ಮುಂಬೈ: ಹಾಲಿವುಡ್ ನಟ ಸಿಲ್ವೆಸ್ಟರ್ ಸ್ಟೆಲ್ಲೋನ್ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಸಮಾನಾಂತರ ಅಭಿಮಾನಿ ಬಳಗವಿದೆ. ಈಗ ಈ ದಭಾಂಗ್ ನಟ ಸಲ್ಮಾನ್ ಜೊತೆ ಆಕ್ಷನ್ ಸಿನೆಮಾ ಮಾಡುವ ಆಸಕ್ತಿ ತೋರಿದ್ದರೆ ರ್ಯಂಬೋ ಖ್ಯಾತಿಯ ಸ್ಟೆಲ್ಲೋನ್
ಶುಕ್ರವಾರ ಭಜರಂಗಿ ಭೈಜಾನ್ ನಟ ಟ್ವಿಟ್ಟರ್ ನಲ್ಲಿ ತನ್ನ ೧೨ ದಶಲಕ್ಷ ಅನುಯಾಯಿಗಳಿಗೆ 'ಹೀರೋ ಕ ಹೀರೋ' ಸ್ಟೆಲ್ಲೋನ್ ಅವರನ್ನು ಅನುಸರಿಸುವಂತೆ ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ರ್ಯಾಂಬೊ ನಟ "ಅದ್ಭುಕ ಕೌಶಲ್ಯವಿರುವ ಭಾರತೀಯ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಧನ್ಯವಾದಗಳು. ನಾವಿಬ್ಬರೂ ಒಟ್ಟಿಗೆ ಒಂದು ಸಿನೆಮಾ ಮಾಡಬೇಕು" ಎಂದು ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಸ್ಟೆಲ್ಲೋನ್ ಬಾಲಿವುಡ್ ನಲ್ಲಿ ಕಾಣಿಸಿಕೊಂಡಿದ್ದರು. ೨೦೦೯ರ ಸಬ್ಬೀರ್ ಖಾನ್ ಅವರ 'ಕಂಭತ್ ಇಶ್ಕ್' ಚಲನಚಿತ್ರದಲ್ಲಿ ಕಾಣಿಸಿಕೊಂಡಿದ್ದರು.