ಬಾಲಿವಿಡ್ ಸ್ಟಾರ್ ಅಭಿಷೇಕ್ ಬಚ್ಚನ್ 
ಬಾಲಿವುಡ್

ತಮ್ಮ ನಟನೆಗಾಗಿ ೧೦೦ಕ್ಕೆ ೧೦ ಅಂಕ ನೀಡಿದ ಅಭಿಷೇಕ್ ಬಚ್ಚನ್

ಸ್ಟಾರ್ ನಟನ ಪುತ್ರನಾಗಿ, ತಾವೇ ಬಾಲಿವಿಡ್ ನ ಪ್ರಖ್ಯಾತ ಸ್ಟಾರ್ ಆಗಿದ್ದೂ, ೦ ಯಿಂದ ನೂರರ ಅಳತೆ ಮಾಪನದಲ್ಲಿ ತನ್ನ ನಟನೆಗಾಗಿ ಸಿಗುವ ಅಂಕ ೧೦ ಕ್ಕೂ ಕಡಿಮೆ

ಕರಾಚಿ: ಸ್ಟಾರ್ ನಟನ ಪುತ್ರನಾಗಿ, ತಾವೇ ಬಾಲಿವಿಡ್ ನ ಪ್ರಖ್ಯಾತ ಸ್ಟಾರ್ ಆಗಿದ್ದೂ, ೦ ಯಿಂದ ನೂರರ ಅಳತೆ ಮಾಪನದಲ್ಲಿ ತನ್ನ ನಟನೆಗಾಗಿ ಸಿಗುವ ಅಂಕ ೧೦ ಕ್ಕೂ ಕಡಿಮೆ ಎಂದಿರುವ ಅಭಿಷೇಕ್ ಬಚ್ಚನ್, ಇನ್ನು ಬಹಳಷ್ಟು ಕಲಿಯಬೇಕಿದೆ ಎಂದಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ೪೦ ವರ್ಷದ ನಟ, ನನ್ನ ನಟನೆಗೆ ೧೦೦ಕ್ಕೆ ೯ ರಿಂದ ೧೦ ಅಂಕ ಸಿಗುತ್ತದೆ. ಇದು ನಾನು ಅತಿ ವಿನಯ ಎಂದು ತೋರಿಸಿಕೊಳ್ಳಲು ಹೇಳುತ್ತಿರುವುದೇನಿಲ್ಲ ಎಂದಿದ್ದಾರೆ ಎಂದು ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ಮಣಿರತ್ನಂ ಅವರ 'ಗುರು' ಸಿನೆಮಾದ ನಟ "ಅಷ್ಟು ಸಾಕಾಗುವುದಿಲ್ಲ. ಇಂದಿನ ದಿನಗಳಲ್ಲಿ ಹೊಸ ನಟನಿಂದ ೮೦-೯೦ ರಷ್ಟು ಅಂಕ ಬರುವ ನಟನೆಯನ್ನು ಜನ ನಿರೀಕ್ಷಿಸುತ್ತಾರೆ. ಅದರಲ್ಲಿ ತಪ್ಪೇನಿದೆ? ನನ್ನ ಪೋಷಕರಿಂದ ಅನ್ನಗೆ ನನಗೆ ಅವಕಾಶ ಸಿಕ್ಕಿದೆ" ಎಂದಿದ್ದಾರೆ.

ಚಿತ್ರರಂಗದಲ್ಲಿ ತಮ್ಮ ಪಯಣದ ಬಗ್ಗೆ ಮಾತನಾಡಿರುವ ಅವರು "ಬಾಕ್ಸ್ ಆಫೀಸಿನಲ್ಲಿ ನನ್ನ ಸಿನೆಮಾಗಳ ಗತಿ ಏನಾದರು, ನಾನು ನಟಿಸಿರುವ ಎಲ್ಲ ಸಿನೆಮಾಗಳಿಂದಲೂ ಸಂತಸ ಪಟ್ಟಿದ್ದೇನೆ. ನನ್ನ ಸಿನೆಮಾಗಳ ಜೊತೆಗೆ ಎಂದೆಂದೂ ನಿಲ್ಲುತ್ತೇನೆ" ಎಂದಿದ್ದಾರೆ.

ಯಾವಾಗಲು ಸರಿಯಾದ ಪಾತ್ರಗಳ ಶೋಧನೆಯಲ್ಲಿ ತೊಡಗಿರುತ್ತೇನೆ ಎಂದು ಹೇಳಿಕೊಂಡಿರುವ ಅಭಿಷೇಕ್, ನಟನಾಗಿ ನಿಧಾನವಾಗಿ ತಮ್ಮನ್ನು ತಾವು ಕಂಡುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ರಿಷಿ ಕಪೂರ್ ನಟಿಸಿದ್ದ 'ಆಲ್ ಇಸ್ ವೆಲ್' ಸಿನೆಮಾದಲ್ಲಿ ಅಭಿಷೇಕ್ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT