ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಎರಡು ಆಸ್ಕರ್ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡು ಈ ಸಂಗೀತ ದಿಗ್ಗಜ ಇತ್ತೀಚೆಗೆ ಇನ್ನೊಮ್ಮೆ ಸುದ್ದಿಯಾದರು. 'ಪ್ರೊಫೆಟ್ ಆಫ್ ಮಹಮ್ಮದ್' ಎನ್ನುವ ಇರಾನಿ ಚಿತ್ರಕ್ಕೆ ಸಂಗೀತ ನೀಡುತ್ತಿರುವ ಸುದ್ದಿ ಭಾರತದ ಧಾರ್ಮಿಕ ಮುಖಂಡರನ್ನು ಕೆರಳಿಸಿತು.
ರೆಹಮಾನ್ ವಿರುದ್ಧ ಫತ್ವಾ ಹೊರಡಿಸಿದರು. ಆದರೆ ಇದೇ ರೆಹಮಾನ್‍ಗೆ ಸೇಶೆಲ್ಸ್, ತನ್ನ ದೇಶದ ರಾಯಭಾರಿಯನ್ನಾಗಿ ಘೋಷಿಸಿತು. ಸೇಶೆಲ್ಸ್ ದೇಶ ನೀಡಿರುವ ಅಂಗಿಕೃತ ಪತ್ರವನ್ನು ಎ.ಆರ್.ರೆಹಮಾನ್ ತಮ್ಮ ಟ್ವಿಟರ್‍ನಲ್ಲಿ ಹಾಕಿಕೊಂಡಿದ್ದಾರೆ.
ಹಾಗೆ ನೋಡಿದರೆ ಇದಕ್ಕೂ ಮೊದಲು ಮತ್ತೊಬ್ಬ ಸಂಗೀತ ಮಾಂತ್ರಿಕ ಇಳಯರಾಜ ಅವರು ಸೇಶೆಲ್ಸ್ ದೇಶದ ಸಾಂಸ್ಕೃತಿ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಎರಡನೇ ಬಾರಿಗೆ ರೆಹಮಾನ್ ಆಯ್ಕೆಯಾಗಿದ್ದಾರೆ. ಆ ಮೂಲಕ ಇಬ್ಬರು ಭಾರತೀಯ ಸಂಗೀತ ದಿಗ್ಗಜರು ಸೇಶೆಲ್ಸ್ ದೇಶದ ಸಾಂಸ್ಕೃತಿಕ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ.