BR Shetty ಕಂಪನಿ ದಿವಾಳಿಗೆ ಬ್ಯಾಂಕ್ ಆಫ್ ಬರೋಡಾ ವಂಚನೆಯೇ ಕಾರಣ? Online Desk
ವಾಣಿಜ್ಯ

BR Shetty ಸಾಮ್ರಾಜ್ಯ ಮುಳುಗಲು ಬ್ಯಾಂಕ್ ಆಫ್ ಬರೋಡಾ ವಂಚನೆಯೇ ಕಾರಣ? ಬರೋಬ್ಬರಿ 1.44 ಲಕ್ಷ ಕೋಟಿ ಪರಿಹಾರ ಕೋರಿ ಕೋರ್ಟ್ ಮೆಟ್ಟಿಲೇರಿದ ಕನ್ನಡಿಗ ಉದ್ಯಮಿ

ಯುಎಇ ಮೂಲದ ಕನ್ನಡಿಗ ಉದ್ಯಮಿ ಬಿ.ಆರ್. ಶೆಟ್ಟಿ ಅವರು ಸಾರ್ವಜನಿಕ ವಲಯದ ಬೃಹತ್ ಬ್ಯಾಂಕ್ ಆದ ಬ್ಯಾಂಕ್ ಆಫ್ ಬರೋಡಾ ಮತ್ತು ಇತರ ಅಧಿಕಾರಿಗಳ ವಿರುದ್ಧ 15 ಶತಕೋಟಿ ಡಾಲರ್ ನಷ್ಟ ಪರಿಹಾರ ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಮುಂಬೈ (ಮಹಾರಾಷ್ಟ್ರ): ಯುಎಇ ಮೂಲದ ಕನ್ನಡಿಗ ಉದ್ಯಮಿ, ಎನ್‌ಎಂಸಿ ಹೆಲ್ತ್‌ಕೇರ್ ಸಂಸ್ಥೆಯ ಸಂಸ್ಥಾಪಕ ಬಿ.ಆರ್. ಶೆಟ್ಟಿ (ಬಿ.ಆರ್. ರಘುರಾಮ್ ಶೆಟ್ಟಿ) ಅವರು ಸಾರ್ವಜನಿಕ ವಲಯದ ಬೃಹತ್ ಬ್ಯಾಂಕ್ ಆದ ಬ್ಯಾಂಕ್ ಆಫ್ ಬರೋಡಾ ಮತ್ತು ಇತರ ಅಧಿಕಾರಿಗಳ ವಿರುದ್ಧ 15 ಶತಕೋಟಿ ಡಾಲರ್ (ಸುಮಾರು ₹1.44 ಲಕ್ಷ ಕೋಟಿ) ನಷ್ಟ ಪರಿಹಾರ ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ವಾಣಿಜ್ಯ ಮೊಕದ್ದಮೆ ಹೂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಬಿ.ಆರ್. ಶೆಟ್ಟಿ ಮಾಡಿರುವ ಗಂಭೀರ ಆರೋಪಗಳೇನು?

ಗಲ್ಫ್ ರಾಷ್ಟ್ರಗಳಲ್ಲೇ ಅತ್ಯಂತ ಬಲಿಷ್ಠ ಖಾಸಗಿ ಆಸ್ಪತ್ರೆ ಜಾಲ ಹೊಂದಿದ್ದ ತಮ್ಮ ಎನ್‌ಎಂಸಿ ಹೆಲ್ತ್ ಸಂಸ್ಥೆಯು 2020ರಲ್ಲಿ ದಿವಾಳಿಯಾಗಲು ಬ್ಯಾಂಕ್ ಆಫ್ ಬರೋಡಾದ ಹಾಲಿ ಮತ್ತು ಮಾಜಿ ಅಧಿಕಾರಿಗಳು ಎಸಗಿದ ವಂಚನೆಯೇ ಮುಖ್ಯ ಕಾರಣ ಎಂದು ಬಿ.ಆರ್. ಶೆಟ್ಟಿ ದಾವೆಯಲ್ಲಿ ಉಲ್ಲೇಖಿಸಿದ್ದಾರೆ. ಅವರ ಪ್ರಕಾರ, ಬ್ಯಾಂಕಿನ ಅಧಿಕಾರಿಗಳು ಮಾಜಿ ಕಾರ್ಯನಿರ್ವಾಹಕರೊಂದಿಗೆ ಸೇರಿ ಹಣವನ್ನು ಬೇರೆಡೆಗೆ ವರ್ಗಾಯಿಸಲು ನೆರವಾಗಿದ್ದಾರೆ. ಜೊತೆಗೆ, ಮನಿ ಲಾಂಡರಿಂಗ್ ತಡೆ ನಿಯಮಾವಳಿಗಳ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ, ತಮ್ಮ ನಕಲಿ ಸಹಿಗಳಿದ್ದ ವೈಯಕ್ತಿಕ ಗ್ಯಾರಂಟಿ ದಾಖಲೆಗಳನ್ನು ಬ್ಯಾಂಕ್ ಅಂಗೀಕರಿಸಿದೆ ಎಂದು ಶೆಟ್ಟಿ ವಾದಿಸಿದ್ದಾರೆ. ಹಾಗಾಗಿ, ಬಿ.ಆರ್. ಶೆಟ್ಟಿ ಅವರು, ನೇರ ನಷ್ಟಕ್ಕೆ ಪರಿಹಾರವಾಗಿ 5 ಶತಕೋಟಿ ಡಾಲರ್, ಪರೋಕ್ಷ ನಷ್ಟಕ್ಕೆ ಪರಿಹಾರವಾಗಿ 5 ಶತಕೋಟಿ ಡಾಲರ್ ಜೊತೆಗೆ ವೈಯಕ್ತಿಕ ಘನತೆ ಹಾಗೂ ಪ್ರತಿಷ್ಠೆಗೆ ಉಂಟಾದ ಧಕ್ಕೆಗೆ ಬ್ಯಾಂಕ್ ಆಫ್ ಬರೋಡಾದಿಂದ ಮಾತ್ರ 5 ಶತಕೋಟಿ ಡಾಲರ್ ನಂತೆ ಒಟ್ಟು 15 ಶತಕೋಟಿ ಡಾಲರ್ ಪರಿಹಾರದ ಬೇಡಿಕೆ ಇಟ್ಟಿದ್ದಾರೆ. ಇದರೊಂದಿಗೆ, ವಾರ್ಷಿಕ ಶೇ. 18ರಷ್ಟು ಬಡ್ಡಿಯನ್ನೂ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. 

ಹಾಗಾದ್ರೆ, ಈ ಹಿನ್ನೆಲೆ ಏನು?

2020ರಲ್ಲಿ ಎನ್‌ಎಂಸಿ ಹೆಲ್ತ್‌ಕೇರ್ ಸಂಸ್ಥೆಯು ಸುಮಾರು 6.6 ಬಿಲಿಯನ್ ಡಾಲರ್ ಸಾಲದ ಹಗರಣದ ಬಳಿಕ ದಿವಾಳಿ ಪ್ರಕ್ರಿಯೆಗೆ ಒಳಗಾಗಿತ್ತು. ಇತ್ತೀಚೆಗಷ್ಟೇ (ಜುಲೈ 2026 ರಲ್ಲಿ), ಈ ವಿವಾದ ಇತ್ಯರ್ಥಕ್ಕೆ ಬ್ಯಾಂಕ್ ಆಫ್ ಬರೋಡಾ ಯಾವುದೇ ತಪ್ಪು ಒಪ್ಪಿಕೊಳ್ಳದೇ ಒಟ್ಟು 600 ಮಿಲಿಯನ್ ಡಾಲರ್ (ಸುಮಾರು ₹5,700 ಕೋಟಿ) ಪಾವತಿಸಲು ಒಪ್ಪಂದ ಮಾಡಿಕೊಂಡಿತ್ತು. ಆದರೆ ತಾನು ಆ ಒಪ್ಪಂದದ ಭಾಗವಾಗಿರಲಿಲ್ಲ ಎಂದು ಬಿ.ಆರ್. ಶೆಟ್ಟಿ ಈಗ ಹೊಸದಾಗಿ ಈ ಬೃಹತ್ ದಾವೆ ಹೂಡಿದ್ದಾರೆ.

ಮುಂದುವರೆದು, ಈ ಭಾರಿ ಮೊತ್ತದ ದಾವೆಗೆ ಸಂಬಂಧಿಸಿದಂತೆ ಷೇರು ಮಾರುಕಟ್ಟೆಗಳಿಗೆ ಸ್ಪಷ್ಟನೆ ನೀಡಿರುವ ಬ್ಯಾಂಕ್ ಆಫ್ ಬರೋಡಾ, ತಮಗೆ ಇಂತಹ ಯಾವುದೇ ಮೊಕದ್ದಮೆಯ ಅಧಿಕೃತ ನೋಟಿಸ್ ಇನ್ನು ತಲುಪಿಲ್ಲ ಎಂದು ಹೇಳಿದೆ. ಜೊತೆಗೆ, ಬಿ.ಆರ್. ಶೆಟ್ಟಿ ಅವರೇ ಬ್ಯಾಂಕ್‌ಗೆ ಸುಮಾರು ₹2,800 ಕೋಟಿ ಬಾಕಿ ಉಳಿಸಿಕೊಂಡಿದ್ದು, ಭಾರತ ಮತ್ತು ಯುಎಇನಲ್ಲಿ ಅವರ ವಿರುದ್ಧ ವಸೂಲಾತಿ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಅಲ್ಲದೆ ಕರ್ನಾಟಕ ಹೈಕೋರ್ಟ್ ಈಗಾಗಲೇ ಶೆಟ್ಟಿ ಅವರ ಆಸ್ತಿ ವಿಲೇವಾರಿಗೆ ತಡೆ ನೀಡಿದೆ ಎಂದು ಬ್ಯಾಂಕ್ ನೆನಪಿಸಿದೆ. ಇದೇ ರೀತಿಯ ಆರೋಪಗಳೊಂದಿಗೆ ನ್ಯೂಯಾರ್ಕ್‌ನಲ್ಲಿ ಹೂಡಲಾಗಿದ್ದ ಮೊಕದ್ದಮೆಯನ್ನು ಜುಲೈ 2024 ರಲ್ಲಿ ನ್ಯಾಯಾಲಯ ವಜಾಗೊಳಿಸಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.

ಏತನ್ಮಧ್ಯೆ, ಈ ಸುದ್ದಿಯ ಬೆನ್ನಲ್ಲೇ ಹೂಡಿಕೆದಾರರಲ್ಲಿ ಆತಂಕ ಮೂಡಿದ್ದು, ಷೇರು ಮಾರುಕಟ್ಟೆಯಲ್ಲಿ ಬ್ಯಾಂಕ್ ಆಫ್ ಬರೋಡಾ ಷೇರುಗಳು ನಿಫ್ಟಿ 100 ಸೂಚ್ಯಂಕದಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಿದ ಷೇರು ಎನಿಸಿಕೊಂಡಿತು. ಅದರಂತೆ, ಈ ಆಘಾತಕಾರಿ ಬೆಳವಣಿಗೆಯಿಂದಾಗಿ ಅಕ್ಟೋಬರ್ 14, 2026 ರಂದು ಬ್ಯಾಂಕ್ ಆಫ್ ಬರೋಡಾ ಷೇರು ಬೆಲೆ ₹230.45 ರ ಇಂಟ್ರಾಡೇ ಕನಿಷ್ಠ ಮಟ್ಟಕ್ಕೆ ತಲುಪಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿ.ಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ; ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!