ಬಾಲಿವುಡ್ ನಟ ಅನುಪಮ್ ಖೇರ್ 
ಬಾಲಿವುಡ್

ನಾನು ಲಕ್ಷಾಂತರ ಭಾರತೀಯರ ವಕ್ತಾರ: ಅನುಪಮ್ ಖೇರ್

ಸಾಮಾಜಿಕ ಅಂತರ್ಜಾಲದಲ್ಲಿ ಸದಾ ಗಟ್ಟಿಯಾಗಿ ಧ್ವನಿ ಎತ್ತುವ ಹಾಗೂ ಅಸಹಿಷ್ಣುತೆ ಚರ್ಚೆಯಲ್ಲಿ ಆಳುವ ಸರ್ಕಾರದ ಪರ ನಿಂತಿರುವ ಬಾಲಿವುಡ್ ನಟ ಅನುಪಮ್ ಖೇರ್

ಮುಂಬೈ: ಸಾಮಾಜಿಕ ಅಂತರ್ಜಾಲದಲ್ಲಿ ಸದಾ ಗಟ್ಟಿಯಾಗಿ ಧ್ವನಿ ಎತ್ತುವ ಹಾಗೂ ಅಸಹಿಷ್ಣುತೆ ಚರ್ಚೆಯಲ್ಲಿ ಆಳುವ ಸರ್ಕಾರದ ಪರ ನಿಂತಿರುವ ಬಾಲಿವುಡ್ ನಟ ಅನುಪಮ್ ಖೇರ್ 'ಭಾರತವೇ ಅತ್ಯುತ್ತಮ' ಎಂದು ನಂಬುವ ಲಕ್ಷಾಂತರ ಭಾರತೀಯರ ವಕ್ತಾರ ನಾನು ಎಂದು ಹೇಳಿಕೊಂಡಿದ್ದಾರೆ.

"ಏನೇ ತೊಂದರಗಳಿದ್ದರೂ ಪೂರ್ವವಾಗಲೀ ಪಶ್ಚಿಮವಾಗಲೀ ಭಾರತವೇ ಅತ್ಯುತ್ತಮ ಎಂದು ನಂಬುವವರಿಗೆ ನಾನು ವಕ್ತಾರ" ಎಂದು ಟ್ವಿಟ್ಟರ್ ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಚರ್ಚಿಸುವಾಗ ಬರೆದುಕೊಂಡಿದ್ದಾರೆ.

ತಮ್ಮ ಪತ್ನಿ, ನಟಿ ಮತ್ತು ರಾಜಕಾರಿಣಿ ಕಿರಣ್ ಖೇರ್ ಅವರ ಹಾದಿಯನ್ನು ತುಳಿಯುವ ಯಾವುದೇ ಯೋಜನೆಗೆಳಿವೆಯೇ ಎಂದು ಕೂಡ ಅಭಿಮಾನಿಗಳು ಖೇರ್ ಅವರನ್ನು ಪ್ರಶ್ನಿಸಿದ್ದಾರೆ.

"ಇಲ್ಲವೇ ಇಲ್ಲ. ನನಗೆ ನಟನಾಗಿ, ಅಧ್ಯಾಪಕನಾಗಿ ಮತ್ತು ಪ್ರೇರೇಪಿಸುವ ಭಾಷಣಕಾರನಾಗಿರಲು ಇಷ್ಟ" ಎಂದು 'ಶೌಕೀನ್ಸ್' ನಟ ಹೇಳಿದ್ದಾರೆ.

ಸಲ್ಮಾನ್ ಖಾನ್ ನಟನೆಯ 'ಪ್ರೇಮ್ ರತನ್ ಧನ ಪಾಯೋ'ದಲ್ಲಿ ನಟ ಇತ್ತೀಚಿಗೆ ಕಾಣಿಸಿಕೊಂಡಿದ್ದರು. ಈಗ ನೀರಜ್ ಪಾಂಡೆ ಅವರ 'ಎಂ ಎಸ್ ಧೋನಿ: ದ ಅನ್ ಟೋಲ್ಡ್ ಸ್ಟೋರಿ' ಯಲ್ಲಿ ಎಂ ಎಸ್ ಧೋನಿ ಅವರ ತಂದೆ ಪಾನ್ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT