ತಂದೆ ಸಲೀಮ್ ಖಾನ್ ಅವರೊಂದಿಗೆ ಸಲ್ಮಾನ್ ಖಾನ್ (ಸಂಗ್ರಹ ಚಿತ್ರ)
ಮುಂಬೈ: ಸಾಲು ಸಾಲು ವಾಣಿಜ್ಯಾತ್ಮಕ ಯಶಸ್ವಿ ಸಿನೆಮಾಗಳನ್ನು ನೀಡುತ್ತಿರುವ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ತಂದೆ ಸಲೀಮ್ ಖಾನ್ ಅತಿ ದೊಡ್ಡ ವಿಮರ್ಶಕ ಎಂದಿದ್ದಾರೆ.
ನಿಮ್ಮ ಅತಿ ದೊಡ್ಡ ವಿಮರ್ಶಕ ಯಾರು ಎಂಬ ಪ್ರಶ್ನೆಗೆ "ನನ್ನ ಅಪ್ಪ ನನ್ನ ಅತಿ ದೊಡ್ಡ ವಿಮರ್ಶಕ ಆದುದರಿಂದ ಅವರ ಪ್ರತಿಕ್ರಿಯೆ ಹೆಚ್ಚು ಮುಖ್ಯ. ಅವರು ಹಿಂದಿರುಗಿ (ಸಿನೆಮಾ ನೋಡಿ ಬಂದು) ಎಲ್ಲವನ್ನು ಮರೆತು ಮಲಗುವಂತೆ ಹೇಳುತ್ತಾರೆ. ಕೆಲವೊಮ್ಮೆ ಸದ್ಯದ ನೆಮಾ ಮರೆತು ಮುಂದಿನ ಸಿನೆಮಾಗೆ ಹೆಚ್ಚು ಶ್ರಮ ಹಾಕು ಎನ್ನುತ್ತಾರೆ" ಎಂದಿದ್ದಾರೆ ಸಲ್ಮಾನ್ ಖಾನ್.
ನಿಮ್ಮ ತಂದೆ ನಿಮಗೆ ಯಾವುದಾದರೂ ಸ್ಕ್ರಿಪ್ಟ್ ಬರೆಯುತ್ತಿದ್ದಾರೆಯೇ ಎಂಬ ಪ್ರಶ್ನೆಗೆ "ನನ್ನ ತಂದೆ ಈಗ ಸದ್ಯಕ್ಕೆ ಲೇಖನಗಳನ್ನು ಬರೆಯುತ್ತಿದ್ದಾರೆ, ಅವರು ಟ್ವೀಟ್ ಮಾಡುತ್ತಿದ್ದಾರೆ ಮತ್ತು ಅವರು ಅದ್ಭುತ..." ಎಂದಿದ್ದಾರೆ ಸಲ್ಮಾನ್.
ಹಲವು ವರ್ಷಗಳಿಂದ ತಾವು ಆಯ್ಕೆ ಮಾಡಿಕೊಳ್ಳುತ್ತಿರುವ ಸಿನೆಮಾಗಳ ಬಗ್ಗೆ ಹೆಚ್ಚು ಎಚ್ಚರದಿಂದಿರುವುದಾಗಿ ತಿಳಿಸುವ ಸಲ್ಮಾನ್ "ನಾನು ಇತ್ತೀಚಿಗೆ ಹೆಚ್ಚು ಎಚ್ಚರದಿಂದ ಆಯ್ಕೆ ಮಾಡಿಕೊಳ್ಳುತ್ತೇನೆ. ನಾನು ಈ ಹಿಂದೆ ಮಾಡುತ್ತಿದ್ದ ಸಂಖ್ಯೆಯಷ್ಟು ಸಿನೆಮಾಗಳನ್ನು ಈಗ ಮಾಡುತ್ತಿಲ್ಲ ಏಕೆಂದರೆ ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ" ಎಂದಿದ್ದಾರೆ.