ಅಮಿತಾಬ್ ರೇಖಾ ನಟನೆಯ ಸಿನೆಮಾವೊಂದರ ಸ್ಟಿಲ್ 
ಬಾಲಿವುಡ್

ಶಮಿತಾಬ್: ತೆರೆಯ ಮೇಲೆ ಒಂದಾಗದ ಬಿಗ್ ಬಿ-ರೇಖಾ

ವಿಖ್ಯಾತ ಬೆಳ್ಳಿತೆರೆ ಜೋಡಿ,...

ಮುಂಬೈ: ವಿಖ್ಯಾತ ಬೆಳ್ಳಿತೆರೆ ಜೋಡಿ, ಅಮಿತಾಬ್ ಬಚ್ಚನ್ ಮತ್ತು ರೇಖಾ ಕೊನೆಯ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದು ಯಶ್ ಚೋಪ್ರಾ ಅವರ 'ಸಿಲ್ಸಿಲಾ' ಸಿನೆಮಾದಲ್ಲಿ. ಈಗ ೩೩ ವರ್ಷದ ನಂತರ ಶಮಿತಾಬ್ ಚಿತ್ರದಲ್ಲಿ ಇಬ್ಬರೂ ನಟಿಸುತ್ತಿದ್ದಾರೆ.

ಆರ್ ಭಾಲ್ಕಿ ನಿರ್ದೇಶನದ ಈ ಸಿನೆಮಾದಲ್ಲಿ ನಟ ಧನುಶ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಆದರೆ ತೆರೆಯಲ್ಲಿ ಅವರು ಒಟ್ಟಿಗೆ ಕಾಣಿಸಿಕೊಳ್ಳುವ ದೃಶ್ಯಗಳಿಲ್ಲ ಎಂದು ಅಮಿತಾಬ್ ಸಿನೆಮಾದ ಟ್ರೇಲರ್ ಬಿಡುಗಡೆಯಲ್ಲಿ ತಿಳಿಸಿದ್ದಾರೆ. "ನಾವು ಒಟ್ಟಿಗೆ ಕಾಣಿಸಿಕೊಳ್ಳುವುದಿಲ್ಲ... ಇದು ಪ್ರಸಂಗದ ಒಂದು ಭಾಗ ಹಾಗೂ ನೀವು ಸಿನೆಮಾ ನೋಡಿದಾಗ ತಿಳಿಯುತ್ತದೆ ಇದನ್ನು ಹೇಗೆ ವಿಭಿನ್ನವಾಗಿ ಬಿಂಬಿಸಲಾಗಿದೆ. ಆದರೆ ಇಂತಹ ಪ್ರಖ್ಯಾತ ತಾರೆಗಳನ್ನು ಸಿನೆಮಾದಲ್ಲಿ ಆಹ್ವಾನಿಸುವುದೇ ಸಂಭ್ರಮ" ಎಂದಿದ್ದಾರೆ. ಇಬ್ಬರೂ ಮತ್ತೆ ಜೋಡಿಯಾಗಿ ನಟಿಸುವುದನ್ನು ಮುದೊಂದು ದಿನ ನೋಡಬಹುದೇ ಎಂಬ ಪ್ರಶ್ನೆಗೆ ಅಮಿತಾಬ್ ಅವರು "ನಮ್ಮಿಬ್ಬರನ್ನೂ (ಬಿಗ್ ಬಿ ಮತ್ತು ರೇಖಾ) ಒಟ್ಟಿಗೆ ಹಾಕಿಕೊಂಡು ಸಿನೆಮಾ ಮಾಡುವುದಕ್ಕೆ ಭಾಲ್ಕಿ ಯಾವಾಗಲೂ ಆಸಕ್ತಿ ತೋರಿದ್ದಾರೆ ಆದರೆ ಯಾರಾದರೂ ಆಸಕ್ತಿದಾಯಕ ಸ್ಕ್ರಿಪ್ಟ್ ಬರೆಯುತ್ತಾರಾ ಕಾದು ನೋಡಬೇಕು.. ಯಾಕಾಗಬಾರದು?" ಎಂದು ಪ್ರತಿಕ್ರಿಯಿಸಿದ್ದಾರೆ.

೭೦ ಮತ್ತು ೮೦ರ ದಶಕದಲ್ಲಿ ಈ ಜೋಡಿ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ನೀಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಕಡಿವಾಣ: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮನೆಗೆಲಸ ಮಾಡು, ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!