ಆಸಿನ್ - ರಾಹುಲ್ ಶರ್ಮಾ 
ಬಾಲಿವುಡ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಆಸಿನ್

2008ರಲ್ಲಿ ತೆರೆಕಂಡ ಘಜನಿ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದ ದಕ್ಷಿಣ ಭಾರತದ ಖ್ಯಾತ ನಟಿ, ಮಲೆಯಾಳಿ ಬೆಡಗಿ ಆಸಿನ್ ತೊಟ್ಟುಮಾಕಳ್‌ ಅವರು...

ನವದೆಹಲಿ: 2008ರಲ್ಲಿ ತೆರೆಕಂಡ ಘಜನಿ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದ ದಕ್ಷಿಣ ಭಾರತದ ಖ್ಯಾತ ನಟಿ, ಮಲೆಯಾಳಿ ಬೆಡಗಿ ಆಸಿನ್ ತೊಟ್ಟುಮಾಕಳ್‌ ಅವರು ಮೈಕ್ರೋಮ್ಯಾಕ್ಸ್‌ ಕಂಪನಿಯ ಸಹ ಸಂಸ್ಥಾಪಕ ರಾಹುಲ್‌ ಶರ್ಮಾ ಅವರೊಂದಿಗೆ ಮಂಗಳವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇಂದು ದೆಹಲಿಯ ರೆಸಾರ್ಟ್‌ವೊಂದರಲ್ಲಿ ಆಸೀನ್‌ ಮತ್ತು ರಾಹುಲ್‌ ಕ್ರೈಸ್ತ ಸಂಪ್ರದಾಯದಂತೆ ವಿವಾಹವಾದರು. ಕುಟುಂಬ ಸದಸ್ಯರು ಹಾಗೂ ಕೆಲವು ಆಪ್ತ ಸ್ನೇಹಿತರು ಮಾತ್ರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರು.
ಕಳೆದ ಕೆಲವು ವರ್ಷಗಳಿಂದ ರಾಹುಲ್ ಹಾಗೂ ಆಸಿನ್ ಪರಸ್ಪರ ಪ್ರೀತಿಸುತ್ತಿದ್ದು, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದಾರೆ.
30 ವರ್ಷ ವಯಸ್ಸಿನ ಆಸೀನ್‌ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ನಟಿಸಿದ್ದ ‘ಗಜನಿ’ ಜನಪ್ರಿಯ ಚಿತ್ರವಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict: ದೇಶದ ಮೇಲೆ ಯುದ್ಧದ ಪರಿಣಾಮ ತಗ್ಗಿಸಲು ಕೇಂದ್ರ ಸಜ್ಜು; ಪ್ರಧಾನಿ ಮೋದಿ ಮಹತ್ವದ ಸಭೆ, LPG-LNG ಲಭ್ಯತೆ ಖಚಿತಪಡಿಸಲು ಖಡಕ್ ಸೂಚನೆ

'13 ರೂ. ಮೌಲ್ಯದ ಚೀಲಗಳನ್ನು 52 ರೂ.ಗೆ ಖರೀದಿ’: IAS ಅಧಿಕಾರಿ ರೋಹಿಣಿ ಸಿಂಧೂರಿಗೆ ಹೈಕೋರ್ಟ್ ಶಾಕ್, ತನಿಖೆಗೆ ಅನುಮತಿ

SSLC ಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್: ಸರ್ಕಾರದ ನಿರ್ಧಾರ ವಿರುದ್ಧ ಹೈಕೋರ್ಟ್ ಗೆ ಅರ್ಜಿ

ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾದ ಬೆಂಗಳೂರು: ಧರ್ಮರಾಯಸ್ವಾಮಿ ದೇವಸ್ಥಾನದಿಂದ ವೈಭವದ ಕರಗ ಆರಂಭ, ಲಕ್ಷಾಂತರ ಭಕ್ತರು ಸಾಕ್ಷಿ

Iran ನಲ್ಲಿ ಕೊನೆಗೂ ಆಡಳಿತ ಬದಲಾವಣೆ! ಅಮೆರಿಕ, ಇಸ್ರೇಲ್ ಬಯಸಿದ್ದೇ ಒಂದು, ಆಗಿದ್ದು ಇನ್ನೊಂದು!

SCROLL FOR NEXT