ಮುಂಬೈ: ಬಾಲಿವುಡ್ ನ ಬಹುಬೇಡಿಕೆಯ ನಟಿ ದೀಪಿಕಾ ಪಡುಕೋಣೆ, ಹಾಲಿವುಡ್ ನಲ್ಲಿ ಪಾದಾರ್ಪಣೆ ಮಾಡಿರುವ 'xXx : ರಿಟರ್ನ್ ಆಫ್ ಕ್ಸಾಂಡರ್ ಕೇಜ್' ವಿಶ್ವದೆಲ್ಲೆಡೆಗಿಂತ ಮೊದಲು ಭಾರತದಲ್ಲಿ ಬಿಡುಗಡೆಯಾಗಲಿದೆ. ಮುಂದಿನ ವರ್ಷ ಜನವರಿ ೧೪ ರಂದು ಈ ಸಿನೆಮಾ ತೆರೆ ಕಾಣಲಿದೆ.
"xXx : ರಿಟರ್ನ್ ಆಫ್ ಕ್ಸಾಂಡರ್ ಕೇಜ್' ಮೊದಲು ಭಾರತದಲ್ಲಿ ಬಿಡುಗಡೆಯಾಲಿದೆ ಎಂದು ಘೋಷಿಸುವುದಕ್ಕೆ ಥ್ರಿಲ್ ಆಗಿದ್ದೇನೆ! ವಿಶ್ವದೆಲ್ಲೆಡೆ ಬಿಡುಗಡೆಯಾಗುವುದಕ್ಕೆ ಮೊದಲು! ಜನವರಿ ೧೪ ರಂದು" ಎಂದು ದೀಪಿಕಾ ಬುಧವಾರ ಟ್ವೀಟ್ ಮಾಡಿದ್ದಾರೆ.
ಈ ಅಂತಾರಾಷ್ಟ್ರೀಯ ಸಿನೆಮಾದಲ್ಲಿ ನಟಿ, ಸೆರೆನಾ ಉಂಗರ್ ಹೆಸರಿನ ಪಾತ್ರದಲ್ಲಿ ನಟಿಸಿದ್ದು, ಹಾಲಿವುಡ್ ನ ಖ್ಯಾತ ನಟ ವಿನ್ ಡೀಸೆಲ್ ನಾಯಕ ನಟ.
ಡಿಜೆ ಕಾರುಸೋ ನಿರ್ದೇಶಿಸರುವ 'xXx : ರಿಟರ್ನ್ ಆಫ್ ಕ್ಸಾಂಡರ್ ಕೇಜ್', ೨೦೦೨ ರಲ್ಲಿ ಬಿಡುಗಡೆಯಾದ 'xXx ' ಮತ್ತು ೨೦೦೫ ರಲ್ಲಿ ಬಿಡುಗಡೆಯಾದ 'xXx : ಸ್ಟೇಟ್ ಆಫ್ ಯೂನಿಯನ್' ಸಿನೆಮಾ ಸರಣಿಗಳ ಮುಂದಿನ ಭಾಗ. ಈ ಸಿನೆಮಾದಲ್ಲಿ ರೂಬಿ ಜೋಸ್, ಸ್ಯಾಮ್ಯುಯೆಲ್ ಎಲ್ ಜಾಕ್ಸನ್, ಡಾನ್ನಿ ಯೆನ್ ಮತ್ತು ಟೋನಿ ಜಾ ಕೂಡ ನಟಿಸಿದ್ದಾರೆ.