ತೊಟ್ಟ ಬಟ್ಟೆ, ಮಾಡಿಕೊಂಡ ಕೇಶ ವಿನ್ಯಾಸ ಎಲ್ಲವೂ ಅಭಿಮಾನಿಗಳ ಟ್ರೆಂಡ್ ಆಗಿ ಬದಲಾಗಿಬಿಡುವಷ್ಟು ಜನಪ್ರಿಯಳಾಗಿದ್ದಾಳೆ ನಟಿ ಕಂಗನಾ. ಕಂಗನಾ ಫ್ಯಾಷನ್ ಲೋಕದ ಹಿನ್ನೆಲೆಯಿಂದ ಬಂದು, ಬಾಲಿವುಡ್‍ನಲ್ಲಿ ಉತ್ತುಂಗಕ್ಕೇರಿದವರು.
ಇಂದಿಗೂ ಆಗೀಗ ಕೆಂಪುಹಾಸಿನ ಮೇಲೆ ಬೆಕ್ಕಿನ ನಡಿಗೆ ಅವರಿಗೆ ಇಷ್ಟವಾದ ಕೆಲಸ. ಸಿನಿಮಾಗಳ ಆಯ್ಕೆಯಲ್ಲಿ ಮಾತ್ರವಲ್ಲ, ಫ್ಯಾಷನ್ ಷೋಗಳ ಆಯ್ಕೆಯಲ್ಲಿಯೂ ಕಂಗನಾ ಚೂಸಿಯಂತೆ. `ಯಾವ್ಯಾವುದೋ ವಿನ್ಯಾಸಕರ ಉಡುಪನ್ನು ತೊಟ್ಟು ರ್ಯಾಂಪ್ ಮೇಲೆ ನಡೆಯವುದು ನನಗೆ ಒಗ್ಗುವುದಿಲ್ಲ. ಒಂದು ಫ್ಯಾಷನ್ ಷೋ ಒಪ್ಪಿಕೊಳ್ಳುವಾಗ ನಾನು ವಿನ್ಯಾಸಕರು ಮತ್ತು ಅವರ ವಸ್ತ್ರ ಸಂಗ್ರಹವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತೇನೆ.
ಅವು ನನಗೆ ಇಷ್ಟವಾದರೆ ಮಾತ್ರ ಆ ಫ್ಯಾಷನ್ ಷೋ ಒಪ್ಪಿಕೊಳ್ಳುತ್ತೇನೆ' ಎನ್ನುತ್ತಾರೆ ಕಂಗನಾ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಫ್ಯಾಷನ್ ಷೋ ಒಂದರಲ್ಲಿ ಮಾನವ್ ಗಂಗ್ವಾನಿ ವಿನ್ಯಾಸದ ಉಡುಗೆ ತೊಟ್ಟು ಕೆಂಪು ಹಾಸಿನ ಮೇಲೆ ಹೆಜ್ಜೆ ಹಾಕಿದ ಕಂಗನಾಗೆ ವಿಸ್ತಾರವಾಗಿ ಇಳಿಬಿಡುವ ಬಟ್ಟೆಗಳೆಂದರೆ ತುಂಬಾ ಇಷ್ಟವಂತೆ.