ಉದ್ಯೋಗಕಾಂಕ್ಷಿಗಳು (ಸಾಂದರ್ಭಿಕ ಚಿತ್ರ) Online Desk
ವೃತ್ತಿ & ಉದ್ಯೋಗ ಅವಕಾಶಗಳು

IBPS Recruitment 2026: 6,715 ಹುದ್ದೆಗಳಿಗೆ ಅರ್ಜಿ ಆಹ್ವಾನ; ಗರಿಷ್ಠ ವೇತನ, ಅಂತಿಮ ದಿನಾಂಕದ ಬಗ್ಗೆ ಇಲ್ಲಿದೆ ಮಾಹಿತಿ

ಬ್ಯಾಂಕ್ ಉದ್ಯೋಗದ ಕನಸು ಕಾಣುತ್ತಿರುವ ಲಕ್ಷಾಂತರ ಯುವಜನತೆಗೆ IBPS ಸಿಹಿ ಸುದ್ದಿ ನೀಡಿದೆ. ದೇಶದ 11 ಪ್ರಮುಖ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ 6,715 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಆ ಕುರಿತು ವರದಿ ಇಲ್ಲಿದೆ.

ಬ್ಯಾಂಕ್ ಉದ್ಯೋಗದ ಕನಸು ಕಾಣುತ್ತಿರುವ ಲಕ್ಷಾಂತರ ಯುವಜನತೆಗೆ IBPS ಸಿಹಿ ಸುದ್ದಿ ನೀಡಿದೆ. ದೇಶದ 11 ಪ್ರಮುಖ ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಪ್ರೊಬೇಷನರಿ ಆಫೀಸರ್ ಆಗುವ ಕನಸನ್ನು ನನಸು ಮಾಡಿಕೊಳ್ಳಲು ಈ ಬಾರಿ 6,715 ಹುದ್ದೆಗಳ ಬೃಹತ್ ಅವಕಾಶ ಬಿಡುಗಡೆ ಮಾಡಿದೆ. ಜುಲೈ 1 ರಿಂದಲೇ ಆನ್ಲೈನ್ ಅರ್ಜಿ ಆರಂಭವಾಗಿದ್ದು, ಆ ಕುರಿತು ವರದಿ ಇಲ್ಲಿದೆ.

ಹುದ್ದೆಗಳ ವಿವರ:
ಈ ಬಾರಿ ಒಟ್ಟು 6,715 ಹುದ್ದೆಗಳನ್ನು ಘೋಷಿಸಲಾಗಿದೆ. ಇದು ಕಳೆದ ವರ್ಷಕ್ಕಿಂತ 1,507 ಹುದ್ದೆಗಳಷ್ಟು ಹೆಚ್ಚಳವಾಗಿದೆ. ಅದರಂತೆ SC 1009, ST 502, OBC 1,816, EWS 669, ಗ್ರಾಮೀಣ 2,719 ಹುದ್ದೆಗಳಿಗೆ ಮೀಸಲಾತಿ ಇದೆ.

ಅರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ.
ವಯೋಮಿತಿಯು ಜುಲೈ 1, 2026 ಕ್ಕೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 30 ವರ್ಷ. (SC/ST ಗೆ 5 ವರ್ಷ, OBC ಗೆ 3 ವರ್ಷ, PwBD ಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.)

ಅರ್ಜಿ ಶುಲ್ಕ:
ಸಾಮಾನ್ಯ ವರ್ಗ, OBC ಮತ್ತು EWS ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 850 ರೂಪಾಯಿ. SC, ST ಮತ್ತು PwBD ಅಭ್ಯರ್ಥಿಗಳಿಗೆ 175 ರೂಪಾಯಿ.

ಆಯ್ಕೆ ಪ್ರಕ್ರಿಯೆ:
ನೇಮಕಾತಿಯು ನಾಲ್ಕು ಹಂತಗಳಲ್ಲಿ ನಡೆಯಲಿದೆ.

  • ಮೊದಲ ಹಂತ ಪ್ರಿಲಿಮ್ಸ್ ಪರೀಕ್ಷೆ ಇದು ಕೇವಲ ಅರ್ಹತಾ ಪರೀಕ್ಷೆ.

  • ಎರಡನೇ ಹಂತದಲ್ಲಿ ಮೇನ್ಸ್ ಪರೀಕ್ಷೆ.

  • ಮೂರನೇ ಹಂತದಲ್ಲಿ ಕಡ್ಡಾಯ ಪರ್ಸನಾಲಿಟಿ ಟೆಸ್ಟ್ (ಇದರ ಅಂಕ ಅಂತಿಮ ಮೆರಿಟ್ ಗೆ ಸೇರುವುದಿಲ್ಲ, ಆದರೆ ನಾಲ್ಕನೇ ಹಂತಕ್ಕೆ ಇದು ಕಡ್ಡಾಯ.)

  • ನಾಲ್ಕನೇ ಹಂತ ಸಂದರ್ಶನ

ವೇತನ:

48,480 ರಿಂದ 85,920 ರೂಪಾಯಿಗಳ ವರೆಗೆ (ಬ್ಯಾಂಕ್‌ಗಳ ಹುದ್ದೆಯ ಮೇಲೆ ಅವಲಂಬಿತ)

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ಜುಲೈ 1, 2026.

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 21, 2026. (ಅರ್ಜಿ ಶುಲ್ಕ ಪಾವತಿಗೂ ಅದೇ ಕೊನೆಯ ದಿನಾಂಕ)

ಅಧಿಸೂಚನೆ: https://www.ibps.in/wp-content/uploads/Detailed-Notification_CRP-PO-XVI_Final_V1_30.06.2026.pdf

ಅರ್ಜಿ ಸಲ್ಲಿಸುವ ಲಿಂಕ್: https://ibpsreg.ibps.in/sbipojun26/

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಯನಾಡು: ಭೂ ಕುಸಿತದ ರಭಸಕ್ಕೆ ಕೊಚ್ಚಿ ಬಂದ ಟ್ಯಾಂಕರ್! ನದಿಗೆ ಬಿದ್ದ ಖಾಸಗಿ ಬಸ್, ಮೂವರು ಸಾವು, ಏಳು ಮಂದಿಗೆ ಗಾಯ, ಭಯಾನಕ Video

ಟೀಂ ಇಂಡಿಯಾಗೆ ಸಾಲು ಸಾಲು ಸೋಲು: ಜಿಂಬಾಬ್ವೆ ಸರಣಿಯಿಂದ ಮುಖ್ಯ ಕೋಚ್ ಗೌತಮ್ ಗಂಭೀರ್‌ರನ್ನೇ ಹೊರಗಿಟ್ಟ BCCI!

20 ವರ್ಷಗಳಲ್ಲೇ ಮೊದಲ ಬಾರಿಗೆ ಕಚ್ಚಾ ತೈಲ ಬೆಲೆ ಭಾರೀ ಕಡಿತಗೊಳಿಸಿದ ಸೌದಿ ಅರೇಬಿಯಾ; ಭಾರತಕ್ಕೆ ಬಂಪರ್‌!

ಕಚ್ಚಾ ತೈಲ ಬೆಲೆ ಇಳಿದರೂ ದರ ಕಡಿತಗೊಳಿಸಿದ ಕೇಂದ್ರದ ವಿರುದ್ಧ ಅಖಿಲೇಶ್ ಕಿಡಿ; ಬಿಜೆಪಿ ಬೆಂಬಲಿಸುವರು ರಾಮನಿಗೆ ದ್ರೋಹ ಮಾಡಿದಂತೆ!

Satluj Controversy: 'ಸತ್ಲುಜ್'ಅನ್ನು ಅಂತರ-ಇಲಾಖಾ ಸಮಿತಿಗೆ ಉಲ್ಲೇಖಿಸಲು ಕೇಂದ್ರ ನಿರ್ಧಾರ; ಏನಿದು ವಿವಾದ?