ಬಾಲಿವುಡ ನಟಿ ಕತ್ರಿನಾ ಕೈಫ್ 
ಬಾಲಿವುಡ್

ಜಾಕಿ ಚ್ಯಾನ್ ಜೊತೆ ನಟಿಸುವ ನಿರ್ಧಾರ ಮಾಡಬೇಕಿರುವ ಕತ್ರಿನಾ

ಹಾಂಗ್ ಕಾಂಗ್ ನ ಖ್ಯಾತ ನಟ ಜಾಕಿ ಚ್ಯಾನ್ ಅವರ ಮುಂಬರಲಿರುವ ಆಕ್ಷನ್ ಸಿನೆಮಾ 'ಕುಂಗ್ ಫು ಯೋಗ' ಸಿನೆಮಾದಲ್ಲಿ ಬಾಲಿವುಡ ನಟಿ ಕತ್ರಿನಾ ನಟಿಸಲಿದ್ದಾರೆ ಎಂಬ

ನವದೆಹಲಿ: ಹಾಂಗ್ ಕಾಂಗ್ ನ ಖ್ಯಾತ ನಟ ಜಾಕಿ ಚ್ಯಾನ್ ಅವರ ಮುಂಬರಲಿರುವ ಆಕ್ಷನ್ ಸಿನೆಮಾ 'ಕುಂಗ್ ಫು ಯೋಗ' ಸಿನೆಮಾದಲ್ಲಿ ಬಾಲಿವುಡ ನಟಿ ಕತ್ರಿನಾ ಕೈಫ್ ನಟಿಸಲಿದ್ದಾರೆ ಎಂಬ ಸುದ್ದಿ ಈಗಾಗಲೇ ಹರಡಿದ್ದರೂ, ಅವರಿನ್ನೂ ಧೃಢೀಕರಿಸಿಲ್ಲ ಎಂದು ನಟಿಯ ಪ್ರತಿನಿಧಿ ತಿಳಿಸಿದ್ದಾರೆ.

ವರದಿಗಳ ಪ್ರಕಾರ 'ಕುಂಗ್ ಫು ಯೋಗ' ಸಿನೆಮಾದಲ್ಲಿ ಲಂಡನ್ ಮೂಲದ ೩೧ ವರ್ಷದ ನಟಿ ಚೈನಾ ವಿಶ್ವವಿದ್ಯಾಲಯದಲ್ಲಿ ಭಾರತೀಯ ಪ್ರೊಫೆಸರ್ ಪಾತ್ರ ನಿರ್ವಹಿಸಲಿದ್ದಾರೆ ಹಾಗು ಚಾನ್ ಚೈನಾ ಪಳೆಯುಳಿಕೆ ತಜ್ಞನಾಗಿ ಮಗಧಾ ರಾಜ್ಯಭಾರದ ನಿಘೂಡಗಳನ್ನು ಹೊರಗೆಡವಲು ಪ್ರೊಫೆಸರ್ ಗೆ ನೆರವಾಗುವ ಪಾತ್ರ ಎನ್ನಲಾಗಿತ್ತು.

ಆದರೆ ಕತ್ರಿನಾ ಅವರ ವಕ್ತಾರರ ಪ್ರಕಾರ ಪಾತ್ರದ ಬಗ್ಗೆ ನಟಿ ಇನ್ನೂ ನಿರ್ಧರಿಸಬೇಕಿದೆ ಎಂದಿದ್ದಾರೆ.

ಇದಕ್ಕೂ ಮುಂಚೆ, ಸ್ಟ್ಯಾನ್ಲಿ ಟಾಂಗ್ ನಿರ್ದೇಶನದ ಈ ಸಿನೆಮಾದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಕೂಡ ನಟಿಸಲಿದ್ದಾರೆ ಎಂಬ ವರದಿಯಿತ್ತು. ಆದರೆ ಇದನ್ನು ನಟ ನಂತರ ನಿರಾಕರಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸರ್ಕಾರದ ಮೊದಲ ವಿಕೆಟ್ ಪತನ: ಕಣ್ಣೀರಿಡುತ್ತಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ನಾಗೇಂದ್ರ; BJP ಹೋರಾಟಕ್ಕೆ ಜಯ!

ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ; ಬನ್ನಿ ಅಖಾಡಕ್ಕೆ, ಬಳ್ಳಾರಿಯಲ್ಲಿ ನೀವು ರಿಜೆಕ್ಟ್ ಪೀಸ್‌ಗಳು: ರಾಮುಲು, ರೆಡ್ಡಿಗೆ ನಾಗೇಂದ್ರ ಸವಾಲು

ಹೂಡಿಕೆ ಆಕರ್ಷಣೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ: ಕೈಗಾರಿಕಾ ಅಭಿವೃದ್ಧಿಗೆ 5 ನಗರಗಳನ್ನು ಗುರುತಿಸಲು ಅಧಿಕಾರಿಗಳಿಗೆ CM DK Shivakumar ನಿರ್ದೇಶನ

ವಾಲ್ಮೀಕಿ ಹಗರಣದ 'ಕಿಂಗ್ ಪಿನ್' ನಾಗೇಂದ್ರ ಔಟ್: ಜನಾಕ್ರೋಶದ ಮುಂದೆ ಮಂಡಿಯೂರಿ ಶರಣಾದ ಭ್ರಷ್ಟ ಕಾಂಗ್ರೆಸ್ ಸರ್ಕಾರ! ಬಿಜೆಪಿ

ನೇಪಾಳದಲ್ಲಿ ದಿಢೀರ್ ಪ್ರವಾಹ: ಬಲಿಯಾದವರ ಸಂಖ್ಯೆ 538ಕ್ಕೆ ಏರಿಕೆ; 320 ಭಾರತೀಯ ಪ್ರವಾಸಿಗರು ನಾಪತ್ತೆ!