ಯಾರಿಗೋ ಸಂಬಂಧಿಸಿದ ಸುದ್ದಿಯಲ್ಲಿ ಇನ್ಯಾರನ್ನೋ ದಿಢೀರ್ ಎಳೆದು ತಂದುಬಿಡೋದು ಸೆಲೆಬ್ರಿಟಿ ಲೈಫಲ್ಲಿ ಕಾಮನ್ನು. ಅದರಲ್ಲೂ ಹಳೆಯ ಅಫೇರುಗಳಿಗೆ ಯಾವತ್ತಿಗೂ ಸಾವಿಲ್ಲ ಎಂಬುದು ಪದೇ ಪದೇ ರುಜುವಾತಾಗುತ್ತಲೇ ಇರುತ್ತದೆ.
ಧೋನಿಯ ಟೆಸ್ಟ್ ಕ್ರಿಕೆಟ್ ವಿದಾಯಕ್ಕೂ ನಟಿ ಲಕ್ಷ್ಮೀ ರೈಗೂ ಎಲ್ಲಿಯ ಸಂಬಂಧ ಅಂತ ಅಚ್ಚರಿಯಾಗಬಹುದು. ಆದರೆ ಧೋನಿ ರಿಟೈರ್‌ಮೆಂಟ್ ಸಂಬಂಧಿ ಸುದ್ದಿಗಳಲ್ಲೆಲ್ಲಾ ಅಲ್ಲಲ್ಲಿ ಲಕ್ಷ್ಮಿ ರೈ ಹೆಸರು ಪ್ರಸ್ತಾಪವಾಗುತ್ತಲೇ ಇತ್ತು.
ಕಾರಣ ಅವರಿಬ್ಬರ ನಡುವೆ ಐದು ವರ್ಷಗಳ ಹಿಂದೆ ಇದ್ದ ಅಫೇರು. ಅದು ಯಾವತ್ತೋ ಮುರಿದುಬಿದ್ದಿದೆ. ಆ ನಂತರ ಧೋನಿಗೆ ಸಾಕ್ಷಿ ಜೊತೆ ಮದುವೆಯಾಗಿದೆ. ಲಕ್ಷ್ಮಿ ರೈ ಸ್ವತಃ ಹೇಳಿರುವಂತೆ ಈ ನಾಲ್ಕು ವರ್ಷಗಳಲ್ಲಿ ನಾಲ್ಕು ಅಫೇರ್ ಮೆಂಟೇನ್ ಮಾಡಿದ್ದಾಳೆ. ಆದರೂ ಆಕೆಯ ಮತ್ತು ಧೋನಿಯ ಸಂಬಂಧದ ಸುದ್ದಿ ಮಾತ್ರ ಇನ್ನಾದರೂ ಸತ್ತಿಲ್ಲ. ಇದೀಗ ಮತ್ತೆ ಆ ಗಾಸಿಪ್ ಫೀನಿಕ್ಸ್ ರೆಕ್ಕೆ ಬಡಿಯುತ್ತಿದ್ದ ಹಾಗೇ ಲಕ್ಷ್ಮಿ ರೈ 'ನಮ್ಮಿಬ್ಬರ ಸಂಬಂಧ ನನ್ನ ಮೈಮೇಲಿನ ಗಾಯದ ಕಲೆಯಂತೆ. ಅದು ಯಾವತ್ತಿಗೂ ಅಳಿಸಲಾಗದು ಅದನ್ನೇ ಮೀಡಿಯಾಗಳು ಮತ್ತೆ ಮತ್ತೆ ಕೆರೆಯುತ್ತಿವೆ' ಎಂದು ನೊಂದು ನುಡಿದಿದ್ದಾಳೆ. ' ನನ್ನ ಮಕ್ಕಳೂ ಮುಂದೊಮ್ಮೆ ಧೋನಿ ಜತೆಗಿನ ಸಂಬಂಧದ ಬಗ್ಗೆ ಟಿವಿ ನೋಡಿ ನನ್ನನ್ನು ಪ್ರಶ್ನಿಸಿದರೂ ಅಚ್ಚರಿಯಿಲ್ಲ' ಎಂದು ಸಿಡುಕಿದ್ದಾಳೆ.