ಸಂಗ್ರಹ ಚಿತ್ರ 
ವೃತ್ತಿ & ಉದ್ಯೋಗ ಅವಕಾಶಗಳು

JOB Alert: DCC ಬ್ಯಾಂಕ್ ನಲ್ಲಿ 82 ಹುದ್ದೆಗಳು ಖಾಲಿ, ಈಗಲೇ ಅರ್ಜಿ ಸಲ್ಲಿಸಿ

ವ್ಯವಸ್ಥಾಪಕರು/ ಪ್ರಥಮ ದರ್ಜೆ ಸಹಾಯಕರು 22, ದ್ವಿತೀಯ ದರ್ಜೆ ಸಹಾಯಕರು 28, ವಾಹನ ಚಾಲಕರು 1 ಮತ್ತು ಕಿರಿಯ ಸೇವಕರು 31 ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನಿಸಲಾಗಿದೆ.

ಬಳ್ಳಾರಿ ಡಿಸಿಸಿ ಬ್ಯಾಂಕ್ ನಲ್ಲಿ 82 ಹುದ್ದೆಗಳು ಖಾಲಿ ಇದ್ದು ವ್ಯವಸ್ಥಾಪಕರು/ ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು, ವಾಹನ ಚಾಲಕರು, ಕಿರಿಯ ಸೇವಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ವ್ಯವಸ್ಥಾಪಕರು/ ಪ್ರಥಮ ದರ್ಜೆ ಸಹಾಯಕರು 22, ದ್ವಿತೀಯ ದರ್ಜೆ ಸಹಾಯಕರು 28, ವಾಹನ ಚಾಲಕರು 1 ಮತ್ತು ಕಿರಿಯ ಸೇವಕರು 31 ಹುದ್ದೆಗಳ ನೇಮಕಾತಿಗೆ ಅರ್ಜಿ ಅಹ್ವಾನಿಸಲಾಗಿದೆ.

ಶೈಕ್ಷಣಿಕ ಅರ್ಹತೆ:

ವ್ಯವಸ್ಥಾಪಕರು/ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರಬೇಕು. ಕಂಪ್ಯೂಟರ್ ನಿರ್ವಹಣೆ ಬಗ್ಗೆ ಜ್ಞಾನ ಹೊಂದಿರಬೇಕು.

ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಉತ್ತೀರ್ಣರಾಗಿರಬೇಕು. ಕಂಪ್ಯೂಟರ್ ನಿರ್ವಹಣೆ ಬಗ್ಗೆ ಜ್ಞಾನ ಹೊಂದಿರಬೇಕು.

ವಾಹನ ಚಾಲಕ ಹುದ್ದೆಗೆ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತೀರ್ಣರಾಗಿರಬೇಕು. ಕಾನೂನುಬದ್ಧ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.

ಕಿರಿಯ ಸೇವಕರ ಹುದ್ದೆಗೆ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ

ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು. ಅಂತೆಯೇ ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ 1ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ, ತರೆ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ ವಯೋಮಿತಿ ನಿಗದಿ ಪಡಿಸಲಾಗಿದೆ.

ವೇತನ

ವ್ಯವಸ್ಥಾಪಕರು/ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ರೂ. 44,425 ರಿಂದ ರೂ. 83,700 ರೂ, ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ರೂ. 34,100 ರಿಂದ ರೂ. 67,600 ರೂ, ಕಿರಿಯ ಸೇವಕ ಹುದ್ದೆಗೆ ರೂ. 29,600 ರಿಂದ ರೂ. 52,800 ರೂ ಮತ್ತು ವಾಹನ ಚಾಲಕರಿಗೆ ರೂ. 31,775 ರಿಂದ ರೂ. 61,300 ವೇತನ ನಿಗದಿ ಪಡಿಸಲಾಗಿದೆ.

ಆಯ್ಕೆವಿಧಾನ

ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಸಂದರ್ಶನ ನಡೆಸಿ ಹುದ್ದೆಗಳಿಗೆ ನೇಮಕ ಮಾಡಲಾಗುವುದು.

ಅರ್ಜಿ ಶುಲ್ಕ

ಸಾಮಾನ್ಯ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ರೂ. 1,000/- ಮತ್ತು ಪ. ಜಾತಿ, ಪ. ಪಂಗಡದ, ಪ್ರ1, ವಿಕಲಚೇತನ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ. 500/- ಅರ್ಜಿ ಶುಲ್ಕ ನಿಗಧಿಪಡಿಸಲಾಗಿದೆ. ನಿಗದಿಪಡಿಸಿದ ಶುಲ್ಕವನ್ನು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮತ್ತು ಯುಪಿಐ ಮೂಲಕ ಪಾವತಿಸಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 30, 2026

ನೋಟಿಫಿಕೇಷನ್: https://bellarydcc.bank.in/recruitment/recruitment-2026.pdf

ವೆಬ್ ಸೈಟ್ ವಿಳಾಸ: https://bellarydcc.bank.in/recruitment.html

ಅರ್ಜಿ ಸಲ್ಲಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ: https://manageexam.com/BDCCB/

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಡಿ.ಕೆ. ಶಿವಕುಮಾರ್ ಜೊತೆ ಪ್ರಮಾಣವಚನ ಸ್ವೀಕರಿಸಲಿರುವ 10-12 ಸಚಿವರ ಪಟ್ಟಿ ಇಂದು ಪ್ರಕಟ ಸಾಧ್ಯತೆ

ಬೆನ್ನಿಗೆ ಚೂರಿ ಹಾಕುವ ಕೆಲಸ, ಬಿಜೆಪಿಗೆ ಸಹಾಯ ಮಾಡಲು ಹೀಗೆ ಮಾಡಿದ್ದಾರೆ: ಜಮೀರ್ ವಿರುದ್ಧ SS ಮಲ್ಲಿಕಾರ್ಜುನ್ ಆಕ್ರೋಶ

'ಗರ್ಭಿಣಿನೂ ಇಲ್ಲ.. ಮಹಿಳೆಯೂ ಇಲ್ಲ.. ಕಾರಿನಲ್ಲಿ ಒಬ್ಬರೇ ಬಂದಿದ್ದರು': ಝೀರೋ ಟ್ರಾಫಿಕ್ ಪ್ರತಿಭಟನೆಯ ಅಸಲೀಯತ್ತು ಬಯಲು ಮಾಡಿದ ಪೊಲೀಸರು!

ಅವಕಾಶ ವಂಚಿತ ಇಂಡಿ; ಡಿಕೆಶಿ ಸರ್ಕಾರದಲ್ಲಿ ಸ್ಥಾನ ಸಿಗುವ ನಿರೀಕ್ಷೆ, ಯಾರೆಲ್ಲಾ ಇದ್ದಾರೆ ಸಚಿವ ಸ್ಥಾನದ ರೇಸ್ ನಲ್ಲಿ?

ಟ್ರಂಪ್ ಒತ್ತಡಕ್ಕೆ ಮಣಿದ ನೆತನ್ಯಾಹು; ಲೆಬನಾನ್ ಮೇಲಿನ ದಾಳಿಗೆ ಬ್ರೇಕ್, ಸಂಘರ್ಷ ನಿಲ್ಲಿಸಲು ಇಸ್ರೇಲ್-ಹಿಜ್ಬುಲ್ಲಾ ಸಮ್ಮತಿ..!

SCROLL FOR NEXT