ಶಾರುಕ್ ಖಾನ್ 
ಬಾಲಿವುಡ್

ಮಂಡಿ ನೋವು ಗುಣಪಡಿಸಿಕೊಂಡ ಶಾರುಕ್ ಖಾನ್

ಸದ್ಯಕ್ಕೆ ಕೈತುಂಬಾ ಕೆಲಸ ಇಟ್ಟುಕೊಂಡು ಶಾರುಕ್ ಖಾನ್ ತೀವ್ರ ಬ್ಯುಸಿಯಾಗಿದ್ದಾರೆ. 'ಇಂಡಿಯಾ ಪೂಚೇಗ ಸಬ್ಸೆ ಶಾನ್ ಕೌನ್' ಎಂಬ

ಮುಂಬೈ: ಸದ್ಯಕ್ಕೆ ಕೈತುಂಬಾ ಕೆಲಸ ಇಟ್ಟುಕೊಂಡು ಶಾರುಕ್ ಖಾನ್ ತೀವ್ರ ಬ್ಯುಸಿಯಾಗಿದ್ದಾರೆ. 'ಇಂಡಿಯಾ ಪೂಚೇಗ ಸಬ್ಸೆ ಶಾನ್ ಕೌನ್' ಎಂಬ ಟಿವಿ ಕಾರ್ಯಕರ್ಮದ ನಿರೂಪಕರಾಗಿ ಚಿತ್ರೀಕರಣದದಲ್ಲಿ ನಿರತರಾಗಿರುವುದಲ್ಲದೆ, 'ಫ್ಯಾನ್' ಎಂಬ ಸಿನೆಮಾದಲ್ಲೂ ತೊಡಗಿಸಿಕೊಂಡಿದ್ದಾರೆ. 'ರಾಯೀಸ್' ಚಲನಚಿತ್ರ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು ನಂತರ ರೋಹಿತ್ ಶೆಟ್ಟಿ ಅವರ ಯೋಜನೆಗೆ ಕಾಲಿಡಲಿದ್ದಾರೆ. ಇವುಗಳೆಲ್ಲದರ ಮಧ್ಯೆ ತಮ್ಮ ಮಂಡಿ ನೋವನ್ನು ನಿವಾರಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ.

'ಹ್ಯಾಪಿ ನ್ಯೂ ಯಿಯರ್' ಚಿತ್ರದ ಪ್ರಚಾರ ವೇಳೆಯಲ್ಲಿ ಶಾರುಕ್ ಖಾನ್ ತಮ್ಮ ಮಂಡಿಗೆ ಗಾಯ ಮಾಡಿಕೊಂಡಿದ್ದರು ನಂತರ ಅದಕ್ಕೆ ಚಿಕಿತ್ಸೆ ತೆಗೆದುಕೊಳ್ಳುವುದಕ್ಕೂ ಪ್ರಾರಂಭಿಸಿದ್ದರು.

ಟಿವಿ ಕಾರ್ಯಕ್ರಮಕ್ಕೆ ಹೆಚ್ಚು ಹೊತ್ತು ನಿಲ್ಲಬೇಕಿರುವುದರಿಂದ ಇತ್ತೀಚೆಗೆ ವೈದ್ಯರನ್ನು ಕಂಡ ಶಾರುಕ್ ಖಾನ್, ಮಂಡಿ ಸಂಪೂರ್ಣ ಗುಣ ಹೊಂದಿದೆ ಮತ್ತು ತೊಂದರೆಯಿಲ್ಲದೆ ಟಿ ವಿ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ ಎಂದಿದ್ದಾರೆ.

ಶಾರುಕ್ ಖಾನ್ ಅವರ ಶಕ್ತಿ ಮತ್ತು ಸದಾ ದುಡಿಯುವ ಮನೋವೃತ್ತಿ ಕಂಡಾಗ ಇಂತಹ ತೊಂದರೆಗಳ ಜೊತೆಗೂ ಇಷ್ಟೊಂದು ಚಟುವಟಿಕೆಗಳಲ್ಲಿ ಹೇಗೆ ತೊಡಗಿಸಿಕೊಳ್ಳುತ್ತಾರೆ ಎಂದು ಆಶ್ಚರ್ಯವಾಗುತ್ತದೆ. ಮಂಡಿ ನೋವಿನ ಜೊತೆಗೆ ಶಾರುಕ್ ಈ ಹಿಂದೆ ಬೆನ್ನು ಹುರಿ ನೋವು, ಮತ್ತು ಭುಜ ತೊಂದರೆಗಳಿಂದಲು ತೊಂದರೆ ಅನುಭವಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ