ನವದೆಹಲಿ: ಅಶ್ಲೀಲ ಚಿತ್ರಗಳಿಂದ ಮನರಂಜನೆ ಸಿಗುವುದಾದರೆ ಅದನ್ನು ನೋಡುವುದರಲ್ಲಿ ತಪ್ಪೇನು ಎಂದು ಬಾಲಿವುಡ್ ನಿರ್ದೇಶಕ ವಿಕ್ರಮ್ ಭಟ್ ಹೇಳಿದ್ದಾರೆ.
ಅಶ್ಲೀಲ ಪದ, ವಿಡಿಯೋ ತುಣುಕು ಮತ್ತು ಸಂಭಾಷಣೆಗಳಿಗೆ ಕತ್ತರಿ ಪ್ರಯೋಗ ಮಾಡುವ ಕೇಂದ್ರ ಸೆನ್ಸಾರ್ ಮಂಡಳಿಯ ಕ್ರಮವನ್ನು ವಿರೋಧಿಸಿ ಮಾತನಾಡಿರುವ ನಿರ್ದೇಶಕ ವಿಕ್ರಮ್ ಭಟ್, ಈ ಹಿಂದೆಂದಿಗಿಂತಲೂ ಪ್ರಸ್ತುತ ಸೆನ್ಸಾರ್ ಮಂಡಳಿ ತೀರಾ ಕೆಟ್ಟದಾಗಿ ಸಿನಿಮಾಗಳನ್ನು ನಡೆಸಿಕೊಳ್ಳುತ್ತಿದೆ. ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರೀಕೂಟಕ್ಕೆ ಹೋಲಿಕೆ ಮಾಡಿದರೆ, ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರ ನೂರು ಪಾಲು ಚೆನ್ನಾಗಿತ್ತು. ಆಗ ಸೆನ್ಸಾರ್ ಮಂಡಳಿ ಇಷ್ಟು ಕೆಟ್ಟಾದಾಗಿರಲಿಲ್ಲ ಎಂದು ಹೇಳಿದ್ದಾರೆ.
"ಅಶ್ಲೀಲ ಚಿತ್ರಗಳಲ್ಲಿ ತಪ್ಪೇನಿದೆ? ಜನರಿಗೆ ಅಶ್ಲೀಲ ಚಿತ್ರಗಳನ್ನು ನೋಡುವ ಹಕ್ಕಿಲ್ಲವೇ? ನನ್ನ ಅಭಿರುಚಿಗೆ ತಕ್ಕಂತೆ ಸಿನಿಮಾ ನೋಡಲು ನನಗೆ ಹಕ್ಕಿಲ್ಲವೇ? ನಾನಗೆ ನಾನು ಬಯಸಿದ ಅಭಿರುಚಿಯ ಸಿನಿಮಾ ನೋಡುಲ ಎಲ್ಲಾ ಹಕ್ಕಿದೆ ಮತ್ತು ನಾನು ಅದಕ್ಕೆ ಮಾತ್ರ ಹಣ ನೀಡುತ್ತೇನೆ. ನನ್ನ ಚಿತ್ರ ಅಶ್ಲೀಲ ಚಿತ್ರ ಎಂದು ದೊಡ್ಡದಾಗಿ ಬರೆಯಿರಿ..ಅದರಿಂದ ನನಗೇನೂ ಆಗಬೇಕಿಲ್ಲ. ಆದರೆ ಯಾವುದು ಒಳ್ಳೆ ಚಿತ್ರ ಯಾವುದು ಕೆಟ್ಟ ಚಿತ್ರ ಎಂಬುದನ್ನು ನಾನೇ ನಿರ್ಧರಿಸಿಕೊಳ್ಳುತ್ತೇನೆ ಎಂದು ವಿಕ್ರಮ್ ಭಟ್ ಹೇಳಿದ್ದಾರೆ.
ನಿರ್ದೇಶಕ ವಿಕ್ರಮ್ ಭಟ್ ಲವ್ ಗೇಮ್ ಎಂಬ ಚಿತ್ರವನ್ನು ನಿರ್ದೇಶಿಸಿದ್ದು, ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಕಟು ಟೀಕೆ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ. ಪತ್ನಿಯರನ್ನು ಅದಲು-ಬದಲು ಮಾಡುವ ವಿದೇಶಿ ವ್ಯವಸ್ಥೆಯ ಕುರಿತ ಕಥೆಯನ್ನಾಧರಿಸಿ ಭಟ್ ಚಿತ್ರವನ್ನು ತಯಾರಿಸಿದ್ದು, ಸೆನ್ಸಾರ್ ಮಂಡಳಿಯ ನಿರ್ಧಾರಕ್ಕೆ ವಿಕ್ರಮ್ ಭಟ್ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಏಪ್ರಿಲ್ 8ರಂದು ವಿಕ್ರಮ್ ಭಟ್ ಅವರ ಲವ್ ಗೇಮ್ ಚಿತ್ರ ತೆರೆಕಾಣಬೇಕಿದೆ. ಆದರೆ ಪ್ರಸ್ತುತ ಸೆನ್ಸಾರ್ ಮಂಡಳಿಯ ಕಠಿಣ ನಿಲುವಿನಿಂದಾಗಿ ಚಿತ್ರ ತೆರೆಗೆ ಬರುವುದು ಅನುಮಾನವಾಗಿದೆ.