ಬಾಲಿವುಡ್ ನಟ ಹೃತಿಕ್ ರೋಷನ್ 42ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಮುಂಬೈನ ವರ್ಲಿಯ ಫೋರ್ ಸೀಜನ್ಸ್ ಹೊಟೇಲ್‌ನಲ್ಲಿ ಹೃತಿಕ್ ಅದ್ದೂರಿ ಪಾರ್ಟಿ ಅರೆಂಜ್ ಮಾಡಿದ್ದರು. ಈ ಪಾರ್ಟಿಯಲ್ಲಿ ರಾತ್ರಿ 10 ಗಂಟೆ ನಂತರವೂ ಹಾಡು ಕುಣಿತ ಇತ್ತು.
ಪಾರ್ಟಿಯಲ್ಲಿ ಬಾಲಿವುಡ್ ನ ಹಲವು ಸೆಲಬ್ರಿಟಿಗಳು ಹಾಜರಿದ್ದರು. ಹೃತಿಕ್ ಗೆಳೆಯ ಗೆಳತಿಯರು ಸಿಕ್ಕಾಪಟ್ಟೆ ಸೌಂಡ್ ಇಟ್ಕೊಂಡು ಡ್ಯಾನ್ಸ್ ಮಾಡಿದ್ದರು. ಇದನ್ನು ಗಮನಿಸಿದ ವ್ಯಕ್ತಿಯೋರ್ವ ಪೊಲೀಸರಿಗೆ ದೂರು ಕೊಟ್ಟಿದ್ದ .
ತಡವಾಗಿ ಹೊಟೇಲ್ ಗೆ ಆಗಮಿಸಿದ ಪೊಲೀಸರು ಮಧ್ಯರಾತ್ರಿ 1 ಗಂಟೆ ಹೊತ್ತಲ್ಲಿ ಹೊಟೇಲ್‌ಗೆ ಬಂದು ಹೊಟೇಲ್ ಮ್ಯಾನೇಜರ್‌ಗೆ 25 ಸಾವಿರ ದಂಡ ವಿಧಿಸಿದರು. ಹೊಟೇಲ್ ಮಾಲೀಕರು ಹೃತಿಕ್‌ಗೆ 25 ಸಾವಿರ ದಂಡ ಪಾವತಿಸುವಂತೆ ಸೂಚಿಸಿದ್ದಾರೆ.