UPI, RuPay ಬಳಕೆದಾರರಿಗೆ ಕೇಂದ್ರದಿಂದ ಸಿಹಿಸುದ್ದಿ AI Image
ವಾಣಿಜ್ಯ

UPI, RuPay ಬಳಕೆದಾರರಿಗೆ ಕೇಂದ್ರದಿಂದ ಸಿಹಿಸುದ್ದಿ: ₹2,000 ವರೆಗಿನ ಪಾವತಿಗೆ ಇನ್ಮುಂದೆ ಯಾವುದೇ ಶುಲ್ಕವಿಲ್ಲ!

ಕೇಂದ್ರ ಹಣಕಾಸು ಸಚಿವಾಲಯವು 2,000 ರೂಪಾಯಿ ವರೆಗಿನ ಎಲ್ಲಾ ಯುಪಿಐ ವಹಿವಾಟುಗಳು ಹಾಗೂ ರೂಪೇ ಡೆಬಿಟ್ ಕಾರ್ಡ್ ಪಾವತಿಗಳಿಗೆ ಯಾವುದೇ ಬ್ಯಾಂಕ್ ಶುಲ್ಕ ವಿಧಿಸುವಂತಿಲ್ಲ ಎಂದು ಮಹತ್ವದ ಅಧಿಕೃತ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯವು 2,000 ರೂಪಾಯಿ ವರೆಗಿನ ಎಲ್ಲಾ ಯುಪಿಐ ವಹಿವಾಟುಗಳು ಹಾಗೂ ರೂಪೇ ಡೆಬಿಟ್ ಕಾರ್ಡ್ ಪಾವತಿಗಳಿಗೆ ಯಾವುದೇ ಬ್ಯಾಂಕ್ ಶುಲ್ಕ ವಿಧಿಸುವಂತಿಲ್ಲ ಎಂದು ಮಹತ್ವದ ಅಧಿಕೃತ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಪೇಮೆಂಟ್ ಆಂಡ್ ಸೆಟಲ್‌ಮೆಂಟ್ ಸಿಸ್ಟಮ್ಸ್ ಆಕ್ಟ್ ಅಡಿಯಲ್ಲಿ ತರಲಾದ ಈ ಮಹತ್ವದ ತಿದ್ದುಪಡಿಯು ಇನ್ಮುಂದೆ ಸಣ್ಣ ಮೊತ್ತದ ಡಿಜಿಟಲ್ ಪಾವತಿಗಳನ್ನು ಸಂಪೂರ್ಣವಾಗಿ ಉಚಿತವಾಗಿರಿಸಲು ಕಾನೂನುಬದ್ಧ ರಕ್ಷಣೆ ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ಗ್ರಾಹಕರಿಗೆ ಸಂಪೂರ್ಣ ಉಚಿತ:

ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯವು ಪೇಮೆಂಟ್ ಆಂಡ್ ಸೆಟಲ್ಮೆಂಟ್ ಸಿಸ್ಟಮ್ಸ್ ಆಕ್ಟ್, 2007 ಅಡಿಯಲ್ಲಿ ಹೊಸ ಬದಲಾವಣೆಯನ್ನು ತಂದಿದ್ದು, ಅದರ ಪ್ರಕಾರ, ನಿಗದಿಪಡಿಸಲಾದ ಎಲೆಕ್ಟ್ರಾನಿಕ್ ಪಾವತಿ ವಿಧಾನಗಳನ್ನು (UPI ಮತ್ತು RuPay) ಬಳಸಿಕೊಂಡು ₹2,000 ವರೆಗಿನ ಹಣ ಪಾವತಿಸುವ ಅಥವಾ ಸ್ವೀಕರಿಸುವ ಯಾವುದೇ ವ್ಯಕ್ತಿಯಿಂದ ಯಾವುದೇ ಬ್ಯಾಂಕ್ ಆಗಲಿ ಅಥವಾ ಪಾವತಿ ಸೇವೆ ಒದಗಿಸುವ ಸಂಸ್ಥೆಯಾಗಲಿ (Google Pay, PhonePe ಇತ್ಯಾದಿ) ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಶುಲ್ಕವನ್ನು ವಿಧಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಮುಂದುವರೆದು, ಇಂದಿನ ದೈನಂದಿನ ಜೀವನದಲ್ಲಿ ಸಾರ್ವಜನಿಕರು ಮತ್ತು ಸಣ್ಣ ಅಂಗಡಿಯವರು ನಡೆಸುವ ಬಹುತೇಕ ವ್ಯವಹಾರಗಳು ₹2,000 ಒಳಗಿನದ್ದೇ ಆಗಿರುತ್ತವೆ. ಅದರಲ್ಲೂ, ಸರ್ಕಾರದ ಅಂಕಿ-ಅಂಶಗಳ ಪ್ರಕಾರ, 2025-26ನೇ ಹಣಕಾಸು ವರ್ಷದಲ್ಲಿ ನಡೆದ ವ್ಯಕ್ತಿಯಿಂದ ವ್ಯಾಪಾರಿಗೆ (P2M) ಪಾವತಿಗಳ ಪೈಕಿ ಕೇವಲ ಶೇಕಡಾ 4 ರಷ್ಟು ವಹಿವಾಟುಗಳು ಮಾತ್ರ 2,000 ರೂಪಾಯಿಗಿಂತ ಹೆಚ್ಚಿನ ಮೊತ್ತದ್ದಾಗಿದ್ದವು. ಹೀಗಾಗಿ ಶೇ. 96 ರಷ್ಟು ಸಾಮಾನ್ಯ ವಹಿವಾಟುಗಳು ಎಂದಿನಂತೆ ಸಂಪೂರ್ಣ ಉಚಿತವಾಗಿರಲಿವೆ.

ಹಾಗಾದ್ರೆ, 2,000 ರೂ. ಗಿಂತ ಹೆಚ್ಚಿನ ವಹಿವಾಟುಗಳ ಕಥೆ ಏನು?

ಸರ್ಕಾರದ ಈ ಹೊಸ ಅಧಿಸೂಚನೆಯು ₹2,000 ವರೆಗಿನ ವಹಿವಾಟುಗಳನ್ನು ಕಡ್ಡಾಯವಾಗಿ ಉಚಿತವಾಗಿಡುವಂತೆ ಬ್ಯಾಂಕುಗಳಿಗೆ ಸೂಚಿಸಿದೆ. ಆದರೆ, ₹2,000 ಕ್ಕಿಂತ ಹೆಚ್ಚಿನ ಮೌಲ್ಯದ ದೊಡ್ಡ ವ್ಯಾಪಾರಿ ವಹಿವಾಟುಗಳ ಮೇಲೆ ಮುಂದಿನ ದಿನಗಳಲ್ಲಿ ಬ್ಯಾಂಕುಗಳು ಅಥವಾ ಪಾವತಿ ಸಂಸ್ಥೆಗಳು ಅತ್ಯಲ್ಪ ಪ್ರಮಾಣದ ಮರ್ಚೆಂಟ್ ಡಿಸ್ಕೌಂಟ್ ರೇಟ್ ಶುಲ್ಕ ವಿಧಿಸಲು ಈ ಆದೇಶವು ಪರೋಕ್ಷವಾಗಿ ದಾರಿ ಮಾಡಿಕೊಟ್ಟಿದೆ. ಅಕಸ್ಮಾತ್, ಭವಿಷ್ಯದಲ್ಲಿ ಒಂದು ವೇಳೆ ₹2,000 ಕ್ಕಿಂತ ಹೆಚ್ಚಿನ ದೊಡ್ಡ ವಹಿವಾಟುಗಳಿಗೆ ಶುಲ್ಕ ವಿಧಿಸಿದರೂ, ಅದನ್ನು ಕೇವಲ ವ್ಯಾಪಾರಿಗಳು ಮಾತ್ರವೇ ಪಾವತಿಸಬೇಕಾಗುತ್ತದೆಯೇ ಹೊರತು ಸಾಮಾನ್ಯ ಗ್ರಾಹಕರಲ್ಲ ಎಂದು ಅಧಿಕಾರಿಗಳು ಈ ಹಿಂದೆಯೇ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾದಿಂದ ತೈಲ ಆಮದು: ಭಾರತದ ಮೇಲೆ ಶೇ.100 ರಷ್ಟು ಸುಂಕ ವಿಧಿಸಲು ಅಮೆರಿಕ ಸಂಸದರ ಪ್ರಸ್ತಾಪ!

'ತೀವ್ರ ಧ್ರುವೀಕರಣಗೊಂಡ ಜಗತ್ತು, ಪಶ್ಚಿಮ ಏಷ್ಯಾ ಸಂಘರ್ಷದ ನಡುವೆಯೂ ಬ್ರಿಕ್ಸ್ ಶೃಂಗಸಭೆ ಯಶಸ್ವಿ-ಎಸ್ ಜೈಶಂಕರ್

ಶೇ. 20ರಷ್ಟು ಅಲ್ಪ ಸಂಖ್ಯಾತರು ಸಸ್ಯಾಹಾರಿಗಳು: ಬ್ರಿಕ್ಸ್ ಸಸ್ಯಾಹಾರಿ ಮೆನು ಸಂಬಂದ ಓವೈಸಿ ಪ್ರತಿಕ್ರಿಯೆ

ಸಮುದ್ರ ಅಡ್ಡವಿರದಿದ್ದರೆ ನೆಹರೂ- ಗಾಂಧಿ ಕುಟುಂಬ ಅರಬ್‌ ದೇಶಗಳಲ್ಲೂ ಚುನಾವಣೆಗೆ ನಿಲ್ತಿತ್ತು: ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್!

ಇನ್ಸ್ ಪೆಕ್ಟರ್ ಧನಂಜಯ್ ಧಮ್ಕಿಗೆ ಸೆಡ್ಡು: ಪೊಲೀಸ್ ಠಾಣೆಯ 200 ಮೀಟರ್ ಅಂತರದಲ್ಲೇ ಮಹಾಗಣಪತಿ ಪ್ರತಿಷ್ಠಾಪನೆ! ಶೋಭಾಯಾತ್ರೆಗೆ ಸಜ್ಜು