ನಮ್ಮ ಮೆಟ್ರೋ (ಪ್ರಾತಿನಿಧಿಕ ಚಿತ್ರ) Online Desk
ವೃತ್ತಿ & ಉದ್ಯೋಗ ಅವಕಾಶಗಳು

ನಮ್ಮ ಮೆಟ್ರೋದಲ್ಲಿ ಪದವಿಧರರಿಗೆ ಭರ್ಜರಿ ಉದ್ಯೋಗಾವಕಾಶ; ಸಂಬಳ 1.64 ಲಕ್ಷ, ಈಗಲೇ ಅರ್ಜಿ ಸಲ್ಲಿಸಿ

ರಾಜಧಾನಿಯ ಜೀವನಾಡಿಯಾಗಿರುವ ನಮ್ಮ ಮೆಟ್ರೋದಲ್ಲಿ ಪದವಿಧರರಿಗೆ ಭರ್ಜರಿ ಉದ್ಯೋಗಾವಕಾಶ; ಅದರಂತೆ, BMRCL ಖಾಲಿ ಇರುವ ಉಪ ಪ್ರಧಾನ ವ್ಯವಸ್ಥಾಪಕ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ರಾಜಧಾನಿಯ ಜೀವನಾಡಿಯಾಗಿರುವ ನಮ್ಮ ಮೆಟ್ರೋದಲ್ಲಿ ಪದವಿಧರರಿಗೆ ಭರ್ಜರಿ ಉದ್ಯೋಗಾವಕಾಶ; ಅದರಂತೆ, ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಖಾಲಿ ಇರುವ ಉಪ ಪ್ರಧಾನ ವ್ಯವಸ್ಥಾಪಕ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಹುದ್ದೆಗಳ ವಿವರ:

  • ಉಪ ಪ್ರಧಾನ ವ್ಯವಸ್ಥಾಪಕರು (ಕಾರ್ಯಾಚರಣೆ ಸುರಕ್ಷತೆ) - 1

  • ಸೂಪರ್‌ವೈಸರ್ (ಆಪರೇಷನ್ ಸೇಫ್ಟಿ) - 2

ಸಂಬಳ:

  • ಉಪ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ 1.64 ಲಕ್ಷ

  • ಆಪರೇಷನ್ ಸೇಫ್ಟಿ ಸೂಪರ್‌ವೈಸರ್ ಹುದ್ದೆಗೆ ₹50,000 ರಿಂದ ₹62,500

ಅರ್ಹತೆ:

  • ಉಪ ಪ್ರಧಾನ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಇಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು. ಇದರೊಂದಿಗೆ ಕನಿಷ್ಠ 14 ವರ್ಷಗಳ ವೃತ್ತಿ ಅನುಭವ ಹೊಂದಿರಬೇಕು. ಇದರಲ್ಲಿ ಕನಿಷ್ಠ 8 ವರ್ಷಗಳ ಅನುಭವವು ಮೆಟ್ರೋ ರೈಲು ಅಥವಾ ಭಾರತೀಯ ರೈಲ್ವೆಯಲ್ಲಿ ರೈಲು ಕಾರ್ಯಾಚರಣೆ ಹಾಗೂ ಭದ್ರತಾ ವಿಭಾಗದಲ್ಲಿರುವುದು ಕಡ್ಡಾಯವಾಗಿದೆ.

  • ಆಪರೇಷನ್ ಸೇಫ್ಟಿ ಸೂಪರ್‌ವೈಸರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಅಥವಾ ಇಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು. ಇದರೊಂದಿಗೆ ಭಾರತೀಯ ರೈಲ್ವೆಯಲ್ಲಿ ಟ್ರಾಫಿಕ್ ಇನ್ಸ್‌ಪೆಕ್ಟರ್ ಅಥವಾ ಸ್ಟೇಷನ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.

ವಯೋಮಿತಿ:

  • ಉಪ ಪ್ರಧಾನ ವ್ಯವಸ್ಥಾಪಕ ಹುದ್ದೆ: ಒಪ್ಪಂದದ ಆಧಾರದ ಮೇಲೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 56 ವರ್ಷ ಹಾಗೂ ಡೆಪ್ಯುಟೇಶನ್ ಅಭ್ಯರ್ಥಿಗಳಿಗೆ 48 ವರ್ಷ ನಿಗದಿಪಡಿಸಲಾಗಿದೆ (ನಿವೃತ್ತ ಅಧಿಕಾರಿಗಳಿಗೆ 62 ವರ್ಷ).

  • ಸೂಪರ್‌ವೈಸರ್ (ಆಪರೇಷನ್ ಸೇಫ್ಟಿ): ಗರಿಷ್ಠ ವಯೋಮಿತಿ 62 ವರ್ಷ

ಅರ್ಜಿ ಸಲ್ಲಿಸಲು ಕಡೆಯ ದಿನಾಂಕ:

  • ಉಪ ಪ್ರಧಾನ ವ್ಯವಸ್ಥಾಪಕರು (ಕಾರ್ಯಾಚರಣೆ ಸುರಕ್ಷತೆ) - ಆನ್‌ಲೈನ್ ಅರ್ಜಿಯನ್ನು ಆಗಸ್ಟ್ 10, 2026 ರೊಳಗಡೆ ಸಲ್ಲಿಸಿ ಅದರ ಪ್ರಿಂಟ್‌ಔಟ್ ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 13, 2026ರ ಸಂಜೆ 04:00 ಗಂಟೆಯೊಳಗೆ ನಮ್ಮ ಮೆಟ್ರೋ ಪ್ರಧಾನ ಕಚೇರಿಗೆ ತಲುಪಿಸಬೇಕು.

  • ಸೂಪರ್‌ವೈಸರ್ (ಆಪರೇಷನ್ ಸೇಫ್ಟಿ) - ಆನ್‌ಲೈನ್ ಅರ್ಜಿ ಸಲ್ಲಿಸಿದ ನಂತರ, ಅದರ ಪ್ರಿಂಟ್‌ಔಟ್ ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ 31 ಜುಲೈ 2026 ಸಂಜೆ 04:00 ಗಂಟೆಯೊಳಗೆ ನಮ್ಮ ಮೆಟ್ರೋ ಪ್ರಧಾನ ಕಚೇರಿಗೆ ತಲುಪಿಸಬೇಕು.

ದಾಖಲೆಗಳನ್ನು ಸಲ್ಲಿಸುವ ವಿಳಾಸ:

ಜನರಲ್ ಮ್ಯಾನೇಜರ್ (HR), BMRCL, ಶಾಂತಿನಗರ, ಬೆಂಗಳೂರು ಇವರ ಕಚೇರಿಗೆ ತಲುಪಿಸಬೇಕು.

ಅಧಿಸೂಚನೆ:

ಅರ್ಜಿ ಲಿಂಕ್:

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಕ್ರೋಚ್​ಗಳ ಮೇಲೆ ಲಾಠಿಚಾರ್ಜ್: ವಿಡಿಯೋ ನೋಡಲು ಟೈಮ್ ಇಲ್ಲ - ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

ಜುಲೈ 20ರ ಪ್ರತಿಭಟನೆ ಕೇವಲ Trailer ಅಷ್ಟೇ, ಸರ್ಕಾರ ಮಣಿಯದಿದ್ದರೆ ಲಕ್ಷಾಂತರ ಮಂದಿ ದೆಹಲಿಗೆ ಲಗ್ಗೆ: CJP ಹೊಸ ಎಚ್ಚರಿಕೆ

‘ಫ್ಲಾಫ್ ಸಾಂಗಿದು, ದಯವಿಟ್ಟು ನಿಲ್ಲಿಸಿ’: ನೆನಪಿರಲಿ ಪ್ರೇಮ್​​ಗೆ ನಾದಬ್ರಹ್ಮ ಹಂಸಲೇಖ ಹೀಗೆ ಹೇಳಿದ್ಯಾಕೆ ಗೊತ್ತಾ?

US-Iran ವಾರ್ ಎಫೆಕ್ಟ್: ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಹೆಚ್ಚಳ; ಜೂನ್ ನಂತರ ಸಾರ್ವಕಾಲಿಕ ಏರಿಕೆ!

CJP protest: RAF ಯೋಧನ ಮೇಲೆ ಹಲ್ಲೆಯ ವಿಡಿಯೋ ವೈರಲ್; ಎಫ್‌ಐಆರ್ ದಾಖಲು