ಮೊಬೈಲ್ ಸ್ಕ್ರೀನ್ ಮೇಲೆ ಬರಲಿದೆ ಕರೆ ಮಾಡಿದವರ ಅಸಲಿ ಹೆಸರು! Online Desk
ವಾಣಿಜ್ಯ

ಇನ್ಮುಂದೆ ಅಪರಿಚಿತ ಕರೆಗಳಿಗೆ ಬೀಳಲಿದೆ ಬ್ರೇಕ್: ಮೊಬೈಲ್ ಸ್ಕ್ರೀನ್ ಮೇಲೆ ಬರಲಿದೆ ಕರೆ ಮಾಡಿದವರ ಅಸಲಿ ಹೆಸರು!

ಕೆಲವೊಮ್ಮೆ ಕಾಲ್ ಬರುತ್ತೆ, ಆದರೆ, ಆ ನಂಬರ್ ನಮ್ಮ ಹತ್ರ ಸೇವ್ ಮಾಡಿಲ್ಲದ ಕಾರಣ, ಕಾಲ್ ಯಾರು ಮಾಡಿದ್ದು ಎಂದು ಗೊತ್ತಾಗದೇ, ಕರೆಯನ್ನ ಸ್ವೀಕರಿಸಬೇಕಾ? ಬೇಡವಾ? ಎಂದು ಕ್ಷಣಕಾಲ ಯೋಚನೆ ಮಾಡುತ್ತೇವೆ! ಆದರೆ, ಈ ಯೋಚನಗೆ ಇನ್ಮೇಲೆ ಬೀಳಲಿದೆ ಬ್ರೇಕ್. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ಮೊಬೈಲ್ ರಿಂಗ್ ಆದಾಗ ಸ್ಕ್ರೀನ್ ಮೇಲೆ ಅಪರಿಚಿತ ಸಂಖ್ಯೆ ಕಂಡರೆ, ಇದು ಯಾರ ಕಾಲ್ ಇರಬಹುದು, ರಿಸೀವ್ ಮಾಡಬೇಕಾ ಬೇಡವಾ ಎನ್ನುವ ಗೊಂದಲ ಇನ್ಮುಂದೆ ಇರುವುದಿಲ್ಲ. ಸೈಬರ್ ವಂಚನೆ, ನಕಲಿ ಕರೆಗಳು ಹಾಗೂ ಅನಗತ್ಯ ಸ್ಪ್ಯಾಮ್ ಕಿರಿಕಟ್ಟೆಗೆ ಶಾಶ್ವತ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತರುತ್ತಿದೆ. ಇನ್ಮುಂದೆ ಅಪರಿಚಿತ ನಂಬರ್‌ನಿಂದ ಕಾಲ್ ಬಂದರೂ ಕರೆ ಮಾಡುವವರ ಕೆವೈಸಿ ಆಧಾರಿತ ಅಧಿಕೃತ ಹೆಸರು ನಿಮ್ಮ ಸ್ಕ್ರೀನ್ ಮೇಲೆ ನೇರವಾಗಿ ಪ್ರದರ್ಶನವಾಗಲಿದೆ. ಆ ಕುರಿತ ವರದಿ ಇಲ್ಲಿದೆ:

ಭಾರತದಲ್ಲಿ ಅಪರಿಚಿತ ಮೊಬೈಲ್ ಸಂಖ್ಯೆಗಳಿಂದ ಬರುವ ಕರೆಗಳನ್ನು ಸುಲಭವಾಗಿ ಗುರುತಿಸಲು ಕೇಂದ್ರ ಸರ್ಕಾರವು Calling Name Presentation (CNAP) ಎಂಬ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಅದರಂತೆ, ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯು ದೇಶದ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ನವೆಂಬರ್ 1, 2026 ರಿಂದ ಈ ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ಆದೇಶಿಸಿದೆ.

KYC ಆಧಾರಿತ ಹೆಸರು ಪ್ರದರ್ಶನ

ಟ್ರೂಕಾಲರ್‌ನಂತಹ ಥರ್ಡ್-ಪಾರ್ಟಿ ಆ್ಯಪ್‌ಗಳಂತೆ ಗ್ರಾಹಕರು ನೀಡಿದ ಹೆಸರಲ್ಲದೆ, ಸಿಮ್ ಕಾರ್ಡ್ ಖರೀದಿಸುವಾಗ ಸಲ್ಲಿಕೆಯಾದ ಅಧಿಕೃತ KYC ದಾಖಲೆಗಳಲ್ಲಿರುವ ನೈಜ ಹೆಸರು ಮೊಬೈಲ್ ಸ್ಕ್ರೀನ್ ಮೇಲೆ ಪ್ರದರ್ಶನವಾಗುತ್ತದೆ. ಹಾಗಾಗಿ, ಈ ವೈಶಿಷ್ಟ್ಯವು ನೆಟ್‌ವರ್ಕ್ ಮಟ್ಟದಲ್ಲೇ ಕಾರ್ಯನಿರ್ವಹಿಸುವುದರಿಂದ ಫೋನ್‌ಗಳಲ್ಲಿ ಯಾವುದೇ ಪ್ರತ್ಯೇಕ ಆ್ಯಪ್ ಇನ್‌ಸ್ಟಾಲ್ ಮಾಡುವ ಅಥವಾ ಇಂಟರ್ನೆಟ್ ಸಂಪರ್ಕ ಹೊಂದುವ ಅಗತ್ಯವಿರುವುದಿಲ್ಲ. ಏತನ್ಮಧ್ಯೆ, ಮೊದಲ ಹಂತದಲ್ಲಿ ಈ ಸೌಲಭ್ಯವು 4G ಮತ್ತು 5G ಗ್ರಾಹಕರಿಗೆ ಬೈ-ಡಿಫಾಲ್ಟ್ (ಸ್ವಯಂಚಾಲಿತವಾಗಿ) ಸಕ್ರಿಯಗೊಳ್ಳಲಿದೆ. 2G ಮತ್ತು 3G ನೆಟ್‌ವರ್ಕ್‌ಗಳಿಗೆ ಇದನ್ನು ವಿಸ್ತರಿಸುವ ಬಗ್ಗೆ ಸರ್ಕಾರ ಪ್ರತ್ಯೇಕವಾಗಿ ಪರಿಶೀಲಿಸಲಿದೆ. ಇದರೊಂದಿಗೆ, ವಿದೇಶಗಳಿಂದ ಬರುವ ಕರೆಗಳಿಗೆ ಯಾವುದೇ ಹೆಸರು ಪ್ರದರ್ಶನವಾಗುವುದಿಲ್ಲ. ಬದಲಿಗೆ ಮೊಬೈಲ್ ಪರದೆಯ ಮೇಲೆ ಕಡ್ಡಾಯವಾಗಿ "International Call" ಎಂದು ಮಾತ್ರ ಲೇಬಲ್ ಕಾಣಿಸಲಿದೆ.

ಮುಂದುವರೆದು, ಕಂಪನಿಗಳು ಅಥವಾ ವಾಣಿಜ್ಯ ಸಂಸ್ಥೆಗಳು ಗ್ರಾಹಕರಿಗೆ ಕರೆ ಮಾಡುವಾಗ ತಮ್ಮ ಅಧಿಕೃತ ಕಂಪನಿಯ ಹೆಸರನ್ನು ಪ್ರದರ್ಶಿಸಲು 'Preferred Name' ಆಯ್ಕೆಯನ್ನು ಬಳಸಬಹುದು. ಆದರೆ, ಆ ಹೆಸರು ಅವರ ಜಿಎಸ್ಟಿ ಪೋರ್ಟಲ್ ಅಥವಾ ನೋಂದಾಯಿತ ಟ್ರೇಡ್‌ಮಾರ್ಕ್‌ಗೆ ಕಡ್ಡಾಯವಾಗಿ ಹೊಂದಿಕೆಯಾಗಬೇಕಾಗುತ್ತದೆ.

ಒಟ್ಟಾರೆಯಾಗಿ, ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಅಥವಾ ಇನ್ಯಾವುದೋ ಹೆಸರಿನಲ್ಲಿ ಕರೆ ಮಾಡಿ ಸಾರ್ವಜನಿಕರನ್ನು ವಂಚಿಸುವ ಸೈಬರ್ ಅಪರಾಧ ಹಾಗೂ ಸ್ಪ್ಯಾಮ್ ಕರೆಗಳಿಗೆ ಬ್ರೇಕ್ ಹಾಕಲು ಈ ಕ್ರಮ ಸಹಕಾರಿಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಸ್ಟಿಂಗ್‌ ಆಪರೇಷನ್‌ ರೂವಾರಿ, ರೌಡಿಶೀಟರ್‌ ಫೋಟೋ ರಿಲೀಸ್‌ ಮಾಡಿದ ಕುಮಾರಸ್ವಾಮಿ!

ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ? ಮನೆ ಮುಂದೆ ಯುವತಿ ಪ್ರತಿಭಟನೆ!-Video

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!