IBPS Recruitment 2026: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಭರ್ಜರಿ ಸಿಹಿ ಸುದ್ದಿ ನೀಡಿದೆ. ದೇಶಾದ್ಯಂತ ಇರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ (RRB) ಖಾಲಿ ಇರುವ ಒಟ್ಟು 13,745 ಹುದ್ದೆಗಳ ಬೃಹತ್ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ. ಹಾಗಾಗಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಪದವೀಧರರಿಗೆ ಇದೊಂದು ಸುವರ್ಣಾವಕಾಶವಾಗಿದ್ದು, ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 21, 2026ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ. ಆ ಕುರಿತ ವರದಿ ಇಲ್ಲಿದೆ:
ಹುದ್ದೆಗಳ ವಿವರ:
ಒಟ್ಟು 13,745
ಆಫೀಸ್ ಅಸಿಸ್ಟೆಂಟ್ (ಮಲ್ಟಿಪರ್ಪಸ್ - ಕ್ಲರ್ಕ್): 8,241 ಹುದ್ದೆಗಳು
ಆಫೀಸರ್ ಸ್ಕೇಲ್-I (ಅಸಿಸ್ಟೆಂಟ್ ಮ್ಯಾನೇಜರ್ - PO): 4,257 ಹುದ್ದೆಗಳು
ಆಫೀಸರ್ ಸ್ಕೇಲ್-II (ಮ್ಯಾನೇಜರ್): 1,027 ಹುದ್ದೆಗಳು
ಆಫೀಸರ್ ಸ್ಕೇಲ್-III (ಸೀನಿಯರ್ ಮ್ಯಾನೇಜರ್): 220 ಹುದ್ದೆಗಳು
ಈ ಪೈಕಿ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಒಟ್ಟು 1,425
ಆಫೀಸ್ ಅಸಿಸ್ಟೆಂಟ್ (ಕ್ಲರ್ಕ್): 800 ಹುದ್ದೆಗಳು
ಆಫೀಸರ್ ಸ್ಕೇಲ್-I (ಅಸಿಸ್ಟೆಂಟ್ ಮ್ಯಾನೇಜರ್ - PO): 500 ಹುದ್ದೆಗಳು
ಆಫೀಸರ್ ಸ್ಕೇಲ್-II & III (ಮ್ಯಾನೇಜರ್‌ಗಳು): 125 ಹುದ್ದೆಗಳು
ಅರ್ಹತೆ:
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕರ್ನಾಟಕದಲ್ಲಿ ಅರ್ಜಿ ಸಲ್ಲಿಸುವವರಿಗೆ ಕನ್ನಡ ಭಾಷೆಯ ಜ್ಞಾನ (ಓದಲು, ಬರೆಯಲು ಮತ್ತು ಮಾತನಾಡಲು) ಕಡ್ಡಾಯವಾಗಿರುತ್ತದೆ.
ವಯೋಮಿತಿ (01/09/2026 ಕ್ಕೆ ಅನ್ವಯಿಸುವಂತೆ): ಆಫೀಸ್ ಅಸಿಸ್ಟೆಂಟ್: 18 ರಿಂದ 28 ವರ್ಷ, ಆಫೀಸರ್ ಸ್ಕೇಲ್-I: 18 ರಿಂದ 30 ವರ್ಷ (ನಿಯಮಾವಳಿಗಳ ಪ್ರಕಾರ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ).
ಸಂಬಳ:
ಹುದ್ದೆಗಳಿಗೆ ಅನುಗುಣವಾಗಿ ₹37,300 ರಿಂದ ₹80,400. ಇದರೊಂದಿಗೆ DA, HRA ಹಾಗೂ ಇತರ ಭತ್ಯೆಗಳು ಸಿಗುತ್ತವೆ.
ಪ್ರಮುಖ ದಿನಾಂಕಗಳು:
ಆನ್‌ಲೈನ್ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ: ಆಗಸ್ಟ್ 31, 2026 ರಿಂದ ಸೆಪ್ಟೆಂಬರ್ 21, 2026.
ಪೂರ್ವಭಾವಿ ಪರೀಕ್ಷೆ : ನವೆಂಬರ್ / ಡಿಸೆಂಬರ್ 2026.
ಮುಖ್ಯ ಪರೀಕ್ಷೆ : ಡಿಸೆಂಬರ್ 2026 / ಜನವರಿ 2027.
ಅರ್ಜಿ ಶುಲ್ಕ:
ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ₹175, ಇತರ ಎಲ್ಲಾ ಅಭ್ಯರ್ಥಿಗಳಿಗೆ ₹850
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ: ಸಕ್ರಿಯವಾಗಿರುವ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಇರಬೇಕು.
ಭಾವಚಿತ್ರ: ಇತ್ತೀಚಿನ ಬಣ್ಣದ ಫೋಟೋ (ಫೈಲ್ ಗಾತ್ರ: 20-50 KB).
ಸಹಿ : ಬಿಳಿ ಹಾಳೆಯ ಮೇಲೆ ಕಪ್ಪು ಶಾಯಿಯಲ್ಲಿ ಸಹಿ ಮಾಡಿರಬೇಕು (ಫೈಲ್ ಗಾತ್ರ: 10-20 KB). ದೊಡ್ಡ ಅಕ್ಷರಗಳಲ್ಲಿ ಇರುವ ಸಹಿ ಮಾನ್ಯ ಮಾಡಲಾಗುವುದಿಲ್ಲ.
ಎಡಗೈ ಹೆಬ್ಬೆರಳ ಗುರುತು: ಬಿಳಿ ಹಾಳೆಯ ಮೇಲೆ ನೀಲಿ ಅಥವಾ ಕಪ್ಪು ಶಾಯಿಯ ಹೆಬ್ಬೆರಳ ಗುರುತು (ಫೈಲ್ ಗಾತ್ರ: 20-50 KB).
ಕೈಬರಹದ ಘೋಷಣೆ: ಬಿಳಿ ಹಾಳೆಯ ಮೇಲೆ ಇಂಗ್ಲಿಷ್‌ನಲ್ಲಿ ನೀವೇ ಸ್ವತಃ ಬರೆದ ಘೋಷಣಾಪತ್ರದ ಸ್ಕ್ಯಾನ್ ಪ್ರತಿ (ಫೈಲ್ ಗಾತ್ರ: 50-100 KB).
ಆನ್‌ಲೈನ್ ಅರ್ಜಿ ಸಲ್ಲಿಸುವ ಹಂತಗಳು:
ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿಮೊದಲಿಗೆ IBPS ಆನ್‌ಲೈನ್ ರಿಜಿಸ್ಟ್ರೇಷನ್ ಪೋರ್ಟಲ್ ಗೆ ಭೇಟಿ ನೀಡಿ.
ಹಂತ 2: ಹೊಸ ನೋಂದಣಿ ಮುಖಪುಟದಲ್ಲಿ ಕಾಣಿಸುವ "Click here for New Registration" ಬಟನ್ ಮೇಲೆ ಕ್ಲಿಕ್ ಮಾಡಿ.ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ನಮೂದಿಸಿ ರಿಜಿಸ್ಟರ್ ಮಾಡಿ.ತಕ್ಷಣವೇ ನಿಮ್ಮ ಮೊಬೈಲ್ ಮತ್ತು ಇಮೇಲ್‌ಗೆ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಸಂದೇಶ ಬರಲಿದೆ.
ಹಂತ 3: ಮೂಲ ವಿವರಗಳ ಸಲ್ಲಿಕೆ ಬಂದಿರುವ ನೋಂದಣಿ ಸಂಖ್ಯೆ ಬಳಸಿ ಲಾಗಿನ್ ಆಗಿ.ನಿಮ್ಮ ವೈಯಕ್ತಿಕ ವಿವರಗಳು, ಶೈಕ್ಷಣಿಕ ಅರ್ಹತೆ, ಜಾತಿ ಮತ್ತು ವಯೋಮಿತಿ ಸಡಿಲಿಕೆಯ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.
ಹಂತ 4: ಫೋಟೋ ಮತ್ತು ಸಹಿ ಅಪ್‌ಲೋಡ್ ಸೂಚಿಸಲಾದ ನಿಗದಿತ ಗಾತ್ರದಲ್ಲಿ ನಿಮ್ಮ ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
ಹಂತ 5: ಬ್ಯಾಂಕ್ ಆದ್ಯತೆ ಆಯ್ಕೆ ನೀವು ಕರ್ನಾಟಕದಲ್ಲಿ ಅರ್ಜಿ ಸಲ್ಲಿಸುತ್ತಿದ್ದರೆ, ರಾಜ್ಯದ ಗ್ರಾಮೀಣ ಬ್ಯಾಂಕುಗಳಾದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಗಳಿಗೆ ನಿಮ್ಮ ಮೊದಲ ಮತ್ತು ಎರಡನೇ ಆದ್ಯತೆಯನ್ನು ನೀಡಿ.
ಹಂತ 6: ಹೆಬ್ಬೆರಳ ಗುರುತು ಮತ್ತು ಘೋಷಣಾಪತ್ರ ಅಪ್‌ಲೋಡ್: ಎಡಗೈ ಹೆಬ್ಬೆರಳ ಗುರುತು ಮತ್ತು ಕೈಬರಹದ ಘೋಷಣಾಪತ್ರವನ್ನು ಅಪ್‌ಲೋಡ್ ಮಾಡಿ.
ಹಂತ 7: ಪೂರ್ವವೀಕ್ಷಣೆ 'Save & Next' ನೀಡುವ ಮುನ್ನ ನಿಮ್ಮ ಇಡೀ ಅರ್ಜಿಯನ್ನು ಒಮ್ಮೆ ಕೂಲಂಕಷವಾಗಿ ಪರಿಶೀಲಿಸಿ. ತಪ್ಪುಗಳಿದ್ದರೆ ಸರಿಪಡಿಸಿ, ನಂತರ "Final Submit" ಬಟನ್ ಕ್ಲಿಕ್ ಮಾಡಿ. (ಒಮ್ಮೆ ಸಬ್ಮಿಟ್ ಮಾಡಿದ ನಂತರ ಬದಲಾವಣೆಗೆ ಅವಕಾಶವಿರುವುದಿಲ್ಲ).
ಹಂತ 8: ಅರ್ಜಿ ಶುಲ್ಕ ಪಾವತಿ: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ UPI ಮೂಲಕ ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕ ಪಾವತಿಸಿ (General/OBC ಗೆ ₹850, SC/ST/PWD ಗೆ ₹175).ಶುಲ್ಕ ಪಾವತಿಯಾದ ನಂತರ, ಭರ್ತಿ ಮಾಡಿದ ನಿಮ್ಮ ಅರ್ಜಿ ಫಾರ್ಮ್ ಮತ್ತು ಶುಲ್ಕದ ರಶೀದಿಯನ್ನು ಕಡ್ಡಾಯವಾಗಿ ಪ್ರಿಂಟ್ ತೆಗೆದು ನಿಮ್ಮ ಬಳಿ ಇಟ್ಟುಕೊಳ್ಳಿ.
ಅರ್ಜಿ ಸಲ್ಲಿಸುವ ಲಿಂಕ್: