ಭಜರಂಗಿ ಭಾಯ್ ಜಾನ್ ಪೆಂಡೆಂಟ್‍ 
ಬಾಲಿವುಡ್

ಭಜರಂಗಿ ಪೆಂಡೆಂಟ್‍ಗೆ ರು.71, 154 ಸಾವಿರ!

ಸಲ್ಮಾನ್ ಖಾನ್ ಅದೇನೇ ಮಾಡಿದ್ರೂ ಸುದ್ದಿಯಾಗುತ್ತೆ. ಈತನ ಅಭಿನಯದ `ಭಜರಂಗಿ ಭಾಯ್ ಜಾನ್' ಸದ್ಯದಲ್ಲಿಯೇ ತೆರೆ ಕಾಣಲಿದೆ...

ಸಲ್ಮಾನ್ ಖಾನ್ ಅದೇನೇ ಮಾಡಿದ್ರೂ ಸುದ್ದಿಯಾಗುತ್ತೆ. ಈತನ ಅಭಿನಯದ `ಭಜರಂಗಿ ಭಾಯ್ ಜಾನ್' ಸದ್ಯದಲ್ಲಿಯೇ ತೆರೆ ಕಾಣಲಿದೆ.

ಈ ಚಿತ್ರದಲ್ಲಿ ಸಲ್ಮಾನ್ ಭಜರಂಗಬಲಿ ಭಕ್ತ. ಚಿತ್ರದ ಹೆಸರಿನೊಂದಿಗೇ ಗದೆಯಾಕಾರದ ಪದಕವೊಂದು ಥಳಕು ಹಾಕಿ ಕೊಂಡಿದೆ. ಈ ಆಕಾರದ ಪದಕಕ್ಕೆ ಈಗ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಹುಟ್ಟಿ ಕೊಂಡಿದೆಯಂತೆ. ಸಲ್ಮಾನ್ ಅಭಿಮಾನಿಗಳು ಈ ಪದಕಕ್ಕೆ ಮಾರು ಹೋಗಿದ್ದು, ಎಲ್ಲರೂ ಇಂಥ ಪದಕ ಕೊಳ್ಳಲು ಮುಗಿಬೀಳುತ್ತಿದ್ದಾರೆ.

ಪರಿಸ್ಥಿತಿಯನ್ನು ಅರಿತುಕೊಂಡ ಆನ್‍ಲೈನ್ ಮಾರಾಟಗಾರರು ಇದರಲ್ಲಿಯೇ ಹಣ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಈ ಪದಕಗಳು ಆನ್‍ಲೈನ್‍ನಲ್ಲಿ ರು.71, 154ಸಾವಿರಕ್ಕೆ ಲಭ್ಯವಿದೆ. ಚಿತ್ರದಲ್ಲಿ ಕಾಣಿಸಿಕೊಳ್ಳುವ ಪದಕಕ್ಕೇ ಇಷ್ಟೊಂದು ಬೇಡಿಕೆ ಸೃಷ್ಟಿಯಾಗಿರುವಾಗ ಸಿನಿಮಾ ಇನ್ನೆಷ್ಟು ಮಟ್ಟಿಗೆ ಹೆಸರು ಮಾಡಬಹುದು ಎಂಬುದನ್ನು ಕಾದು ನೋಡಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

'ದೆಹಲಿ ಪೊಲೀಸರು ಟಾಸ್ ಗೆದ್ದು, ಮೊದಲು ಬ್ಯಾಟಿಂಗ್ ಮಾಡಲಿ': ಪಾಕಿಸ್ತಾನ ಮಾಜಿ ಕ್ರಿಕೆಟಿಗನ ಪೋಸ್ಟ್ ವೈರಲ್​!

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP