UPSC Recruitment 2026: ಪದವಿಧರರಿಗೆ ಗುಡ್ ನ್ಯೂಸ್; ಕೇಂದ್ರ ಲೋಕಸೇವಾ ಆಯೋಗವು (UPSC) ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ಖಾಲಿ ಇರುವ ಒಟ್ಟು 80 ಅಸಿಸ್ಟೆಂಟ್ ಪ್ರಾವಿಡೆಂಟ್ ಫಂಡ್ ಕಮಿಷನರ್ (APFC) ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಯಾವುದೇ ಪದವಿ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಇದು ಕೇಂದ್ರ ಸರ್ಕಾರದಲ್ಲಿ ಗ್ರೂಪ್ ಎ ಅಧಿಕಾರಿಯಾಗಲು ಅತ್ಯುತ್ತಮ ಸುವರ್ಣಾವಕಾಶವಾಗಿದೆ. ಹಾಗಾಗಿ ನಾಮಕಾತಿ ಕುರಿತ ಪ್ರಮಖ ವಿವರ ಇಲ್ಲಿದೆ:
ಹುದ್ದೆಗಳ ವಿವರ:
ಹುದ್ದೆಯ ಹೆಸರು: ಅಸಿಸ್ಟೆಂಟ್ ಪ್ರಾವಿಡೆಂಟ್ ಫಂಡ್ ಕಮಿಷನರ್ (APFC)
ನೇಮಕಾತಿ ಪ್ರಾಧಿಕಾರ: ಕೇಂದ್ರ ಲೋಕಸೇವಾ ಆಯೋಗ (UPSC)
ಸಂಸ್ಥೆ: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO)
ಒಟ್ಟು ಹುದ್ದೆಗಳು: 80
ವರ್ಗಾವಾರು ಹಂಚಿಕೆ:
ಸಾಮಾನ್ಯ ವರ್ಗ (UR): 29
ಇತರ ಹಿಂದುಳಿದ ವರ್ಗ (OBC): 18
ಪರಿಶಿಷ್ಟ ಜಾತಿ (SC): 15
ಪರಿಶಿಷ್ಟ ಪಂಗಡ (ST): 10
ಆರ್ಥಿಕವಾಗಿ ಹಿಂದುಳಿದ ವರ್ಗ (EWS): 8
ವಿಕಲಚೇತನರು (PwBD): 3 (ಒಟ್ಟು ಹುದ್ದೆಗಳಲ್ಲಿ ಮೀಸಲು)
ಅರ್ಹತೆ:
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಾಸ್ ಆಗಿರಬೇಕು. (ಕಂಪನಿ ಕಾನೂನು/ಕಾರ್ಮಿಕ ಕಾನೂನು/ಸಾರ್ವಜನಿಕ ಆಡಳಿತದಲ್ಲಿ ಡಿಪ್ಲೊಮಾ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ).
ಗರಿಷ್ಠ ವಯೋಮಿತಿ (ಸೆಪ್ಟೆಂಬರ್ 11, 2026 ಕ್ಕೆ ಅನ್ವಯಿಸುವಂತೆ): ಸಾಮಾನ್ಯ / EWS ಅಭ್ಯರ್ಥಿಗಳು: 35 ವರ್ಷ, OBC ಅಭ್ಯರ್ಥಿಗಳು: 38 ವರ್ಷ, SC / ST ಅಭ್ಯರ್ಥಿಗಳು: 40 ವರ್ಷಗಳು
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ: ಆಗಸ್ಟ್ 22, 2026 (ಈಗಾಗಲೇ ಪ್ರಮಾಬಾವಾಗಿದೆ)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 11, 2026 (ಸಂಜೆ 6:00 ಗಂಟೆಯವರೆಗೆ)
ಲಿಖಿತ ಪರೀಕ್ಷೆ ನಡೆಯುವ ದಿನಾಂಕ: ಡಿಸೆಂಬರ್ 20, 2026
ಸಂಬಳ:
ಈ ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ ಅಡಿಯಲ್ಲಿ ಪೇ ಲೆವೆಲ್-10 (Pay Level 10) ಪ್ರಕಾರ ವೇತನ ಸಿಗಲಿದೆ. ಆರಂಭಿಕ ಮೂಲ ವೇತನ ₹56,100 ರಿಂದ ₹1,77,500 ವರೆಗೆ ಇರಲಿದ್ದು, ಇದರೊಂದಿಗೆ ಕೇಂದ್ರ ಸರ್ಕಾರದ ಇತರೆ ಭತ್ಯೆಗಳು ದೊರೆಯಲಿವೆ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಎರಡು ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:
ನೇಮಕಾತಿ ಪರೀಕ್ಷೆ: ಇದು MCQ ಮಾದರಿಯ ಲಿಖಿತ ಪರೀಕ್ಷೆಯಾಗಿರುತ್ತದೆ.
ಸಂದರ್ಶನ: ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ 100 ಅಂಕಗಳ ವ್ಯಕ್ತಿತ್ವ ಪರೀಕ್ಷೆ/ಸಂದರ್ಶನ ನಡೆಸಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ: UPSC ಯ ಅಧಿಕೃತ ಆನ್‌ಲೈನ್ ಅರ್ಜಿ ಪೋರ್ಟಲ್‌ಗೆ ಹೋಗಿ. (https://www.upsc.gov.in/)
ನೋಂದಣಿ ಪೂರ್ಣಗೊಳಿಸಿ: ಅಗತ್ಯವಿರುವ ನೋಂದಣಿ (One Time Registration - OTR) ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಹುದ್ದೆಯನ್ನು ಆಯ್ಕೆಮಾಡಿ: ಸಹಾಯಕ ಭವಿಷ್ಯ ನಿಧಿ ಆಯುಕ್ತರ (APFC) ನೇಮಕಾತಿ ಅಧಿಸೂಚನೆಯನ್ನು ಆಯ್ಕೆಮಾಡಿ.
ವಿವರಗಳನ್ನು ನಮೂದಿಸಿ: ನಿಮ್ಮ ವೈಯಕ್ತಿಕ, ಶೈಕ್ಷಣಿಕ ಹಾಗೂ ಅಗತ್ಯವಿರುವ ಇತರ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
ದಾಖಲೆಗಳನ್ನು ಅಪ್‌ಲೋಡ್ ಮಾಡಿ: ಕೇಳಲಾದ ಅಗತ್ಯ ದಾಖಲೆಗಳು, ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
ಅರ್ಜಿ ಶುಲ್ಕ ಪಾವತಿಸಿ: ಅನ್ವಯವಾಗುವ ಸಂದರ್ಭದಲ್ಲಿ ನಿಗದಿತ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
ಪರಿಶೀಲಿಸಿ ಸಲ್ಲಿಸಿ: ನಮೂದಿಸಿದ ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ, ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಿ (Submit).
ಪ್ರತಿ ಉಳಿಸಿಕೊಳ್ಳಿ: ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ನಮೂನೆಯ ಪ್ರತಿಯನ್ನು (Printout / PDF) ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ.