ನಟಿ ಕರೀಷ್ಮಾ ಕಪೂರ್ ಅವರು ಹಣದ ಆಸೆಯಿಂದಾಗಿ ನನ್ನನ್ನು ವಿವಾಹವಾಗಿದ್ದರು ಎಂದು ಆಕೆಯ ಪತಿ ಸಂಜಯ ಕಪೂರ್ ಅವರು ವಿಚ್ಛೇದನ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ವಿಚ್ಛೇದನಕ್ಕಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿರುವ ಅವರು, 'ಕರೀಷ್ಮಾ ತಮ್ಮ ಇಬ್ಬರು ಮಕ್ಕಳನ್ನು ಮುಂದಿಟ್ಟುಕೊಂಡು ತಮಗೆ ಕಿರುಕುಳ ನೀಡುತ್ತಿದ್ದಾರೆ. ಹಣಕ್ಕಾಗಿ ಮಕ್ಕಳನ್ನು ದಾಳಗಳಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮಕ್ಕಳು ತಮ್ಮ ಕುಟುಂಬದವರನ್ನು ಭೇಟಿಯಾಗದಂತೆ ತಡೆಯುತ್ತಿದ್ದಾರೆ. ಪತ್ನಿಯಾಗಿ, ಸೊಸೆಯಾಗಿ ಅಷ್ಟೇ ಅಲ್ಲ, ತಾಯಿಯಾಗಿಯೂ ಅವರು ಸೋತಿದ್ದಾರೆ' ಎಂದು ಹೇಳಿದ್ದಾರೆ
ಕಳೆದ ಐದು ವರ್ಷಗಳಿಂದ ಕರೀಷ್ಮಾ ಹಾಗೂ ಸಂಜಯ್ ಕಪೂರ್ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಹಣಕ್ಕಾಗಿ ಕರೀಷ್ಮಾ ಮದುವೆಯಾದರು ಎಂಬ ಆರೋಪಗಳನ್ನು ಕರೀಷ್ಮಾ ಪರ ವಕೀಲರು ನಿರಾಕರಿಸಿದ್ದಾರೆ.