ದೀಪಿಕಾ ಪಡುಕೋಣೆ ಮೇಲೆ ಕರೀನಾ ಕಪೂರ್ ಸಿಟ್ಟು?
ನಟಿ ಕರೀನಾ ಕಪೂರ್ ದೀಪಿಕಾ ಪಡುಕೋಣೆ ಮೇಲೆ ಸಿಟ್ಟಾಗಿದ್ದಾರೆ. ದೀಪಿಕಾ ಮೇಲೆ ಕರೀನಾ ಅಸಮಾಧಾನಗೊಂಡಿದ್ದಾರೆ.
ನವದೆಹಲಿ: ನಟಿ ಕರೀನಾ ಕಪೂರ್ ದೀಪಿಕಾ ಪಡುಕೋಣೆ ಮೇಲೆ ಸಿಟ್ಟಾಗಿದ್ದಾರೆ. ದೀಪಿಕಾ ಮೇಲೆ ಕರೀನಾ ಅಸಮಾಧಾನ ಗೊಂಡಿದ್ದಾರೆ.
ನನಗೆ ನಿಶ್ಚಿತಾರ್ಥವಾಗಿಲ್ಲ, ನನಗೆ ಮದುವೆಯಾಗಿಲ್ಲ, ನಾನು ಗರ್ಭಿಣಿಯಲ್ಲ ಎಂದು ದೀಪಿಕಾ ಹೇಳಿಕೆ ನೀಡಿದ್ದರು. ಕೆಲ ಕಾರಣಗಳಿಂದ ಈ ಹೇಳಿಕೆ ಕರೀನಾ ಕಪೂರ್ ಮೇಲೆ ಪರಿಣಾಮ ಬೀರಿದೆಯಂತೆ.
ದೀಪಿಕಾ ತಮ್ಮ ಮದುವೆ ಹಾಗೂ ಎಂಗೇಜ್ಮೆಂಟ್ ಕುರಿತಂತೆ ಸ್ಪಷ್ಟನೆ ನೀಡಿದ್ದರು. ಆದರೆ ಯಾರೋಬ್ಬರು ದೀಪಿಕಾಗೆ ಗರ್ಭಿಣಿಯಾ ಎಂದು ಪ್ರಶ್ನಿಸಿರಲಿಲ್ಲ, ಆಗಿದ್ದೂ ದೀಪಿಕಾ ಹಾಗೆ ಹೇಳಿರುವುದರ ಅರ್ಥ ಏನು ಎಂದು ಕರೀನಾ ತಲೆ ಕೆಡಿಸಿಕೊಂಡಿದ್ದಾರಂತೆ.
ಇತ್ತ ಕರೀನಾ ಕೂಡ ತಮ್ಮ ಮುಂಬರುವ ಚಿತ್ರದ ಶೂಟಿಂಗ್ನಲ್ಲಿ ಬ್ಯೂಸಿ ಇದ್ದಾರೆ. ಕರೀನಾ ಮತ್ತು ಸೈಫ್ ಆಲಿಖಾನ್ ದಂಪತಿ ಡಿಸೆಂಬರ್ ನಲ್ಲಿ ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.