ಅಮೀರ್ ಖಾನ್ ನೂತನ ರಾಜ್ ಕಪೂರ್: ರಿಷಿ ಕಪೂರ್
ಇತ್ತೀಚಿಗೆ ಬಿಡುಗಡೆಯಾದ ಅಮೀರ್ ಖಾನ್ ಅವರ 'ದಂಗಲ್' ಸಿನೆಮಾವನ್ನು ಪ್ರಶಂಸಿಸಿರುವ ಹಿರಿಯ ನಟ ರಿಷಿ ಕಪೂರ್, ಅವರನ್ನು ನೂತನ 'ರಾಜ್ ಕಪೂರ್' ಎಂದಿದ್ದಾರೆ.
ಮುಂಬೈ: ಇತ್ತೀಚಿಗೆ ಬಿಡುಗಡೆಯಾದ ಅಮೀರ್ ಖಾನ್ ಅವರ 'ದಂಗಲ್' ಸಿನೆಮಾವನ್ನು ಪ್ರಶಂಸಿಸಿರುವ ಹಿರಿಯ ನಟ ರಿಷಿ ಕಪೂರ್, ಅವರನ್ನು ನೂತನ 'ರಾಜ್ ಕಪೂರ್' ಎಂದಿದ್ದಾರೆ.
ಕುಸ್ತಿ ಪಟು ಮಹಾವೀರ್ ಸಿಂಗ್ ಪೊಘಾಟ್ ಅವರ ಜೀವನಾಧಾರಿತ ಸಿನೆಮಾ 'ದಂಗಲ್' ಡಿಸೆಂಬರ್ ೨೩ ರಂದು ಬಿಡುಗಡೆಯಾಗಿತ್ತು ಮತ್ತು ಮೊದಲ ಮೂರೂ ದಿನಗಳಲ್ಲೇ ೧೦೦ ಕೋಟಿಗಿಂತಲೂ ಹೆಚ್ಚು ಗಳಿಸಿತ್ತು.
ಅಮೀರ್ ಖಾನ್ ಅವರನ್ನು ಪ್ರಶಂಸಿಸಲು ಟ್ವಿಟ್ಟರ್ ಮೊರೆ ಹೋಗಿರುವ ರಿಷಿ ಕಪೂರ್, ಅವರನ್ನು ತಮ್ಮ ತಂದೆ-ಬಾಲಿವುಡ್ ದಂತಕತೆ ದಿವಂಗತ ರಾಜ್ ಕಪೂರ್ ಅವರಿಗೆ ಹೋಲಿಸಿದ್ದಾರೆ.
"ಅಮೀರ್ ಖಾನ್, ದಂಗಲ್ ನೋಡಿದೆ. ನನಗೆ ನೀವು ನೂತನ ರಾಜ್ ಕಪೂರ್ - ನಟ, ನಿರ್ದೇಶಕ, ನಿರ್ಮಾಪಕ, ನಮ್ಮ ಸಮಯದ ಷೋಮ್ಯಾನ್, ನಿಜವಾಗಿಯೂ ಅದ್ಭುತ. ನಿಮಗೆ ದೇವರು ಒಳ್ಳೆಯದು ಮಾಡಲಿ" ಎಂದು ರಿಷಿ ಟ್ವೀಟ್ ಮಾಡಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನದ 'ದಂಗಲ್' ಈಗಾಗಲೇ ೨೦೦ ಕೋಟಿಗಿಂತಲೂ ಹೆಚ್ಚು ಗಳಿಕೆ ಕಂಡಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.