ನಟ ಸಲ್ಮಾನ್ ಖಾನ್ ಮತ್ತು ರೊಮೇನಿಯನ್ ಮಾಧ್ಯಮ ನಿರೂಪಕಿ ಲುಲಿಯಾ (ಸಂಗ್ರಹ ಚಿತ್ರ) 
ಬಾಲಿವುಡ್

ಕೋರ್ಟ್ ತೀರ್ಪು ಕೇಳಿ ಕುಸಿದು ಬಿದ್ದ ಸಲ್ಲು ಪ್ರೇಯಸಿ ಲುಲಿಯಾ..!

ನಟಿ ಕತ್ರಿನಾ ಕೈಫ್ ಜೊತೆಗಿನ ಸ್ನೇಹ ಸಂಬಂಧ ಮುರಿದು ಬಿದ್ದ ಬಳಿಕ ಬಾಲಿವುಡ್ ನ ಭಾಯ್ ಜಾನ್ ಸಲ್ಲು ಭಾಯ್ ರೊಮೇನಿಯನ್ ಚೆಲುವೆ ಲುಲಿಯಾ ವಂಟುರ್ ಜೊತೆ ಡೇಟಿಂಗ್ ನಡೆಸುತ್ತಿರುವ ವಿಚಾರ ಹಳೆಯದೇನಲ್ಲ...

ನಟಿ ಕತ್ರಿನಾ ಕೈಫ್ ಜೊತೆಗಿನ ಸ್ನೇಹ ಸಂಬಂಧ ಮುರಿದು ಬಿದ್ದ ಬಳಿಕ ಬಾಲಿವುಡ್ ನ ಭಾಯ್ ಜಾನ್ ಸಲ್ಲು ಭಾಯ್ ರೊಮೇನಿಯನ್ ಚೆಲುವೆ ಮತ್ತು ಮಾಧ್ಯಮ ನಿರೂಪಕಿ ಲುಲಿಯಾ ವಂಟುರ್  ಜೊತೆ ಡೇಟಿಂಗ್ ನಡೆಸುತ್ತಿರುವ ವಿಚಾರ ಹಳೆಯದೇನಲ್ಲ.

ಪ್ರಸ್ತುತ ಈ ರೊಮೆನಿಯನ್ ಚೆಲುವೆ ಭಾರತದಲ್ಲಿಯೇ ಇದ್ದು, ಕೆಲ ಬಾಲಿವುಡ್ ಗಾಸಿಪ್ ಗಳ ಅನ್ವಯ ಈ ಜೋಡಿ ವರ್ಷದ ಹಿಂದೆಯೇ ವಿವಾಹ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದೆ ಎಂದು  ಹೇಳಲಾಗುತ್ತಿದೆ. ಆದರೆ ಈ ವಿಚಾರದ ಬಗೆಗಿನ ಯಾವುದೇ ರೀತಿಯ ಮಾಹಿತಿಯನ್ನು ಮತ್ತು ಅದಕ್ಕೆ ಸಂಬಂಧಿಸಿದ ಸ್ಪಷ್ಟನೆಯನ್ನು ಉಭಯ ಕುಟುಂಬದ ಯಾವೊಬ್ಬ ಸದಸ್ಯರೂ ಕೂಡ  ನೀಡಿಲ್ಲ. ಪ್ರಸ್ತುತ ಈ ಎಲ್ಲ ವಿಚಾರಗಳು ಹಳೆಯದ್ದಾಗಿದ್ದು, ಹೊಸ ವಿಚಾರವೆಂದರೆ, 2002ರ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಅಂತಿಮ ತೀರ್ಪು ಪ್ರಕಟಗೊಂಡ ವೇಳೆ ಸಲ್ಲು  ಪ್ರೇಯಸಿ ಲುಲಿಯಾ ಅವರ ಪ್ರತಿಕ್ರಿಯೆ ಏನಾಗಿತ್ತು ಎಂದು.

ಏಕೆಂದರೆ ಭಾರತದ ಸಂವಿಧಾನ ಮತ್ತು ಕಾನೂನು ಪ್ರಕ್ರಿಯೆಯ ಗಂಧಗಾಳಿಯೇ ತಿಳಿಯದ ಈ ರೊಮೇನಿಯನ್ ಚೆಲುವೆಗೆ ಪ್ರಕರಣದ ತೀರ್ಪು ಎಲ್ಲಿ ಸಲ್ಮಾನ್ ಖಾನ್ ವಿರುದ್ಧ ಬರುತ್ತದೆಯೋ  ಎಂದು ಚಿಂತಾಕ್ರಾಂತಳಾಗಿದ್ದಳಂತೆ. ಹೀಗಾಗಿಯೇ ತನ್ನ ತವರಿಗೂ ತೆರಳದೇ ಭಾರತದಲ್ಲಿಯೇ ಈಕೆ ಉಳಿದುಕೊಂಡಿದ್ದಳಂತೆ. ಅಲ್ಲದೆ ಪ್ರಕರಣದಿಂದ ಸಲ್ಮಾನ್ ದೋಷಮುಕ್ತರಾಗಲಿ ಎಂದು  ನಿನ್ನೆ ಬೆಳಗ್ಗಿನಿಂದಲೇ ದೇವರಲ್ಲಿ ಬೇಡುತ್ತಿದ್ದರಂತೆ. ಅದರಂತೆ ನಿನ್ನೆ ಮಧ್ಯಾಹ್ನ ತೀರ್ಪು ಹೊರಬಿದ್ದಿದ್ದು, ಭಾಯ್ ಜಾನ್ ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ.



ತೀರ್ಪಿನ ಕುರಿತು ಮುಂಬೈನಲ್ಲಿರುವ ಗೆಳೆಯರೊಬ್ಬರ ಮನೆಯಲ್ಲಿ ಟಿವಿ ನೋಡುತ್ತಿದ್ದ ಲುಲಿಯಾ, ತೀರ್ಪು ಪ್ರಕಟಗೊಳ್ಳುತ್ತಿದ್ದಂತೆಯೇ ಸಂತೋಷ ತಡೆಯಲಾಗದೇ ಕುಸಿದು ಬಿದ್ದರಂತೆ, ಅಲ್ಲದೆ  ಸಲ್ಮಾನ್ ಖಾನ್ ರನ್ನು ನೆನೆದು ಬಿಕ್ಕಳಿಸಿ ಅತ್ತರಂತೆ.

ಒಟ್ಟಾರೆ ದಶಕಗಳಿಂದ ಸಲ್ಮಾನ್ ಖಾನ್ ಬೆನ್ನಿಗೆ ಬಿದ್ದಿದ್ದ ಪ್ರಕರಣವೊಂದು ಕಳಚಿಬಿದ್ದಿದ್ದು, ಬಂಧನ ಭೀತಿಯಿಂದ ತನ್ನ ಗೆಳೆಯ ಪಾರಾಗಿದ್ದಕ್ಕೆ ಲುಲಿಯಾ ತುಂಬಾ ಖುಷಿಯಾಗಿರುವಂತಿದೆ. ಈ  ಸಂತಸದ ಕ್ಷಣದಲ್ಲಿಯಾದರೂ ನಟ ಸಲ್ಮಾನ್ ಖಾನ್ ತಮ್ಮ ಮದುವೆ ವಿಚಾರವನ್ನು ಘೋಷಣೆ ಮಾಡುವ ಮೂಲಕ ಬಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂಬ ಹಣೆಪಟ್ಟಿಯನ್ನು  ತೊಡೆದುಹಾಕುತ್ತಾರೆಯೇ ಕಾದು ನೋಡಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ನೀವೇನ್ ಮುಚ್ಚೋದು.. ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ; ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

ಮಿಸ್ಟರ್ 'ನಂಗ್ ಗೊತ್ತಿಲ್ಲಾ' ಗೃಹ ಸಚಿವರೇ.. ಇಲ್ನೋಡಿ, ಪುಡಿ ರೌಡಿಗಳ ಹಾವಳಿ: ಪರಮೇಶ್ವರ್ ವಿರುದ್ಧ ಜೆಡಿಎಸ್ ಕಿಡಿ

SCROLL FOR NEXT