅನ್ವಯಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com