ರಣಬೀರ್ ಕಪೂರ್ ಮತ್ತು ಅಲಿಯಾಭಟ್ 
ಬಾಲಿವುಡ್

ಅಲಿಯಾ ಏಪ್ರಿಲ್ ತಾರೆ

ಅಲಿಯಾಭಟ್ ಗೆ ಬರ್ಫಿ ರಣಬೀರ್ ಮೇಲೆ ಕ್ರಷ್ ಇದೆ ಎಂದು ಪಿಂಕ್ ವಿಲ್ಲಾ. ಕಾಮ್ ಎಂಬ ವೆಬ್ ಪತ್ರಿಕೆಯಲ್ಲಿ ವರದಿಯಾಗಿದೆಯಂತೆ. ಇದು ಏಪ್ರಿಲ್ ಮೊದಲ ದಿನ ಪ್ರಕಟವಾಗಿರೋದ್ರಿಂದ ಯಾರೂ ನಂಬಲು ತಯಾರಿಲ್ಲ...

ಅಲಿಯಾಭಟ್ ಗೆ ಬರ್ಫಿ ರಣಬೀರ್ ಮೇಲೆ ಕ್ರಷ್ ಇದೆ ಎಂದು ಪಿಂಕ್ ವಿಲ್ಲಾ.ಕಾಮ್ ಎಂಬ ವೆಬ್ ಪತ್ರಿಕೆಯಲ್ಲಿ ವರದಿಯಾಗಿದೆಯಂತೆ. ಇದು ಏಪ್ರಿಲ್ ಮೊದಲ ದಿನ ಪ್ರಕಟವಾಗಿರೋದ್ರಿಂದ ಯಾರೂ ನಂಬಲು ತಯಾರಿಲ್ಲ.

ಅಷ್ಟೇ ಅಲ್ಲ ಮಿಸ್ ವೋಗ್ ಪತ್ರಿಕೆ ತನ್ನ ಏಪ್ರಿಲ್ ಸಂಚಿಕೆಯ ಮುಖಪುಟದಲ್ಲಿ ಅಲಿಯಾ ಭಟ್ ಫೋಟೋ ಹಾಕಿದೆಯಂತೆ. ಅಲಿಯಾಳನ್ನು ಏಪ್ರಿಲ್ ತಾರೆ ಅನ್ನುವ ಮೂಲಕ ಆಕೆಯ ಬಗೆಗಿನ ಜೋಕ್ ಗಳಿಗೆ ಪುಷ್ಟಿ ಸಿಕ್ಕಿದೆ ಎಂದು ಓದುಗರು ಕವರ್ ಪುಟದ ಬಗ್ಗೆ ಕಮೆಂಟ್ ಮಾಡಿದ್ದಾರಂತೆ. ಆದರೆ ಬಾಲಿವುಡ್ ಬೇರೆಯೇ ಭವಿಷ್ಯ ನುಡಿಯುತ್ತಿದೆ.

ಅಲಿಯಾ ಭಟ್ ಈ ಎಲ್ಲ ಜೋಕುಗಳ ನಡುವೆಯೂ ಶೀಘ್ರದಲ್ಲಿ ನಂಬರ್ ಒನ್ ತಾರೆಯಾಗುವುದು ಖಚಿತ ಎನ್ನುತ್ತಿದೆ ಇಂಡಸ್ಟ್ರಿ. ಆಕೆ ನಟಿಸಿರುವ ಸ್ಟೂಡೆಂಟ್ ಅಫ್ ದಿ ಇಯರ್, ಹೈವೇ, ಟು ಸ್ಟೇಟ್ಸ್ ಮ್ತತು ಹಂಪ್ತಿ ಶರ್ಮಾಕಿ ದುಲ್ಹನಿಯಾ ಚಿತ್ರಗಳು ಸಾಲಾಗಿ ಹಿಟ್ ಆಗಿರುವುದನ್ನು ಜೋಕ್ ಮಾಡುವವರು ಗಮನಿಸಿಲ್ಲ. ಆಕೆಗಿರುವ ನಿರ್ದೇಶನ ಜ್ಞಾನ, ಹಾಡುವ ಕಲೆ ಇದೆಲ್ಲದರೊಂದಿಗೆ ಬೆರೆತಿರುವ ಮುಗ್ಧತೆ ಆಕೆಯ ಪಟ್ಟವನ್ನು ಭದ್ರಗೊಳಿಸಲಿದೆ ಎಂಬುದು ಪಂಡಿತರ ಲೆಕ್ಕಾಚಾರ. ಆಕೆಯೇ ಹೇಳುವಂತೆ ತನ್ನ ಬಗೆಗಿನ ಜೋಕುಗಳು ಪ್ರಚಾರ ದೃಷ್ಟಿಯಿಂದ ವರವಾಗಿ ಪರಿಣಮಿಸಿದೆಯಂತೆ. ಈ ವರ್ಷ ಆಕೆಗಿರುವ ಆಫರ್ ಗಳನ್ನು ನೋಡಿದರೆ, ಬಾಲಿವುಡ್ ಲೆಕ್ಕಾಚಾರ ಸರಿ ಇರಬಹುದು ಅನಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ