ಶಿಕ್ಷಕಿ AI Image
ವೃತ್ತಿ & ಉದ್ಯೋಗ ಅವಕಾಶಗಳು

ಉಪನ್ಯಾಸಕರಿಗೆ ಪ್ರಾಂಶುಪಾಲರಾಗುವ ಸುವರ್ಣಾವಕಾಶ: 247 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ KEA, ವೇತನ ಎಷ್ಟು ಗೊತ್ತಾ?

ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವರಿಗೆ ಇಲ್ಲಿದೆ ಗುಡ್ ನ್ಯೂಸ್. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 247 ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡಲು 2026ರ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ:

KEA Principal Recruitment 2026: ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಇಲ್ಲಿದೆ ಗುಡ್ ನ್ಯೂಸ್. ಹೌದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 247 ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡಲು 2026ರ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಹುದ್ದೆಗಳ ವಿವರ:

  • ನೇಮಕಾತಿ ಸಂಸ್ಥೆ: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ

  • ಹುದ್ದೆಯ ಹೆಸರು: ಪ್ರಾಂಶುಪಾಲರು (ಸರ್ಕಾರಿ ಪದವಿ ಪೂರ್ವ ಕಾಲೇಜುಗಳು)

  • ಒಟ್ಟು ಹುದ್ದಗೆಳು: 247 ಹುದ್ದೆಗಳು

    • ಸಾಮಾನ್ಯ ವೃಂದ: 216 ಹುದ್ದೆಗಳು

    • ಕಲ್ಯಾಣ-ಕರ್ನಾಟಕ ವೃಂದ: 31 ಹುದ್ದೆಗಳು

ಅರ್ಹತೆ:

  • ಸೇವಾವಧಿ ನಿಯಮ: ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಅಡಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕನಿಷ್ಠ 10 ವರ್ಷಗಳ ನಿಯಮಿತ ಸೇವೆಯನ್ನು ಪೂರ್ಣಗೊಳಿಸಿ, ಪ್ರೊಬೇಷನರಿ ಅವಧಿಯನ್ನು ಯಶಸ್ವಿಯಾಗಿ ಮುಗಿಸಿ ಸದ್ಯ ಸೇವೆಯಲ್ಲಿರುವ ಉಪನ್ಯಾಸಕರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

  • ವಿಶೇಷ ಸೂಚನೆ: ಇದು ಇಲಾಖೆಯೊಳಗಿನ ಅಭ್ಯರ್ಥಿಗಳಿಗೆ ಸೀಮಿತವಾದ ನೇಮಕಾತಿಯಾಗಿದ್ದು, ಹೊರಗಿನ ಅಥವಾ ಮುಕ್ತ ಮಾರುಕಟ್ಟೆಯ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಸಂಬಳ:

₹90,200 – ₹1,59,200 (2024ರ ಪರಿಷ್ಕೃತ ರಾಜ್ಯ ವೇತನ ಶ್ರೇಣಿ).

ಅರ್ಜಿ ಶುಲ್ಕ:

  • ಸಾಮಾನ್ಯ ಮತ್ತು ಇತರೆ ವರ್ಗಗಳು (2A, 2B, 3A, 3B): ₹1,500

  • SC, ST, ಪ್ರವರ್ಗ-1, ಮಾಜಿ ಸೈನಿಕರು, ತೃತೀಯ ಲಿಂಗಿಗಳು: ₹1,000

  • ವಿಶೇಷ ಚೇತನ ಅಭ್ಯರ್ಥಿಗಳು: ₹500

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 07 ಸೆಪ್ಟೆಂಬರ್ 2026

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04 ಅಕ್ಟೋಬರ್ 2026

  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: 05 ಅಕ್ಟೋಬರ್ 2026

ನೇಮಕಾತಿ ಅಧಿಸೂಚನೆ:

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ ಕಟ್ಟಡ ಕುಸಿತ ದುರಂತ: ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ ಪಿಜಿ ಮಾಲೀಕ ಅಂದರ್; ಐವರು ಅಧಿಕಾರಿಗಳ ಅಮಾನತು!

ಭಾರತದಲ್ಲಿ ಶೀಘ್ರದಲ್ಲೇ ಗಂಟೆಗೆ 110 ಕಿ.ಮೀ ವೇಗದಲ್ಲಿ ಹೈಡ್ರೋಜನ್ ರೈಲುಗಳ ಕಾರ್ಯಾಚರಣೆ: ರೈಲ್ವೆ ಸುಳಿವು

ಭೂಮಿ ಕಳೆದುಕೊಂಡವರಿಗೆ ನಿವೇಶನ ಹಂಚಿಕೆ 'ಸುಪ್ರೀಂ' ತೀರ್ಪಿಗೆ ವಿರುದ್ಧ: ನಿಜವಾದ ಫಲಾನುಭವಿಗಳು ಯಾರು? CMಗೆ ದೇವೇಗೌಡ ಪತ್ರ!

'ಕೇವಲ ಸಹಕಾರವಲ್ಲ, ಭವಿಷ್ಯವನ್ನೇ ಒಟ್ಟಿಗೆ ರೂಪಿಸುತ್ತಿದ್ದೇವೆ': ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ-ಅಮೆರಿಕ ಜಂಟಿ ಹೆಜ್ಜೆ, ರಾಯಭಾರಿ Sergio Gor ಹೇಳಿದ್ದೇನು?

ದೆಹಲಿ ಕಟ್ಟಡ ದುರಂತ: ಮೃತರ ಸಂಖ್ಯೆ 7ಕ್ಕೆ ಏರಿಕೆ; ತಲೆಮರೆಸಿಕೊಂಡಿರುವ PG ಮಾಲೀಕನ ವಿರುದ್ಧ Lookout Notice ಜಾರಿ, ಇಂದು High courtನಲ್ಲಿ ತುರ್ತು ವಿಚಾರಣೆ..!