ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಾಲಿವುಡ್

ಭಾರತದಲ್ಲಿ ಹುಟ್ಟಿದ್ದೇನೆ, ಇಲ್ಲೇ ಸಾಯುತ್ತೇನೆ: ಅಮೀರ್ ಖಾನ್

ಯಾವುದೇ ಕಾರಣಕ್ಕೂ ಭಾರತ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ, ನಾನು ಹುಟ್ಟಿರುವುದು ಇಲ್ಲೇ, ಹಾಗಾಗಿ ನಾನು ಸಾಯುವುದೂ ಇಲ್ಲೇ, ತಮಗೆ ಯಾವತ್ತೂ ದೇಶ ...

ಅಮೀರ್ ಖಾನ್
Shilpa D
Updated On : 26 Jan 2016, 2:12 am

ಮುಂಬಯಿ: ಯಾವುದೇ ಕಾರಣಕ್ಕೂ  ಭಾರತ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ, ನಾನು ಹುಟ್ಟಿರುವುದು ಇಲ್ಲೇ, ಹಾಗಾಗಿ ನಾನು ಸಾಯುವುದೂ ಇಲ್ಲೇ, ತಮಗೆ ಯಾವತ್ತೂ ದೇಶ ಬಿಟ್ಟು ಹೋಗವ ಬಗ್ಗೆ ಯೋಚಿಸಿಲ್ಲ ಎಂದು ಆಮೀರ್ ಖಾನ್ ಸ್ಪಷ್ಟನೆ ನೀಡಿದ್ದಾರೆ..

ಭಾರತದಲ್ಲಿರುವ ವೈವಿಧ್ಯತೆ ಬೇರೆ ಯಾವ ರಾಷ್ಟ್ರದಲ್ಲೂ ಇಲ್ಲ. ನಾನು ಹುಟ್ಟಿರುವುದು ಇಲ್ಲೇ... ಸಾಯುವುದೂ ಇಲ್ಲೇ.. ಎಂದು ಪುನರುಚ್ಛರಿಸಿದರು.

'ಪ್ರತಿ ರಾಷ್ಟ್ರದಲ್ಲೂ ಏರಿಳಿತಗಳು ಇರುತ್ತವೆ. ಇದಕ್ಕೆಲ್ಲಾ ನೇರ ಮತ್ತು ದಿಟ್ಟ ಹೇಳಿಕೆಗಳನ್ನು ಯಾರೊಬ್ಬರೂ ನೀಡುವಂತಾಗಬಾರದು,' ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ನೀಡಿದ ಹೇಳಿಕೆ ನಂತರ ಆಮೀರ್ ಖಾನ್ ಹೇಳಿಕೆ ವಿರುದ್ಧ ಹೊಸ ಟೀಕೆಗಳು ಬರುತ್ತಿವೆ, ಈ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.

ಭಾರತದಲ್ಲಿ ಹಲವು ಭಾಷೆ, ಹಲವು ವೈವಿಧ್ಯತೆ ಇದೆ. ನಾನು ಹೊರರಾಷ್ಟ್ರಗಳಿಗೆ ಹೋದರೆ ಎರಡು ವಾರಕ್ಕಿಂತ ಹೆಚ್ಚಿಗೆ ಇರಲಾರೆ. ನನಗೆ ನನ್ನ ದೇಶವೇ ಶ್ರೇಷ್ಠ ಎಂದು ಅವರು ಹೇಳಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments