ಸಲ್ಮಾನ್ ಖಾನ್ ಈಗಾಗಲೇ ಲುಲಿಯಾ ವಂತುರ್ ಜೊತೆ ವಿವಾಹವಾಗಿದ್ದಾರಂತೆ!
ನಟ ಸಲ್ಮಾನ್ ಖಾನ್ ರೋಮೇನಿಯಾ ಬ್ಯೂಟಿ ಲುಲಿಯಾ ವಂತುರ್ ಜತೆ ಸಲ್ಮಾನ್ ವಿವಾಹ ಮಾಡಿಕೊಂಡಿದ್ದಾರಂತೆ. ಹೀಗಂತ ರೊಮೇನಿಯಾದ ಟ್ಯಾಬ್ಲಾಯ್ಡ್ ...
ನವದೆಹಲಿ: ನಿಮ್ಮ ವಿವಾಹ ಯಾವಾಗ ಎಂದು ಪ್ರತಿಸಲ ಕೇಳುತ್ತಿದ್ದ ಪ್ರಶ್ನೆಗೆ ಸಲ್ಮಾನ್ ಖಾನ್ ತಮಾಷೆಯಾಗಿಯೇ ಉತ್ತರ ನೀಡುತ್ತಿದ್ದರು, ಸಲ್ಲು ವಿವಾಹವನ್ನು ನೋಡಬೇಕೆಂದು ಕಾದು ಕುಳಿತಿದ್ದ ಬಾಲಿವುಡ್ ಮಂದಿ ಹಾಗೂ ಅವರ ಅಭಿಮಾನಿಗಳಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ.
ಈಗಾಗಲೇ ನಟ ಸಲ್ಮಾನ್ ಖಾನ್ ರೋಮೇನಿಯಾ ಬ್ಯೂಟಿ ಲುಲಿಯಾ ವಂತುರ್ ಜತೆ ಸಲ್ಮಾನ್ ವಿವಾಹ ಮಾಡಿಕೊಂಡಿದ್ದಾರಂತೆ. ಹೀಗಂತ ರೊಮೇನಿಯಾದ ಟ್ಯಾಬ್ಲಾಯ್ಡ್ ಪ್ರಕಟಿಸಿದೆ. ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ಲುಲಿಯಾ ತನ್ನ ಆಪ್ತರ ಜತೆ ಈ ವಿಚಾರವನ್ನು ಶೇರ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಆದರೆ ಸಲ್ಮಾನ್ ಮಾತ್ರ ಈ ವರೆಗೂ ಈ ಬಗ್ಗೆ ತುಟಿ ಪಿಟಿಕ್ ಎಂದಿಲ್ಲ. ಗುಟ್ಟನ್ನು ರಟ್ಟು ಮಾಡಲು ಬಿಟ್ಟಿಲ್ಲ. ಎಲ್ಲಾ ಊಹಾಪೋಹಗಳಿಗೂ ಸಲ್ಮಾನ್ ಅವರೇ ತೆರೆ ಎಳೆಯಬೇಕಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.