ಸುಪ್ರೀಂ ಕೋರ್ಟ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ AI Image
ವೃತ್ತಿ & ಉದ್ಯೋಗ ಅವಕಾಶಗಳು

ಸುಪ್ರೀಂ ಕೋರ್ಟ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ: 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ₹72 ಸಾವಿರ ಸಂಬಳ!

ದೇಶದ ಸರ್ವೋಚ್ಚ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನಲ್ಲಿ ಖಾಲಿ ಇರುವ 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಬಿದ್ದಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ದೇಶದ ಸರ್ವೋಚ್ಚ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನಲ್ಲಿ ಖಾಲಿ ಇರುವ 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಬಿದ್ದಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಹುದ್ದೆಯ ವಿವರ:

  • ಸಂಸ್ಥೆ: ಭಾರತದ ಸರ್ವೋಚ್ಚ ನ್ಯಾಯಾಲಯ

  • ಹುದ್ದೆಯ ಹೆಸರು: ಜೂನಿಯರ್ ಕೋರ್ಟ್ ಅಸಿಸ್ಟೆಂಟ್

  • ಒಟ್ಟು ಹುದ್ದೆಗಳು: 250 (ತಾತ್ಕಾಲಿಕ)

  • ಕೆಲಸದ ಸ್ಥಳ: ನವದೆಹಲಿ

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ: 7 ಅಕ್ಟೋಬರ್ 2026.

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28 ಅಕ್ಟೋಬರ್ 2026 (ರಾತ್ರಿ 11:55 ರವರೆಗೆ).

  • ಪರೀಕ್ಷೆಯ ದಿನಾಂಕ: 20 ನವೆಂಬರ್ 2026 (ತಾತ್ಕಾಲಿಕ).

ಸಂಬಳ:

  • ಪೇ ಮ್ಯಾಟ್ರಿಕ್ಸ್ ಲೆವೆಲ್ 6 ರ ಅಡಿಯಲ್ಲಿ 35,400 ರೂ. ಆರಂಭಿಕ ಮೂಲ ವೇತನ ಇರಲಿದ್ದು, ಭತ್ಯೆಗಳು ಸೇರಿದರೆ ಮಾಸಿಕ ಒಟ್ಟು ವೇತನ ಸುಮಾರು 72,000 ರೂ. ವರೆಗೆ ಸಿಗಲಿದೆ.

ಅರ್ಹತೆ:

  • ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಪಾಸ್ ಆಗಿರಬೇಕು.

    • ಹೆಚ್ಚುವರಿ ಕೌಶಲ್ಯ: ಕಂಪ್ಯೂಟರ್ ಆಪರೇಷನ್ ಜ್ಞಾನ ಮತ್ತು ಕಂಪ್ಯೂಟರ್‌ನಲ್ಲಿ ಪ್ರತಿ ನಿಮಿಷಕ್ಕೆ ಕನಿಷ್ಠ 35 ಪದಗಳ ಇಂಗ್ಲಿಷ್ ಟೈಪಿಂಗ್ ವೇಗ ಹೊಂದಿರಬೇಕು.

  • ವಯೋಮಿತಿ: 1 ಸೆಪ್ಟೆಂಬರ್ 2026 ಕ್ಕೆ ಅನ್ವಯಿಸುವಂತೆ 18 ರಿಂದ 30 ವರ್ಷ ಒಳಗಿರಬೇಕು. (SC/ST ಅಭ್ಯರ್ಥಿಗಳಿಗೆ 5 ವರ್ಷ ಹಾಗೂ OBC ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ).

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು

  • ನಿಗದಿತ ಅಳತೆಯ ಸ್ಕ್ಯಾನ್ ಮಾಡಿದ ಭಾವಚಿತ್ರ ಮತ್ತು ಸಹಿ.

  • 10ನೇ ತರಗತಿ, ಪಿಯುಸಿ (12ನೇ ತರಗತಿ) ಮತ್ತು ಪದವಿ ಅಂಕಪಟ್ಟಿ/ಪ್ರಮಾಣಪತ್ರಗಳು.

  • ಜಾತಿ ಅಥವಾ ಅಂಗವಿಕಲತೆ (PwD) ಪ್ರಮಾಣಪತ್ರ (ಅನ್ವಯಿಸಿದರೆ).

  • ಹಾಲಿ ಉದ್ಯೋಗದಲ್ಲಿದ್ದರೆ ನಿರಾಕ್ಷೇಪಣಾ ಪತ್ರ (NOC).

  • ಅರ್ಜಿ ಶುಲ್ಕವನ್ನು ಅಧಿಕೃತ ಪೋರ್ಟಲ್‌ನಲ್ಲಿ ಯುಸಿಒ ಬ್ಯಾಂಕ್ (UCO Bank) ಪಾವತಿ ಗೇಟ್‌ವೇ ಮೂಲಕ ಪಾವತಿಸಬೇಕು.

    • ಅರ್ಜಿ ಶುಲ್ಕ:

      • ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ: ₹1,500

      • SC, ST, ಮಾಜಿ ಸೈನಿಕರು ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ: ₹750

ಬೆಂಗಳೂರಿನಲ್ಲೇ ಕೇಂದ್ರ ಸರ್ಕಾರದ ಹುದ್ದೆ: ಕೇಂದ್ರ ರೇಷ್ಮೆ ಮಂಡಳಿಯಲ್ಲಿ ಉದ್ಯೋಗಾವಕಾಶ; ₹2 ಲಕ್ಷ ಸಂಬಳ, ಅರ್ಜಿ ಶುಲ್ಕವಿಲ್ಲ!ಆಯ್ಕೆ ಪ್ರಕ್ರಿಯೆಯ ಹಂತಗಳು:

ಅಭ್ಯರ್ಥಿಗಳನ್ನು ಒಟ್ಟು 4 ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:

  1. ಆಬ್ಜೆಕ್ಟಿವ್ ಟೈಪ್ ಪರೀಕ್ಷೆ: 100 ಅಂಕಗಳು

  2. ಕಂಪ್ಯೂಟರ್ ಟೈಪಿಂಗ್ ಟೆಸ್ಟ್: 50 ಅಂಕಗಳು

  3. ಡಿಸ್ಕ್ರಿಪ್ಟಿವ್ ಲಿಖಿತ ಪರೀಕ್ಷೆ: 100 ಅಂಕಗಳು

  4. ಸಂದರ್ಶನ: 25 ಅಂಕಗಳು

(ಗಮನಿಸಿ: ಮೊದಲ ಹಂತದ ಲಿಖಿತ ಪರೀಕ್ಷೆಗಾಗಿ ರಾಜ್ಯದ ಪ್ರಮುಖ ಕೇಂದ್ರಗಳು: ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ., ಇನ್ನುಳಿದ ಟೈಪಿಂಗ್, ಡಿಸ್ಕ್ರಿಪ್ಟಿವ್ ಮತ್ತು ಸಂದರ್ಶನಗಳು ದೆಹಲಿ/ಎನ್‌ಸಿಆರ್ ಪ್ರದೇಶದಲ್ಲಿ ನಡೆಯಲಿವೆ).

ಅರ್ಜಿ ಸಲ್ಲಿಸುವ ಲಿಂಕ್:

ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್ www.sci.gov.in ಮೂಲಕ ಮಾತ್ರ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಅಂಚೆ ಮೂಲಕ ಕಳುಹಿಸಲಾದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!