ತನ್ನ ಇಬ್ಬರು ಪುತ್ರಿಯರೊಂದಿಗೆ ಹೇಮ ಮಾಲಿನಿ 
ಬಾಲಿವುಡ್

ನೃತ್ಯ ನನಗೆ ಬಲಗೈ ಇದ್ದಂತೆ: ಹೇಮ ಮಾಲಿನಿ

ಬಾಲಿವುಡ್ ನ ಕನಸಿನ ಕನ್ಯೆ, ಸಂಸದೆ ಹೇಮ ಮಾಲಿನಿ ಒಂದೆಡೆ ತಮ್ಮ ತಾಯಿ ಜಯ ಚಕ್ರವರ್ತಿ ಅವರ ನೆನಪಿನಲ್ಲಿ ವಾರ್ಷಿಕ ಭರತನಾಟ್ಯ ಕಾರ್ಯಕ್ರಮ...

ಬಾಲಿವುಡ್ ನ ಕನಸಿನ ಕನ್ಯೆ, ಸಂಸದೆ ಹೇಮ ಮಾಲಿನಿ ಒಂದೆಡೆ ತಮ್ಮ ತಾಯಿ ಜಯ ಚಕ್ರವರ್ತಿ ಅವರ ನೆನಪಿನಲ್ಲಿ ವಾರ್ಷಿಕ ಭರತನಾಟ್ಯ ಕಾರ್ಯಕ್ರಮ ಜಯಸ್ಮೃತಿಯಲ್ಲಿ ಬ್ಯುಸಿಯಾಗಿದ್ದರೆ ಇನ್ನೊಂದು ಕಡೆ ಮೊಮ್ಮಗನ ಆಟ-ತುಂಟಾಟದಲ್ಲಿ ನಿಜ ಜೀವನದಲ್ಲಿ ಖುಷಿಯಾಗಿದ್ದಾರೆ. ಹೌದು ಅವರ ಎರಡನೇ ಮಗಳು ಅಹನಾಗೆ ಗಂಡು ಮಗುವಾಗಿ ಆ ಮಗು ಈಗ ಅತ್ತಿತ್ತ ಓಡಾಡುತ್ತಾ, ತೊದಲು ನುಡಿಯುತ್ತಿದೆ.

''ಮೊಮ್ಮಗನ ಹೆಸರು ದರಿಯನ್. ಅವನ ಆಗಮನದಿಂದ ನಾನು ತುಂಬಾ ಖುಷಿಯಾಗಿದ್ದೇನೆ ಎಂದು ಹೇಮ ಮಾಲಿನಿ ಹೇಳುತ್ತಾರೆ. ಆತನನ್ನು ನೋಡುತ್ತಿದ್ದರು ನನ್ನ ಇಬ್ಬರು ಮಕ್ಕಳ ಬಾಲ್ಯ ನೆನಪಾಗುತ್ತದೆ'' ಎನ್ನುತ್ತಾರೆ ಹೇಮಾ.

ನಾನು ನನ್ನ ಮಕ್ಕಳ ಗರ್ಭಿಣಿಯಾಗಿದ್ದಾಗ ಎಂಟು ತಿಂಗಳವರೆಗೆ ಕೆಲಸ ಮಾಡುತ್ತಿದ್ದೆ. ಸುಮ್ಮನೆ ಕೂತಿರಲಿಲ್ಲ. ನೃತ್ಯ ನನಗೆ ಎಲ್ಲಾ ರೀತಿಯಲ್ಲಿಯೂ ಸಹಾಯ ಮಾಡಿದೆ. ಅದು ನನ್ನ ಬಲಗೈ ಇದ್ದಂತೆ. ನನ್ನ ತಾಯಿಯಿಂದ ಬಂದ ಬಳುವಳಿ ಇದು. ನಾನು ಚಿಕ್ಕವಳಿರುವಾಗಲೇ ನನ್ನನ್ನು ನೃತ್ಯಾಭ್ಯಾಸಕ್ಕೆ ನನ್ನ ತಾಯಿ ಸೇರಿಸಿದರು. ಆಗ ನಾನು ದೆಹಲಿಯಲ್ಲಿದ್ದೆ. ಎರಡು ಗಂಟೆಗಳ ಕಾಲ ಸತತ ನೃತ್ಯ ಮಾಡುತ್ತಿದ್ದ. ನನ್ನ ನೃತ್ಯವನ್ನು ನೋಡಿ ಸಿನಿಮಾ ನಿರ್ಮಾಪಕರು ನನ್ನನ್ನು ಚಿತ್ರದಲ್ಲಿ ಡ್ಯಾನ್ಸ್ ಮಾಡಿಸುತ್ತಿದ್ದರು. ನನ್ನ ನೃತ್ಯದಿಂದಲೇ ನಾನು ಇಷ್ಟು ಹೆಸರು ಮತ್ತು ಚಿತ್ರಗಳಲ್ಲಿ ಅಭಿನಯಿಸುವಂತಾಗಿದ್ದು. ತಾಯಿಯ ಹೆಸರಿನಲ್ಲಿ ಜಯಸ್ಮೃತಿ ಕಾರ್ಯಕ್ರಮವನ್ನು ವರ್ಷಗಟ್ಟಲೆ ಮಾಡಿದೆವು. ನಡುವೆ ಎರಡು ವರ್ಷ ನಿಂತುಹೋಯಿತು. ನಾನಿಂದು ಈ ಸ್ಥಾನದಲ್ಲಿರಲು, ಜೀವನದಲ್ಲಿ ಸಾಧನೆ ಮಾಡಿದ್ದರೆ ಅದಕ್ಕೆ ಕಾರಣ ನನ್ನ ತಾಯಿ ಎನ್ನುತ್ತಾರೆ ಹೇಮ ಮಾಲಿನಿ.

ಜಯಸ್ಮೃತಿ ಅಕಾಡೆಮಿ ಮೂಲಕ ಈಗ ಯುವಜನತೆಯನ್ನು ಮುಂದೆ ತರುತ್ತಿದ್ದೇವೆ. ಶಾಸ್ತ್ರೀಯ ನೃತ್ಯದಲ್ಲಿ ಆಸಕ್ತಿಯಿರುವವರಿಗೆ ಅವಕಾಶ ನೀಡುತ್ತೇವೆ. ಇಂದು ಬಾಲಿವುಡ್ ಸಿನಿಮಾಗಳಲ್ಲಿ ಶಾಸ್ತ್ರೀಯ ನೃತ್ಯ ಕಡಿಮೆಯಾಗುತ್ತಿದೆ. ಇದನ್ನು ಬೆಳೆಸಬೇಕು. ಐಶ್ವರ್ಯ ರೈ, ದೀಪಿಕಾ ಪಡುಕೋಣೆ ಮೊದಲಾದವರು ಚೆನ್ನಾಗಿ ನೃತ್ಯ ಮಾಡುತ್ತಾರೆ ಎಂದು ಹಿರಿಯ ನಟಿ ಶ್ಲಾಘಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT