ನಿರ್ದೇಶಕ ವಿಶಾಲ್ ಭಾರದ್ವಾಜ್ 
ಬಾಲಿವುಡ್

ಪ್ರತಿ ಗಾಂಧಿ ಜಯಂತಿಗೂ ಸಿನೆಮಾ ಬಿಡುಗಡೆ ಮಾಡಲಿರುವ ವಿಶಾಲ್ ಭಾರದ್ವಾಜ್

ವಿಶಾಲ್ ಭಾರದ್ವಾಜ್ ನಿರ್ದೇಶನದ 'ಹೈದರ್' ಕಳೆದ ವರ್ಷ ಅಕ್ಟೋಬರ್ ೨ಕ್ಕೆ ಬಿಡುಗಡೆಯಾಗಿತ್ತು ಹಾಗೂ ಈ ವರ್ಷ ಅವರ ಸಹ ನಿರ್ಮಾಣದ 'ತಲ್ವಾರ್' ಬಿಡುಗಡೆಗೆ

ಮುಂಬೈ: ವಿಶಾಲ್ ಭಾರದ್ವಾಜ್ ನಿರ್ದೇಶನದ 'ಹೈದರ್' ಕಳೆದ ವರ್ಷ ಅಕ್ಟೋಬರ್ ೨ಕ್ಕೆ ಬಿಡುಗಡೆಯಾಗಿತ್ತು ಹಾಗೂ ಈ ವರ್ಷ ಅವರ ಸಹ ನಿರ್ಮಾಣದ 'ತಲ್ವಾರ್' ಬಿಡುಗಡೆಗೆ ಸಿದ್ಧವಾಗಿದೆ. ಅವರೇ ಚಿತ್ರಕಥೆ ಬರೆದು ನಿರ್ಮಿಸಿರುವ ಈ ಚಲನಚಿತ್ರ ಭಾರಿ ನಿರೀಕ್ಷೆ ಹುಟ್ಟಿಸಿದೆ. ಹೀಗೆ ಪ್ರತಿ ಗಾಂಧಿ ಜಯಂತಿಗೆ ಬಿಡುಗಡೆ ಮಾಡುವ ಸಂಪ್ರದಾಯವನ್ನು ನಿರ್ದೇಶಕ ಬೆಳೆಸಿಕೊಂಡಿದ್ದಾರಂತೆ.

"ಬಿಡುಗಡೆ ದಿನಾಂಕದ ಬಗ್ಗೆ ವಿಶಾಲ್ ಸರ್ ಬಹಳ ಸಂತಸದಿಂದಿದ್ದಾರೆ. ಕಳೆದ ವರ್ಷ 'ಹೈದರ್' ಆಶ್ಚರ್ಯಕರವಾಗಿ ಬಿಡುಗಡೆಯಾಗಿತ್ತು... ಈ ವರ್ಷ 'ತಲ್ವಾರ್'.  ಟೊರೆಂಟೊ ಅಂತರಾಷ್ಟ್ರೀಯ ಸಿನೆಮೋತ್ಸವದಲ್ಲಿ ಸಿನೆಮಾ ಈಗಾಗಲೇ ಸದ್ದು ಮಾಡಿದೆ. ಇನ್ನು ಮುಂದೆ ಪ್ರತಿ ಅಕ್ಟೋಬರ್ ೨ ಕ್ಕೆ ಸಿನೆಮಾ ಮಾಡಲು ಉತ್ಸುಕರಾಗಿದ್ದಾರೆ" ಎಂದು ವಕ್ತಾರ ತಿಳಿಸಿದ್ದಾರೆ.

ಹೈದರ್ ಸಿನೆಮಾದಲ್ಲಿ ಶಾಹಿದ್ ಕಪೂರ್, ಕೆ ಕೆ ಮೆನನ್, ಶ್ರದ್ಧಾ ಕಪೂರ್ ಮತ್ತು ಟಬು ನಟಿಸಿದ್ದರೆ ಮೇಘನಾ ಗುಲ್ಜಾರ್ ನಿರ್ದೇಶಿಸಿರುವ 'ತಲ್ವಾರ್' ನಲ್ಲಿ ಕೂಡ ಟಬು ನಟಿಸಿದ್ದು, ಇರ್ಫಾನ್ ಖಾನ್, ಕೊಂಕಣಾ ಸೇನ್ ಶರ್ಮಾ ಮತ್ತು ನೀರಜ್ ಕಾಬಿ ನಟಿಸಿದ್ದರೆ.

೨೦೦೮ ರಲ್ಲಿ ನೋಯ್ಡಾ ದಲ್ಲಿ ನಡೆದಿದ್ದ ಎರಡು ಕೊಲೆಗಳ ಆಧಾರವಾಗಿ 'ತಲ್ವಾರ್' ನಿರ್ಮಿಸಲಾಗಿದ್ದು, ಕೆನಡಾದ ಟೊರೆಂಟೊ ಅಂತರಾಷ್ಟ್ರೀಯ ಸಿನೆಮೋತ್ಸವದಲ್ಲಿ ಒಳ್ಳೆಯ ಪ್ರತಿಕ್ರಿಯೆ ಗಳಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ನೀವು ಪಡೆದ IMF ಬೇಲ್ಔಟ್‌ಗಿಂತ 2 ಪಟ್ಟು ಹೆಚ್ಚು; ಜಾಗಬಿಟ್ಟು ಹೋಗುವುದೇ ಪಾಕ್​ಗಿರುವ ಒಂದೇ ಆಯ್ಕೆ: ವಿಶ್ವಸಂಸ್ಥೆಯಲ್ಲಿ ಭಾರತ ವಾಗ್ದಾಳಿ!

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

SCROLL FOR NEXT