ಸುಲ್ತಾನ್ ಚಿತ್ರದ ಪೋಸ್ಟರ್ 
ಬಾಲಿವುಡ್

ಯಶ್ ರಾಜ್ ಬ್ಯಾನರ್ ಚಿತ್ರಗಳಲ್ಲಿ 'ಸುಲ್ತಾನ್' ಅತಿ ಹೆಚ್ಚು ಗಳಿಕೆ ಸಿನಿಮಾ

ಸಲ್ಮಾನ್ ಖಾನ್ ಮತ್ತು ಅನುಷ್ಕಾ ಶರ್ಮ ಅಭಿನಯದ ಯಶಸ್ವಿ ಚಿತ್ರ ಸುಲ್ತಾನ್, ಯಶ್ ರಾಜ್ ಫಿಲ್ಮ್ ಬ್ಯಾನರ್ ನಡಿ ಇದುವರೆಗೆ...

ನವದೆಹಲಿ: ಸಲ್ಮಾನ್ ಖಾನ್ ಮತ್ತು ಅನುಷ್ಕಾ ಶರ್ಮ ಅಭಿನಯದ ಯಶಸ್ವಿ ಚಿತ್ರ ಸುಲ್ತಾನ್, ಯಶ್ ರಾಜ್ ಫಿಲ್ಮ್ ಬ್ಯಾನರ್ ನಡಿ ಇದುವರೆಗೆ ನಿರ್ಮಾಣಗೊಂಡ ಸಿನಿಮಾಗಳಲ್ಲಿ ಅತ್ಯಂತ ಹೆಚ್ಚು ಹಣ ಗಳಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಲಿ ಅಬ್ಬಾಜ್ ಝಫರ್ ನಿರ್ದೇಶನದ ಜುಲೈ 7ರಂದು ಬಿಡುಗಡೆಗೊಂಡ ಸುಲ್ತಾನ್ ಚಿತ್ರ ವಿಶ್ವದಾದ್ಯಂತ 585 ಕೋಟಿ ರೂಪಾಯಿ ಗಳಿಸಿದೆ. ಅದರಲ್ಲಿ ನಮ್ಮ ದೇಶದಲ್ಲಿ 421 ಕೋಟಿ ರೂಪಾಯಿ ಮತ್ತು ವಿದೇಶಗಳಲ್ಲಿ 164 ಕೋಟಿ ರೂಪಾಯಿಯಾಗಿದೆ.
ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಹೊರಡಿಸಿರುವ ಹೇಳಿಕೆ ಪ್ರಕಾರ, ಭಾರತೀಯ ಸಿನಿಮಾ ಇತಿಹಾಸದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಕ್ರೀಡೆಯನ್ನಾಧರಿಸಿದ ಚಿತ್ರ ಸುಲ್ತಾನ್ ನಲ್ಲಿ ಸಲ್ಮಾನ್ ಮತ್ತು ಅನುಷ್ಕಾ ಶರ್ಮ ಕುಸ್ತಿಪಟು ಪಾತ್ರ ನಿರ್ವಹಿಸಿದ್ದಾರೆ. ಚಿತ್ರ ತೆರೆಕಂಡ ಮೊದಲ ವಾರದಲ್ಲೇ ವಿಶ್ವಾದ್ಯಂತ 300 ಕೋಟಿ ರೂಪಾಯಿ ಗಳಿಸಿದೆ.
ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ಹುಟ್ಟಿಕೊಂಡಾಗಿನಿಂದ ಅನೇಕ ಉತ್ತಮ ರೊಮ್ಯಾಂಟಿಕ್ ಮತ್ತು ಆಕ್ಷನ್ ಹಿಂದಿ ಚಿತ್ರ ನೀಡುವಲ್ಲಿ ಹೆಸರುವಾಸಿಯಾಗಿದೆ. ಹಿಂದಿ ಚಿತ್ರರಂಗದ ಚಿತ್ರ ನಿರ್ಮಾಪಕ ದಿವಂಗತ ಯಶ್ ಚೋಪ್ರಾ ಅವರು ಈ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಅವರ ನಿರ್ದೇಶನದಲ್ಲಿ ಮೂಡಿಬಂದ ಚಾಂದ್ನಿ, ಲಮ್ಹೆ, ಸಿಲ್ ಸಿಲಾ, ಕಭಿ ಕಭಿ, ದಿಲ್ ತೋ ಪಾಗಲ್ ಹೈ, ಅವರ ಕೊನೆಯ ನಿರ್ದೇಶನದ ಚಿತ್ರ ಜಬ್ ತಕ್ ಹೈ ಜಾನ್ ಮೊದಲಾದ ಚಿತ್ರಗಳು ಹಿಟ್ ಆಗಿದ್ದವು.
ಅವರ ಮರಣಾನಂತರ ಅವರ ಮಗ ಆದಿತ್ಯ ಚೋಪ್ರಾ ಬ್ಯಾನರ್ ನ ಮುಖ್ಯಸ್ಥರಾಗಿದ್ದು, ಅವರ ಮಾರ್ಗದರ್ಶನದಡಿಯಲ್ಲಿ ದಿಲ್ ವಾಲೆ ದುಲನಿಯಾ ಲೇ ಜಾಯೇಂಗೆ, ಮೊಹಬ್ಬತೇನ್, ರಬ್ ನೆ ಬನಾ ದಿ ಜೋಡಿ ಮೊದಲಾದ ಚಿತ್ರಗಳು ಬಂದಿವೆ. ಅವರ ಮುಂದಿನ ಚಿತ್ರ ರಣವೀರ್ ಸಿಂಗ್ ಮತ್ತು ವಾಣಿ ಕಪೂರ್ ಅಭಿನಯದ ಬಫಿಕರ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?