BELನಲ್ಲಿ ಇಂಜಿನಿಯರಿಂಗ್ ಪದವೀಧರರಿಗೆ ಬಂಪರ್ ಆಫರ್: ಬೆಂಗಳೂರಿನಲ್ಲೇ ಕೆಲಸ, ತಿಂಗಳಿಗೆ 50 ಸಾವಿರ ಸಂಬಳ!

ಕೇಂದ್ರ ರಕ್ಷಣಾ ಸಚಿವಾಲಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL), ತನ್ನ ಬೆಂಗಳೂರು ಕಾಂಪ್ಲೆಕ್ಸ್‌ನಲ್ಲಿ ಖಾಲಿ ಇರುವ 14 ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆ ಕುರಿತ ವರದಿ ಇಲ್ಲಿದೆ:
Bharat Electronics Limited (BEL)
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್Online Desk
Updated on: 

BEL Recruitment 2026: ಕೇಂದ್ರ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಸಾರ್ವಜನಿಕ ವಲಯದ ಉದ್ಯಮವಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL), ತನ್ನ ಬೆಂಗಳೂರು ಕಾಂಪ್ಲೆಕ್ಸ್‌ನಲ್ಲಿರುವ ಎಲೆಕ್ಟ್ರಾನಿಕ್ ವಾರ್‌ಫೇರ್ ಮತ್ತು ಏವಿಯಾನಿಕ್ಸ್ ವಿಭಾಗದಲ್ಲಿ ತಾತ್ಕಾಲಿಕ ಆಧಾರದ ಮೇಲೆ ಖಾಲಿ ಇರುವ 14 ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಆ ಕುರಿತ ವರದಿ ಇಲ್ಲಿದೆ:

ಹುದ್ದೆಯ ವಿವರ:

  • ಸಂಸ್ಥೆ: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್

  • ಹುದ್ದೆಯ ಹೆಸರು: ಪ್ರಾಜೆಕ್ಟ್ ಇಂಜಿನಿಯರ್ - I (ಗುತ್ತಿಗೆ ಆಧಾರದ ಮೇಲೆ)

  • ವಿಭಾಗ: ಎಲೆಕ್ಟ್ರಾನಿಕ್ ವಾರ್‌ಫೇರ್ & ಏವಿಯಾನಿಕ್ಸ್

  • ಒಟ್ಟು ಹುದ್ದೆಗಳ ಸಂಖ್ಯೆ: 14 ಹುದ್ದೆಗಳು

    • ಎಲೆಕ್ಟ್ರಾನಿಕ್ಸ್: 08

    • ಕಂಪ್ಯೂಟರ್ ಸೈನ್ಸ್: 06

    • ವರ್ಗಾವಾರು ಮೀಸಲಾತಿ: ಸಾಮಾನ್ಯ ವರ್ಗ (UR) - 06, OBC - 04, SC - 02, ST - 01, EWS - 01.

  • ಕರ್ತವ್ಯ ನಿರ್ವಹಿಸುವ ಸ್ಥಳ: ಜಾಲಹಳ್ಳಿ, ಬೆಂಗಳೂರು

 ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 09.10.2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23.10.2026

ಅರ್ಹತೆ:

  • ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಿತ ವಿಭಾಗದಲ್ಲಿ 4 ವರ್ಷಗಳ ಪೂರ್ಣಾವಧಿ B.E. / B.Tech / B.Sc Engineering (ಕನಿಷ್ಠ ಪಾಸ್ ಕ್ಲಾಸ್ ಪಡೆದಿರಬೇಕು)

  • ಅನುಭವ: 01 ಅಕ್ಟೋಬರ್ 2026 ಕ್ಕೆ ಅನ್ವಯಿಸುವಂತೆ ಇಂಜಿನಿಯರಿಂಗ್ ಪದವಿ ಮುಗಿಸಿದ ನಂತರ ಸಂಬಂಧಿತ ಕೈಗಾರಿಕಾ ವಲಯದಲ್ಲಿ ಕನಿಷ್ಠ 2 ವರ್ಷಗಳ ಕೆಲಸದ ಅನುಭವ ಕಡ್ಡಾಯವಾಗಿದೆ.

  • ವಯೋಮಿತಿ (01.10.2026 ರಂತೆ): ಗರಿಷ್ಠ ವಯಸ್ಸು: 32 ವರ್ಷ (OBC (NCL) ಅಭ್ಯರ್ಥಿಗಳಿಗೆ: 3 ವರ್ಷ, SC / ST ಅಭ್ಯರ್ಥಿಗಳಿಗೆ: 5 ವರ್ಷ, PwBD ಅಭ್ಯರ್ಥಿಗಳಿಗೆ: 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ)

ಗುತ್ತಿಗೆ ಅವಧಿ:

  • ಆರಂಭದಲ್ಲಿ 3 ವರ್ಷಗಳು. ಯೋಜನೆಯ ಪ್ರಗತಿ ಮತ್ತು ಕಾರ್ಯಕ್ಷಮತೆ ಆಧಾರದ ಮೇಲೆ ಗರಿಷ್ಠ ಮತ್ತೊಂದು ವರ್ಷ (ಒಟ್ಟು 4 ವರ್ಷಗಳವರೆಗೆ) ವಿಸ್ತರಿಸಬಹುದು.

Bharat Electronics Limited (BEL)
ಕೇಂದ್ರ ಸರ್ಕಾರಿ ಉದ್ಯೋಗ ಹುಡುಕುತ್ತಿದ್ದೀರಾ? ಬೆಂಗಳೂರಿನ CPRIನಲ್ಲಿದೆ 110 ಹುದ್ದೆಗಳು; ಇಲ್ಲಿದೆ ನೇಮಕಾತಿಯ ಕಂಪ್ಲೀಟ್ ಡಿಟೇಲ್ಸ್

 ಸಂಬಳ:

  • ಮೊದಲ ವರ್ಷ: ₹50,000/- ಪ್ರತಿ ತಿಂಗಳು. (ಗುತ್ತಿಗೆಯ ಪ್ರತಿ ವಿಸ್ತರಣೆಗೆ ಪ್ರತಿ ತಿಂಗಳು ₹5,000/- ಹೆಚ್ಚಳ.) ಇದರೊಂದಿಗೆ, ವಾರ್ಷಿಕವಾಗಿ ₹12,000 ಹೆಚ್ಚುವರಿ ಭತ್ಯೆ. ಜೊತೆಗೆ, 4 ವರ್ಷಗಳ ಅವಧಿ ಪೂರ್ಣಗೊಳಿಸಿದರೆ ವಾರ್ಷಿಕ ₹25,000/- ರಂತೆ ಒಟ್ಟು ₹1,00,000/- ಬೋನಸ್ ಹಾಗೂ ಗ್ರಾಚ್ಯುಟಿಯನ್ನು ರಿಟೆಂನ್ಷನ್ ಬೋನಸ್ ಆಗಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

  • BEL ನೇಮಕಾತಿ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.

  • ಅರ್ಜಿ ಸಲ್ಲಿಸಿದ ನಂತರ ಅದರ ಪ್ರಿಂಟ್‌ಔಟ್ ತೆಗೆದುಕೊಳ್ಳಬೇಕು.

  • ಆಯ್ಕೆ ಪ್ರಕ್ರಿಯೆಯ ದಿನದಂದು ಭರ್ತಿ ಮಾಡಿದ ಅರ್ಜಿಯ ಪ್ರಿಂಟ್‌ಔಟ್, 2 ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋಗಳು ಮತ್ತು ಮೂಲ ದಾಖಲೆಗಳೊಂದಿಗೆ ಹಾಜರಾಗಬೇಕಾಗುತ್ತದೆ.

  • ಅರ್ಜಿ ಶುಲ್ಕ:

    • ಶುಲ್ಕ: ₹400 + 18% GST (ಒಟ್ಟು ₹472/-).

    • ವಿನಾಯಿತಿ: SC, ST ಮತ್ತು PwBD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

    ಅರ್ಜಿ ಸಲ್ಲಿಸುವ ಲಿಂಕ್

 ಆಯ್ಕೆ ವಿಧಾನ:

  • ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯು ಗಾಜಿಯಾಬಾದ್ ಅಥವಾ ದೆಹಲಿಯಲ್ಲಿ ನಡೆಯುವ ಸಾಧ್ಯತೆಯಿದೆ.

Bharat Electronics Limited (BEL)
10ನೇ ತರಗತಿ ಪಾಸಾದವರಿಗೆ ಕೇಂದ್ರ ಸರ್ಕಾರಿ ನೌಕರಿ: ಕರಾವಳಿ ರಕ್ಷಣಾ ಪಡೆಯಲ್ಲಿ 365 ಹುದ್ದೆಗಳಿಗೆ ಅರ್ಜಿ ಆಹ್ವಾನ; ₹35 ಸಾವಿರ ಸಂಬಳ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com