ಎಸ್ಎಸ್ ರಾಜಮೌಳಿ-ಆಮೀರ್ ಖಾನ್
ತೆಲುಗಿನ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ಕನಸಿನ ಯೋಜನೆ ಭಾರತದ ಮಹಾಕಾವ್ಯ ಮಹಾಭಾರತ ಚಿತ್ರವನ್ನು ನಿರ್ದೇಶಿಸುವುದೇ ಆದರೆ ಆ ಚಿತ್ರದಲ್ಲಿ ಕೃಷ್ಣ ಅಥವಾ ಕರ್ಣನ ಪಾತ್ರದಲ್ಲಿ ಅಭಿನಯಿಸುವ ಆಸೆ ಇದೆ ಎಂದು ಬಾಲಿವುಡ್ ನಟ ಆಮೀರ್ ಖಾನ್ ಹೇಳಿದ್ದಾರೆ.
ಆಮೀರ್ ಖಾನ್ ನಟನೆಯ ಹಿಂದಿಯ ದಂಗಾಲ್ ಚಿತ್ರ ತೆಲುಗಿನಲ್ಲಿ ಡಬ್ ಆಗುತ್ತಿದ್ದು ಈ ಚಿತ್ರದ ಡಿಸೆಂಬರ್ 23ರಂದು ಆಂಧ್ರಪ್ರದೇಶದಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದ ಪ್ರಚಾರಕ್ಕಾಗಿ ಹೈದರಾಬಾದ್ ಗೆ ಬಂದಿರುವ ಆಮೀರ್ ಖಾನ್ ಪತ್ರಕರ್ತರ ಜತೆ ಮಾಡನಾಡುತ್ತಾ ಮಹಾಭಾರತದ ಕೃಷ್ಣ ಅಥವಾ ಕರ್ಣನ ಪಾತ್ರದಲ್ಲಿ ಅಭಿನಯಿಸುವ ಆಸೆ ಇದೆ. ಅದರಲ್ಲೂ ಕೃಷ್ಣನ ಪಾತ್ರದಲ್ಲಿ ಅಭಿನಯಿಸಲು ಹೆಚ್ಚು ಹಂಬಲವಿದೆ ಎಂದರು.
ಇದೇ ವೇಳೆ ಟಾಲಿವುಡ್ ನ ಮೆಗಾಸ್ಟಾರ್ ಚಿರಂಜೀವಿ ಉತ್ತಮ ನಟ ಎಂದಿರುವ ಆಮೀರ್ ಅವಕಾಶ ಸಿಕ್ಕರೆ ಪವರ್ ಸ್ಟಾರ್ ಪವನ್ ಕಲ್ಯಾಣ ಅವರೊಂದಿಗೆ ಅಭಿನಯಿಸುವೇ ಎಂದು ಹೇಳಿದ್ದಾರೆ.
ದಂಗಾಲ್ ಚಿತ್ರದಲ್ಲಿ ಭಾರತದ ಕುಸ್ತಿಪಟು ಮಹಾವೀರ್ ಸಿಂಗ್ ಪೋಗಾಟ್ ಪಾತ್ರದಲ್ಲಿ ಆಮೀರ್ ಖಾನ್ ನಟಿಸಿದ್ದಾರೆ. ಆಮೀರ್ ಖಾನ್ ತಮ್ಮ ಪುತ್ರಿಯರನ್ನು ಕುಸ್ತಿಪಟುವನ್ನಾಗಿ ಮಾಡುವ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಮಹಾವೀರ್ ಪುತ್ರಿಯರಾದ ಬಬಿತ ಪೋಗಾಟ್ ಮತ್ತು ಗೀತಾ ಪೋಗಾಟ್ ಪಾತ್ರದಲ್ಲಿ ಸಾನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನ ಶೇಖ್ ಅಭಿನಯಿಸಿದ್ದಾರೆ. ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶಿಸಿದ್ದಾರೆ.