ಕ್ರಿಕೆಟಿಗ ಎಂ.ಎಸ್ ಧೋನಿ ಜೀವನಾಧಾರಿತ ಕಥೆಯನ್ನೊಳಗೊಂಡ 'ದಿ ಅನ್ ಟೋಲ್ಡ್ ಸ್ಟೋರಿ' ಸಿನಿಮಾ ಅಕ್ಟೋಬರ್ 22ರಂದು ತೆರೆಗೆ ಬರಲಿದೆ.
ಹೀಗಂತ ಚಿತ್ರದ ನಾಯಕ ಸುಶಾಂತ್ ಟ್ವೀಟ್ ಮಾಡಿದ್ದಾರೆ. ಧೋನಿ ಪಾತ್ರದಲ್ಲಿ ಸುಶಾಂತ್ ಕಾಣಿಸಿಕೊಳ್ತಾ ಇದ್ದು, ಧೋನಿ ಪತ್ನಿ ಸಾಕ್ಷಿಯಾಗಿ ಅಲಿಯಾ ಭಟ್ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರದ ಬಗ್ಗೆ ಸುಶಾಂತ್ ಟ್ವೀಟ್ ಮಾಡಿದ್ದು, ಅಕ್ಟೋಬರ್ 22ರಂದು ಚಿತ್ರ ತೆರೆಗೆ ಬರಲಿದೆ ಎಂದು ಹೇಳಿದ್ದಾರೆ.
ಸುಶಾಂತ್ ಅವರು ಈ ಚಿತ್ರಕ್ಕಾಗಿ ನಾಲ್ಕು ತಿಂಗಳುಗಳ ಹಿಂದಿನಿಂದಲೇ ತಯಾರಿ ನಡೆಸುತ್ತಿದ್ದಾರೆ. ನೀರಜ್ ಪಾಂಡೆ ನಿರ್ದೇಶನದ ಚಿತ್ರದ ಮೊದಲ ಪೋಸ್ಟರ್ ಸೆಪ್ಟೆಂಬರ್ 25, 2014ರಲ್ಲೇ ಬಿಡುಗಡೆ ಮಾಡಲಾಗಿತ್ತು. ಚಿತ್ರದಲ್ಲಿ ಕೊಹ್ಲಿ, ಜಹೀರ್ ಖಾನ್ ಪಾತ್ರಗಳೂ ಇದೆ ಎಂದು ತಿಳಿದು ಬಂದಿದೆ. ಇನ್ನೂ ಧೋನಿ ಅಭಿಮಾನಿಗಳು ಈ ಚಿತ್ರ ವೀಕ್ಷಿಸಬೇಕಾದರೆ ಅಕ್ಟೋಬರ್‌ವರೆಗೆ ಕಾಯಲೇಬೇಕು.