ಆಸ್ಕರ್ ರೇಸ್ ನಲ್ಲಿ ಮತ್ತೆ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್
ಭಾರತೀಯ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಹೆಸರು ಮತ್ತೆ ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿ ಸೇರಿದೆ. ಪೀಲೆ: ಬರ್ತ್ ಆಫ್ ಲೆಜೆಂಡ್ ಸಿನಿಮಾಗೆ ನೀಡಿರುವ...
ಲಾಸ್ ಏಂಜಲೀಸ್: ಭಾರತೀಯ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಹೆಸರು ಮತ್ತೆ ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿ ಸೇರಿದೆ. ಪೀಲೆ: ಬರ್ತ್ ಆಫ್ ಲೆಜೆಂಡ್ ಸಿನಿಮಾಗೆ ನೀಡಿರುವ ಸಂಗೀತಕ್ಕಾಗಿ ರೆಹಮಾನ್ ಅವರ ಹೆಸರನ್ನು ಆಯ್ಕೆ ಮಾಡಲಾಗಿದೆ. ಈ ಹಿಂದೆ 2009 ರಲ್ಲಿ ಸ್ಲಮ್ ಡಾಗ್ ಮಿಲಿಯನೇರ್ ಎಂಬ ಚಿತ್ರಕ್ಕಾಗಿ ರೆಹಮಾನ್ ಅಸ್ಕರ್ ಪ್ರಶಸ್ತಿ ಪಡೆದಿದ್ದರು. ಎರಡನೇ ಬಾರಿಗೆ ಮತ್ತೆ ರೆಹಮಾನ್ ಹೆಸರು ಕೇಳಿ ಬಂದಿದೆ.
89ನೇ ಅಕಾಡೆಮಿ ಪ್ರಶಸ್ತಿ ಸಾಲಿನಲ್ಲಿ 145 ಮಂದಿ ನಾಮ ನಿರ್ದೇಶನದಲ್ಲಿ ಮೂಲ ಹಾಡುಗಳ ವಿಭಾಗದಲ್ಲಿ ರೆಹಮಾನ್ ಹೆಸರು ಕೂಡ ನಾಮ ನಿರ್ದೇಶನಗೊಂಡಿದೆ.
ಜನವರಿ 24 ರಂದು ನಡೆಯುವ ಕಾರ್ಯಕ್ರಮದಲ್ಲಿ ಅಂತಿಮ ನಾಮನಿರ್ದೇಶನ ನಡೆಯುವುದು.ಫೆಬ್ರವರಿ 26 ರಂದು ಹೈಲ್ಯಾಂಡ್ ಹಾಲಿವುಡ್ ಸೆಂಟರ್ ನ ಡೋಲ್ಬಿ ಥಿಯೇಟರ್ ನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.