ಮುಂಬಯಿ: ಬಾಲಿವುಡ್ ದಂತಕತೆ, ಪಾಲ್ಕೆ ಪ್ರಶಸ್ತಿ ಪುರಸ್ಕೃತ, ಹಿರಿಯ ನಟ ದಿಲೀಪ್ ಕುಮಾರ್ ಶುಕ್ರವಾರ 93ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದರೆ ಚೆನ್ನೈ ಪ್ರವಾಹ ಸಂತ್ರಸ್ತರಿಗೆ ಬೆಂಬಲಿಸುವ ಸಲುವಾಗಿ ಈ ಬಾರಿ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಕುಟುಂಬ ಸದಸ್ಯರೊಂದಿಗೆ ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಗುವುದು. ಚೆನ್ನೈ ಪ್ರವಾಹದ ಕುರಿತು ನನಗೆ ದುಃಖವಿದೆ. ಇದೊಂದು ಮಹಾ ದುರಂತವಾಗಿದ್ದು, ಈ ಸಂದರ್ಭದಲ್ಲಿ ನಾನು ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಬಯಸುವುದಿಲ್ಲ ಎಂದು ದಿಲೀಪ್ ಕುಮಾರ್ ತಿಳಿಸಿರುವುದಾಗಿ ಅವರ ಪತ್ನಿ ಸಾಯಿರಾ ಬಾನು ತಿಳಿಸಿದ್ದಾರೆ.
1944ರಲ್ಲಿ ಜವರ್ ಭತ್ತ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ ದಿಲೀಪ್ ಕುಮಾರ್ ಬಾಲಿವುಡ್ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಬಾಲಿವುಡ್ನ ಹಲವಾರು ನಟರಿಗೆ ಪ್ರೇರಣೆಯಾದವರು. ಇವರು ಅಂದಾಜ್ (1949), ಸ್ವಷ್ಬಕ್ಲಿಂಗ್ ಆನ್ (1952), ದೇವದಾಸ್ (1955), ಆಜಾದ್ (1955), ಮುಘಲ್ ಎ ಆಜಮ್ (1960) ಮತ್ತು ಗಂಗಾ ಜಮುನಾ (1961)ದಂತಹ ಸೂಪರ್ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ