ಬಾಲಿವುಡ್

ಅಜರ್ ತುಮ್ ಮಿಲ್ ಜಾವೋ...

'ಒಂದಾನೊಂದು ಕಾಲದಲ್ಲಿ ಮುಂಬೈಯಲ್ಲಿ' ಇಮ್ರಾನ್ ಹಶ್ಮಿ ಜೊತೆ ಕಾಣಿಸಿಕೊಂಡು ನಂತರ ನಾಪತ್ತೆಯಾಗಿದ್ದ ಪ್ರಾಚೀನ ನಟಿ ಪ್ರಾಚೀ ದೇಸಾಯಿ ಮತ್ತೆ ವಾಪಸ್ ಬಂದಿದ್ದಾಳೆ.

ಆಕೆಗೆ ಲಕ್ ಕುದುರಬೇಕು ಅಂದ್ರೆ ಮತ್ತೆ ಇಮ್ರಾನ್ ಹಶ್ಮಿಯ ಮಾಂತ್ರಿಕ ಸ್ಪರ್ಶದ ಅಗತ್ಯವಿದೆ ಅನಿಸಿರಬೇಕೇನೋ. ಬಾಲಾಜಿ ಪ್ರೊಡಕ್ಷನ್‌ನ ಹೊಸ ಚಿತ್ರದಲ್ಲಿ ಮತ್ತೆ ಈ ಜೋಡಿ ಪ್ರೇಕ್ಷಕರ ಮೈ ಬಿಸಿ ಏರಿಸಲಿದೆ.

ಹಾಗಂತ ಇದು ಬಿಸಿಬಿಸಿ ದೃಶ್ಯಗಳಿರೋ ಸಿನಿಮಾವೇನಲ್ಲ. ಆದರೆ ಬಿಸಿ ಸುದ್ದಿಯಾಗಬಲ್ಲ ಸಿನಿಮಾ. ಯಾಕಂದ್ರೆ ಈಕೆ ನಟಿಸುತ್ತಿರುವುದು ಭಾರತದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಅಜರುದ್ದೀನ್‌ನ ಜೀವನಗಾಥೆಯ ಚಿತ್ರದಲ್ಲಿ .

ಅದು ಮೊದಲ ಪತ್ನಿಯ ನೌರೀನ್ ಪಾತ್ರದಲ್ಲಿ! ಎರಡನೇ ಪತ್ನಿ ಸಂಗೀತಾ ಬಿಜಲಾನಿಯ ಪಾತ್ರವಾಗಿದ್ದರೆ ಒಂಚೂರು ಗ್ಲಾಮರ್‌ಗೆ ಅವಕಾಶವಿರುತ್ತಿತ್ತೇನೋ. ಈ ಪಾತ್ರದಲ್ಲಿ ಗ್ಲಾಮರ್‌ಗಿಂತ ಅಭಿನಯಕ್ಕೆ ಹೆಚ್ಚು ಪ್ರಾಶಸ್ತ್ಯ. ಪ್ರಾಚಿ ತನ್ನ ಇಮೇಜ್ ಬದಲಾದೀತೆಂದು ಒಪ್ಪಿಕೊಂಡಿದ್ದಾಳಂತೆ. ಇಮ್ರಾನ್ ಹಶ್ಮಿ ಈಗಾಗಲೇ ತನ್ನ ಲುಕ್ಕುಗಳನ್ನು ಅಜರ್‌ಗೆ ಹೋಲುವಂತೆ ಬದಲಾಯಿಸಿಕೊಳ್ಳಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾನಂತೆ. ಪ್ರಾಚಿ ಕೂಡ ನೌರೀನ್ ಬಗ್ಗೆ ತಿಳಿದುಕೊಳ್ಳುವಲ್ಲಿ ಬ್ಯುಸಿ. ಸಂಗೀತ ಬಿಜಲಾನಿ ಪಾತ್ರದಲ್ಲಿ ಕರೀನಾ ಕಪೂರ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

SCROLL FOR NEXT