ನವದೆಹಲಿ: ವಿಶ್ವದಲ್ಲಿ ಅತೀ ಹೆಚ್ಚು ವಾರ್ಷಿಕ ಸಂಭಾವನೆ ಪಡೆಯುವ ಪಟ್ಟಿಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸ್ಥಾನ ಪಡೆದಿದ್ದಾರೆ.
ಫೋರ್ಬ್ಸ್ ಮ್ಯಾಗಜೀನ್ ಪ್ರಕಟಿಸಿರುವ ಪಟ್ಟಿಯಲ್ಲಿ ಅಮೆರಿಕದ ಜೆನ್ನಿಫರ್ ಲಾರೆನ್ಸ್ ಅತೀ ಹೆಚ್ಚು ವಾರ್ಷಿಕ ಸಂಭಾವನೆ ಪಡೆಯುವ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರೆ, ದೀಪಿಕಾ ಪಡುಕೋಣೆ 10ನೇ ಸ್ಥಾನ ಪಡೆದಿದ್ದಾರೆ.
ಫೋರ್ಬ್ಸ್ ಪಟ್ಟಿ
ನಟಿ ಜೆನ್ನಿಫರ್ ಲಾರೆನ್ಸ್ (46 ಮಿಲಿಯನ್ ಡಾಲರ್), ಮೆಕಾರ್ಥಿ (33 ಮಿಲಿಯನ್ ಡಾಲರ್), ಸ್ಕಾರ್ಲೆಟ್ ಜೋಹಾನ್ಸನ್ (25 ಮಿಲಿಯನ್ ಡಾಲರ್), ಜೆನ್ನಿಫರ್ ಅನಿಸ್ಟರ್ (21 ಮಿಲಿಯನ್ ಡಾಲರ್), ಚೀನಾ ಗಾಯಕಿ, ನಿರ್ದೇಶಕಿ ಫ್ಯಾನ್ ಬಿಗ್ಬಿಂಗ್ (17 ಮಿಲಿಯನ್ ಡಾಲರ್), ದಕ್ಷಿಣ ಆಫ್ರಿಕಾದ ನಟಿ ಚಾರ್ಲಿಜ್ ಥರಾನ್(16.6 ಮಿಲಿಯನ್ ಡಾಲರ್), ನಟಿ ಏಮೀ ಆಡಮ್ಸ್(13.5 ಮಿಲಿಯನ್ ಡಾಲರ್), ಜುಲಿಯಾ ರಾಬರ್ಟ್(12 ಮಿಲಿಯನ್ ಡಾಲರ್), ಮಿಲಾ ಕುನಿಸ್(11 ಮಿಲಿಯನ್ ಡಾಲರ್) ಹಾಗೂ ಹತ್ತನೇ ಸ್ಥಾನದಲ್ಲಿ ದೀಪಿಕಾ ಪಡುಕೋಣೆ(10 ಮಿಲಿಯನ್ ಡಾಲರ್) ಅಲಂಕರಿಸಿದ್ದಾರೆ.