ಐಶ್ವರ್ಯ ರೈ ಬಚ್ಚನ್ 
ಬಾಲಿವುಡ್

ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಐಶ್ವರ್ಯ?

ಐಶ್ವರ್ಯ ಹಲವು ದಿನಗಳ ನಂತರ ಮತ್ತೆ ಬೆಳ್ಳಿ ತೆರೆಗೆ ಆಗಮಿಸಲು ಉತ್ಸುಹಕ..

ಮಾಜಿ ವಿಶ್ವಸುಂದರಿ, ಭಾರತೀಯ ಚಿತ್ರರಂಗದ ಮೋಹಕ ನಟಿ ಐಶ್ವರ್ಯ ರೈ ಬಚ್ಚನ್ ಇದೀಗ ಪೊಲೀಸ್ ಅಧಿಕಾರಿ ಆಗಲು ಹೊರಟ್ಟಿದ್ದಾರೆ. ಅರೆ ಇದೇನಿದು ಹೊಸ ಸುದ್ದಿ ಅಂತ ಅಚ್ಚರಿಗೊಳಗಾಗಬೇಡಿ. ಸದ್ಯ ಇದು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿರುವ ಲೇಟೆಸ್ಟ್ ಸುದ್ದಿ.

ಐಶ್ವರ್ಯ ಹಲವು ದಿನಗಳ ನಂತರ ಮತ್ತೆ ಬೆಳ್ಳಿ ತೆರೆಗೆ ಆಗಮಿಸಲು ಉತ್ಸುಹಕರಾಗಿದ್ದು, ಉನ್ನತ ಕಥೆಗಾಗಿ ಕಾಯುತ್ತಿದ್ದರಂತೆ. ಅವರ ಅಭಿರುಚಿಗೆ ತಕ್ಕಂತೆ ಇದೀಗ ಉತ್ತಮ ಕಥೆ, ಚಿತ್ರಕಥೆ ದೊರೆತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್‌ನ ಪ್ರಖ್ಯಾತ ನಿರ್ದೇಶಕರಾಗಿರುವ ಸುಜಯ್ ಘೋಶ್ ಅವರ ಮುಂದಿನ ಚಿತ್ರ ಸೆಟ್ಟೇರಲು ಸಿದ್ದಗೊಂಡಿದೆ. ಸುಜಯ್ ಘೋಶ್ ಅವರ 'ದುರ್ಗಾ ರಾಣಿ ಸಿಂಗ್‌' ಚಿತ್ರದಲ್ಲಿ ಐಶ್ವರ್ಯ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಟೈಟಲೇ ಹೇಳುವ ಹಾಗೆ ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದೆ. ಈ ಚಿತ್ರದಲ್ಲಿ ನೀಲಿಗಣ್ಣಿನ ಚೆಲುವೆ, ಐಶ್ವರ್ಯ ರೈ ಬಚ್ಟನ್ ಟಫ್ ಲೇಡಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುವ ಅವಕಾಶ ಕೂಡಿಬಂದಿದೆ.

ಮತ್ತೊಂದು ಇಂಟರೆಸ್ಟಿಂಗ್ ಸುದ್ದಿ ಎಂದ್ರೆ, ಇದೇ ವೇಳೆ ಬಾಲಿವುಡ್‌ನ ಮತ್ತೊಬ್ಬ ಹೆಸರಾಂತ ನಿರ್ದೇಶಕರಾಗಿರುವ ಪ್ರಕಾಶ್ ಜಾ, 'ಗಂಗಾಜಲ್2' ಚಿತ್ರ ಮಾಡಲು ಮುಂದಾಗಿದ್ದಾರೆ. ಇದು ಸಹ ಮಹಿಳಾ ಪ್ರಧಾನ ಕಥೆಯಾಗಿದ್ದು, 'ಗಂಗಾಜಲ್2' ಚಿತ್ರದಲ್ಲೂ ಐಶ್ವರ್ಯ ರೈಗೆ ಮಹಿಳಾ ಪೊಲೀಸ್ ಪಾತ್ರ ನೀಡಲಾಗಿದೆಯಂತೆ.

ಒಟ್ಟಿನಲ್ಲಿ ಐಶ್ವರ್ಯ ರೈ ಅವರ ಎರಡೂ ಬ್ಯಾಕ್ ಟು ಬ್ಯಾಕ್ ಚಿತ್ರಗಳು ಲೇಡಿ ಪೊಲೀಸ್ ಕ್ಯಾರೆಕ್ಟರ್ ಹೊಂದಿದ್ದು, ಯಾವ ಚಿತ್ರಕ್ಕೆ ಐಶ್ ಸಹಿಹಾಕಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ