ಲಕನೌ: ಉತ್ತರಪ್ರದೇಶದ ಕುರಿ ಮಾರುಕಟ್ಟೆಯಲ್ಲಿ ಬಾಲಿವುಡ್ ತಾರೆಯರ ಹೆಸರಿಟ್ಟ ಕುರಿಗಳ ಮಾರಾಟ ಭರದಿಂದ ಸಾಗಿದೆ. ಅವುಗಳಲ್ಲಿ ಕೆಲವು ಕುರಿಗಳ ಹೆಸರನ್ನು 'ಶಾರುಕ್ ಖಾನ್' ಮತ್ತು 'ಸಲ್ಮಾನ್ ಖಾನ್' ಎಂದು ಕೂಡ ಹೆಸರಿಸಲಾಗಿದೆ. ಶುಕ್ರವಾರದ ಈದ್ ಗೆ ಗ್ರಾಹಕರನ್ನು ಸೆಳೆಯುವ ತಂತ್ರ ಇದಾಗಿದೆ.
ಮಾರುಕಟ್ಟೆಯಲ್ಲಿ ಲಭ್ಯವಿದ್ದ ಅತಿ ತೂಕದ ಒಂದು ಕುರಿಗೆ ಸಲ್ಮಾನ್ ಖಾನ್ ಎಂದು ನಾಮಕರಣ ಮಾಡಿದ್ದರೆ, ಕಪ್ಪು ಬಣ್ಣದ ಕುರಿಗೆ 'ಎಸ್ ಆರ್ ಕೆ' ಎಂದು ಹೆಸರಿಸಲಾಗಿತ್ತು.
ಈ ಕುರಿಗಳ ದರ ೧೫೦೦೦ ದಿಂದ ೧ ಲಕ್ಷದವರೆಗೂ ಇದ್ದವು. ಒಂದು ಕುರಿಯನ್ನು 'ಸಾನಿಯಾ' ಎಂದು ಕೂಡ ಹೆಸರಿಸಲಾಗಿದ್ದು ಅದು ಗ್ರಾಹಕರನ್ನು ಆಕರ್ಷಿಸಿತ್ತು.
ಈ ತಾರೆಯರ ಹೆಸರಿನ ಕುರಿ-ಮೇಕೆಗಳ ಒಡೆಯ ಸಾಜಿದ್, ನಾನು ಬಹಳ ಪ್ರೀತಿಯಿಂದ ಕುರಿಗಳನ್ನು ನೋಡಿಕೊಳ್ಳುತ್ತೇನೆ. ಅವರ ಒಂದು ಕುರಿಯ ತೂಕ ೧೨೫ ಕೆಜಿ ತೂಕ ಇದ್ದು ಅದಕ್ಕೆ ಬರ್ಫಿ ಎಂದು ಹೆಸರಿಟ್ಟಿದ್ದಾರೆ.
ಕುರಿ ಮೇಕೆಗಳಿಗೆ ಒಳ್ಳೆಯ ತೂಕ ಬರಲು ಕಡಲೆ, ಎಲೆಗಳು, ಬಾದಾಮಿ ಮತ್ತು ಜೇನುತುಪ್ಪವನ್ನು ತಿನ್ನಿಸುವುದಾಗಿ ಅವರು ತಿಳಿಸುತ್ತಾರೆ.
'ಅಲ್ಲ' ಎಂದು ಮೈಮೇಲೆ ಬರೆದಿದ್ದ ಒಂದು ಕುರಿಯ ಬೆಲೆ ೫ ಲಕ್ಷ! ಸಾದತ್ ಗಂಜ್ ನ ಒಂದು ಕುರಿಯ ಮೇಲೆ ಚಂದ್ರ ಮತ್ತು ನಕ್ಷತ್ರ ಸ್ವಾಭಾವಿಕವಾಗಿ ಮೂಡಿದ್ದು ಅದರ ಬೆಲೆ ೨ ಲಕ್ಷವಾಗಿತ್ತು.